ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೩೪ ಶ್ರೀಮದ್ಭಾಗವತವು [ಅಧ್ಯಾ. ೩೨ ಇದ್ದು ಬಿಡುವರು. ಇಂತವರಿಗೆ ನಿನ್ನನ್ನೇ ನಿದರ್ಶನವೆಂದು ಹೇಳಬಹುದು. ಮೇಲೆಹೇಳಿದ ಈ ಮೂರುಬಗೆಯವರಲ್ಲಿರುವ ಗುಣದೋಷತಾರತಮ್ಯ ವನ್ನು ನಮಗೆ ಚೆನ್ನಾಗಿ ವಿವರಿಸಿತಿಳಿಸಬೇಕು” ಎಂದರು. ಆಗ ಕೃಷ್ಣನು ತನ್ನನ್ನು ಹಂಗಿಸುವುಸುವುದಕ್ಕಾಗಿಯೇ ಅವರು ಈ ಪ್ರಶ್ನೆಯನ್ನು ಮಾಡು ತಿರುವರೆಂದು ತಿಳಿದು, ಅವರನ್ನು ಕುರಿತು (« ಓ ಸಖಿಯರೆ? ಈ ವಿಷಯ ದಲ್ಲಿ ನಾನು ಹೇಳಬೇಕಾದುದೇನು? ಇದು ನಿಮಗೂ ತಿಳಿದ ವಿಷಯವೇ! ತ ಇನ್ನು ಭಜಿಸಿದವರಿಗೆ ಮಾತ್ರ ಅನುಕೂಲರಾಗಿ ನಡೆಯತಕ್ಕವರನ್ನು ಸ್ವ ಪ್ರಯೋಜನಪರರೆಂದೇ ಹೇಳಬೇಕು : ಅದರಲ್ಲಿ ತಾವು ಮತ್ತೊಬ್ಬರಿಂದ ಪಡೆದ ಪ್ರಯೋಜನಕ್ಕೆ ಪ್ರತಿಪ್ರಯೋಜನವನ್ನು ಮಾಡಿದಂತಾಗುವುದೇ ಹೊರತು, ಅದನ್ನು ಸ್ನೇಹವೆಂದಾಗಲಿ, ಧರ್ಮಬುದ್ಧಿಯೆಂದಾಗಲಿ ಹೇಳು ವುದಕ್ಕಿಲ್ಲ ! ಈ ವಿಧವಾದ ಸ್ಪರಾನುಕೂಲ್ಯವು, ಅವರವರ ಪ್ರಯೋ ಜನಾರವಾಗಿಯೇ ಹೊರತು ಬೇರೆಯಲ್ಲ. ತಂದೆಯು ಮಕ್ಕಳಲ್ಲಿ ಹೇಗೋ ಹಾಗೆ, ಯಾರು ಸಹಜವಾದ ದಯಾಗುಣವುಳ್ಳವರಾಗಿ, ತಮ್ಮನ್ನು ಭಜಿಸ ಇದ್ದವರಿಗೂ ಕ್ಷೇಮಚಿಂತಕರಾಗಿ ವರ್ತಿಸುವರೋ,ಆಂತವರೇ ಉತ್ತಮರು! ಅದನ್ನು ನಿರ್ದುಷ್ಟವಾದ ಧರವೆಂದೂ, ಭೂತದಯೆಯೆಂದೂ ಹೇಳಬಹು ದು, ಬೇರೆ ಕೆಲವರು ತಮ್ಮನ್ನು ಅನುವರ್ತಿಸಿದವರಿಗೂ ತಾವು ಆನು ಕೂಲರಾಗಿರಲಾರರು. ಇಂತವರಿಂದ ಇತರರಿಗೆ ಉಪಕಾರವಿಲ್ಲವೆಂದು ಹೇ ಳಬೇಕಾದುದೇನು ? ಇಂತವರನ್ನು ಕೇವಲ ಆತ ಪೋಷಣಪುರೆಂದೂ, ವಿಷಯಾಸಕ್ತಿಯಲ್ಲಿ ಮುಳುಗಿದವರೆಂದೂ, ಕೃತಷ್ಟು ರೆಂದೂ, ಗುರುದ್ರೋ ಹಿಗಳೆಂದೂ ಹೇಳುವುದರಲ್ಲಿ ಸಂದೇಹವೇನೂ ಇಲ್ಲ ! ಆದರೆ ಓ ಸಖಿಯರೆ! ನೀವು ನನ್ನನ್ನೂ ಆ ಕೋಟಿಗೆ ಸೇರಿಸಿದರಲ್ಲವೆ ? ನೀವು ಹೇಳಿದಂತೆ ನ ಇನ್ನು ಭಜಿಸಿದವರಿಗೂ ನಾನು ಅನುಕೂಲವಲ್ಲದಂತೆ ಔದಾಸೀನ್ಯವನ್ನು ತೋರಿಸುವುದೇನೋ ವಾಸ್ತವವೇ! ಆದರೆ ಅದು ನನ್ನಲ್ಲಿ ಕೃತಜ್ಞತೆಯಿಲ್ಲ ದುದರಿಂದಲ್ಲ! ಅವರಿಗೆ ಉಪಕಾರಮಾಡಬೇಕೆಂಬ ಬುದ್ಧಿಯಿಂದಲೇ ನಾ ನು ಹಾಗೆ ಮಾಡುವನು. ಹೇಗೆಂದು ಕೇಳುವಿರಾ ! ನನ್ನನ್ನು ಭಜಿಸತಕ್ಕ ಪ್ರಾಣಿಗಳಿಗೂ ನಾನು ಗೋಚರಿಸದಿದ್ದರೆ, ಹಣವನ್ನು ಕಳೆದುಕೊಂಡ ಪು