ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ 2, ಶ್ರೀಮದ್ಭಾಗವತವು [ಅಧ್ಯಾ. ೩೧ ಶಿಲತೃಣಾಲ್ಕುರೈ: ,, ಸೀದತೀತಿ ನ: ಕಲಿಲತಾಂ ಮನ: ಕಾಂತ! ಗಚ್ಛತಿ || ೧೧ || ಕಾಂತಾ ! ನೀನು ಹಸುಗಳನ್ನಟ್ಟಿಕೊಡು ಮಂದೆಯಿಂದ ಹೊರ ರುವಾಗ, ಕಮಲದಂತೆ ಮೃದುವಾದ ನಿನ್ನ ಪಾದಕ್ಕೆ, ಕಾಡಿನಲ್ಲಿ ಹುಲ್ಲು ಕಡ್ಡಿಗಳು ಚುಚ್ಚುವುದರಿಂದ ಎಷ್ಟು ನೋವಾಗುವುದೋ ಎಂದು ನಾವು ಕಳವಳಿಸಿದುದನ್ನು ನೀನು ಕಾಣೆಯಾ ? ಹೀಗೆ ನಿನ್ನಲ್ಲಿ ಎಣೆಯಿಲ್ಲದ ಪ್ರೇಮ ದಿಂದ ಮರುಗುತ್ತಿರುವ ನಮ್ಮನ್ನು ನೀನು ಹೀಗೆ ವಂಚಿಸಿ ಹೋಗಬಹುದೆ? ಏನಪರಿಕ್ಷಯೇ (ಕೃಷ್ಣ) ನೀಲಕುನ್ತಿ: ವನರುಹಾವನಂ ., ಬಿಭ್ರದಾವೃತ ವನರಜಸ್ವಲಂ ', ದರ್ಶಯನ್ನು ಹು: ಮನಸಿ ನರಂ ., ಪೀರ! ಯಚ್ಛತಿ || ೧೨ 11 ಕೃಷ್ಣಾ ! ಸಂಧ್ಯಾಕಾಲದಲ್ಲಿ ನೀನು ಹಸುಗಳನ್ನಟ್ಟಿಕೊಂಡು ಕಾ ಡಿನಿಂದ ಹಿಂತಿರುಗಿ ಬರುವಾಗ,ಕಪ್ಪಾದ ಮುಂಗುರುಳುಗಳಿಂದಲೂ, ಹಸು ಗಳ ಪಾದಧೂಳಿಯಿಂದಲೂ ಕೂಡಿದ ನಿನ್ನ ಮುಖವು, ಭ್ರಮರಪಟ್ಟಿ ಯಿಂದಲೂ, ಪ್ರಷ್ಟರಜಸ್ಸಿನಿಂದಲೂ ಕೂಡಿದ ಕಮಲದಂತೆ ನಮ್ಮ ಮನ ಸ್ಸಿಗೆ ಆನಂದವನ್ನು ಬೀರುತ್ತಿದ್ದಿತು. ಇಂತಹ ಮುಖಸ ಇಂದರದಿಂದ ನಮ್ಮ ಮನಸ್ಸನ್ನಾಕರ್ಷಿಸಿ, ಈಗ ನಮ್ಮನ್ನು ವಂಚಿಸಿಹೋದೆಯಲ್ಲಾ ! ಪ್ರಯತಕಾಮದಂ (ಕೃಷ್ಣ) ಪದ್ಯ ಜಾರಿತಂ ಧರಣಿಮನಂ ,, ಧೈಯಮಾಪದಿ ಚರಕಶಣ್ಮಜಂ , ಶವಮಂಚ ತೇ ರಮಣೆ! ನಸ್ತನೇ , ಹೃರ್ಪಯಾಧಿರ್ಹ || ೧೩ || ಕೃಷ್ಣಾ ! ಮರೆಹೊಕ್ಕವರ ಕೋರಿಕೆಯನ್ನಿಡೇರಿಸತಕ್ಕುದಾಗಿಯೂ * ಬ್ರಹ್ಮಾದಿದೇವತೆಗಳಿಗೂ ಪೂಜ್ಯವಾಗಿಯೂ, ಭೂಮಿಗೆ ಅಲಂಕಾರಭೂತ ವಾಗಿಯೂ, ಆಪತ್ಕಾಲದಲ್ಲಿ ಧ್ಯಾನಿಸಲ್ಪಡತಕ್ಕುದಾಗಿಯೂ, ಸರಸುಖ ಪ್ರದವಾಗಿಯೂ;ಇರುವ ನಿನ್ನ ಪಾದಕಮಲದಿಂದ ನಮ್ಮ ಎದೆಯನ್ನೂ, ನಮ್ಮ ಹೃದಯಸಂತಾಪವನ್ನು ನೀಗಿಸು !