೧೮೩ ಅಧ್ಯಾ. ೩೦.] ದಶಮಸ್ಕಂಧವು. ಭುಜದಮೇಲೆ ಕುಳ್ಳಿರು”ಎಂದು ಹೇಳಿ ಬಗ್ಗಿ ನಿಂತನು ಅವಳು ತನ್ನ ಭುಜ ವನ್ನೇರಿ ಕುಳಿತುಕೊಳ್ಳುವಷ್ಟರಲ್ಲಿ, ಮಾಯೆಯಿಂದ ಕಣ್ಮರೆಯಾದನು. ಆಗ ಆ ಸ್ತ್ರೀಯ ಪರಿತಾಪವನ್ನು ಕೇಳಬೇಕೆ? ಕಾಡಿನಲ್ಲಿ ಒಂಟಿಯಾಗಿ ಸಿಕ್ಕಿ ಬಿದ್ದ ಆ ಗೋಪಿಯು, ಅತಿಶೋಕದಿಂದ ಅಯ್ಯೋ! ಇನ್ನೇನುಗತಿ' ನಾಥಾ' ಹಾ ರಮಣಾ ! ನಾನು ನಿನ್ನನ್ನೇ ಎಲ್ಲಕ್ಕಿಂತಲೂ ಪ್ರಿಯತಮನೆಂದು ನಂಬಿ ಬಂ ದೆನಲ್ಲಾ! ಓ ಮಹಾಭುಜಾ!ಎಲ್ಲಿರುವೆ? ನಾನು ನಿನ್ನ ದಾಸಿಯಲ್ಲವೆ? ನೀನ ಳಾದ ನನಗೆ ದರ್ಶನವನ್ನು ಕೊಡು !” ಎಂದು ಗಟ್ಟಿಯಾಗಿ ಕೂಗಿ ಮೊರೆ ಯಿಡುತಿದ್ದಳು. ಇಷ್ಟರಲ್ಲಿ ಇತ್ತಲಾಗಿ ಕೃಷ್ಣನನ್ನು ಹುಡುಕುತ್ತ ಬರುತಿ ಷ್ಣ ಸುತ್ತಿರುವ ಆ ಸ್ತ್ರೀಯನ್ನು ಕಂಡರು, ಅವರೆಲ್ಲರೂ ಆಕೆಯ ದುಃಖಕಾರಣ ವೇನೆಂದು ವಿಚಾರಿಸಿದಾಗ, ಅವಳು ಮೊದಲು ತನ್ನಲ್ಲಿ ಕೃಷ್ಣನು ತೋರಿಸಿ ದ ಆಸಾಧಾರಣಪ್ರೀತಿಯನ್ನೂ, ಅದರಿಂದ ತನಗೆ ಗವುಂಟಾದುದನ್ನೂ, ಕೃಷ್ಣನು ಅದನ್ನು ತಿಳಿದು,ಒಡನೆಯೇ ತನ್ನನ್ನು ವಂಚಿಸಿ ಹೋದ ಸಂಗತಿ ಯನ್ನೂ ತಿಳಿಸಿದಳು. ಇದನ್ನು ಕೇಳಿ ಅವರೆಲ್ಲರಿಗೂ ಆಶ್ಚಠ್ಯವುಂಟಾಯಿತು. ಆಮೇಲೆ ಆ ಗೋಪಸಿಯರೆಲ್ಲರೂ, ಅವಳನ್ನೂ ತಮ್ಮೊಡಸಿ ಕರೆ ದುಕೊಂಡು, ಆ ವನವನ್ನೆಲ್ಲಾ ಹುಡುಕುತಿದ್ದರು ಇಷ್ಟರಲ್ಲಿ ಚಂದ್ರಾಸ್ತ್ರ ಮಯಕಾಲವಾಗಿ, ಕ್ರಮಕ್ರಮವಾಗಿ ಬೆಳೆದಿಂಗಳು ತಗ್ಗು ಬಂದಿತು. ಕತ್ತ ಲೆಯಲ್ಲಿ ಕಣ್ಣು ಕಾಣದಂತಾಯಿತು. ಮುಂದೆ ಹೋಗಲು ಸಾಧ್ಯವಿಲ್ಲದೆ, ಆ ಗೋಪಿಯರೆಲ್ಲರೂ ನಿರಾಶರಾಗಿ ಹಿಂತಿರುಗಿಬಿಟ್ಟರು. ಆದರೇನು?ಆಗಲೂ ಆ ವರು ಕೃಷ್ಣನಲ್ಲಿಯೇ ನಟ್ಟ ಮನಸ್ಸುಳ್ಳವರಾಗಿ, ತನ್ನ ಯತ್ವವನ್ನು ಹೊಂದಿ, ದಂತೆ ಅವನ ನಡೆನುಡಿಗಳನ್ನೂ,ಅವನ ಚೇಷ್ಟೆಗಳನ್ನೂ ಅಭಿನಯಿಸುತ್ತ,ಅವ ನಗುಣಗಳನ್ನೇ ಹಾಡುತ್ತ,ಮೈಮರೆತು, ತಮ್ಮ ಮನೆಮಂದಿಗಳ ಸ್ಮರಣೆಯೇ ಅಲ್ಲದೆ ತಿರುಗಿ ತಾವು ಮೊದಲು ಕೃಷ್ಣನೊಡನೆ ಸೇರಿದ್ದ ಯಮುನಾತೀರದ ಪುಳಿವಪ್ರದೇಶಕ್ಕೆ ಬಂದು ಸೇರಿದರು.ಅಲ್ಲಿ ಎಲ್ಲರೂ ಕಲೆತು,ಕೃತ್ರನು ಯಾ ವಾಗ ಹಿಂತಿರುಗಿಬರುವನೋ ಎಂಬ ಆಶೋತ್ತರದಿಂದ ನಿರೀಕ್ಷಿಸುತ್ತ,ಂವನ ಗುಣಗಳನ್ನು ಗಾನಮಾಡತೊಡಗಿದರು. ಇದುಮೂ ಧಿ ಯವ. 1238
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೭೫
ಗೋಚರ