ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬೩ ಶ್ರೀಮದ್ಭಾಗವತವು [ಅಧ್ಯಾ. ೩೩, ಮೈ ಮನಸ್ಸಿನಲ್ಲಿದ್ದ ವಿರಹತಾಪವನ್ನು ನೀಗಿದರು ಆಮೇಲೆ ಕೃಷ್ಣನು ಬಹುಕಾಲದಿಂದ ತನ್ನನ್ನೇ ಅನುವರ್ತಿಸುತ್ತಿದ್ದು, ಈಗ ತನ್ನ ದರ್ಶನದಿಂದ ಸಂತುಷ್ಟರಾದ ಆ ಗೋಪಕನೈಯರೊಡನೆ * ರಾಸಕ್ರೀಡೆಯೆಂಬ ಒಂದು ಬಗೆಯ ನರ್ತನವನ್ನಾರಂಭಿಸಿದನು. ಆ ಸ್ತ್ರೀಯರೆಲ್ಲರೂ ಒಬ್ಬರಿಗೊಬ್ಬರಿಗೆ ಕೈಗಳನ್ನು ಪೋಣಿಸಿಕೊಂಡು ಮಂಡಲಾಕಾರವಾಗಿ ನಿಂತರು. ಆ ಭಗವಂತ ನು ವಿಚಿತ್ರಶಕ್ತಿಯುಳ್ಳವನಾದುದರಿಂದ, ತಾನೂ ಅನೇಕಾಕೃತಿಗಳನ್ನು ತಾ ಆ,ಇಬ್ಬಿಬ್ಬರು ಗೋಪಿಯರನಡುವೆ, ಒಬ್ಬೊಬ್ಬ ಕೃಷ್ಣನಾಗಿ, ತನ್ನ ಎರಡು ತೋಳುಗಳಿಂದಲೂ, ತನ್ನ ಎರಡು ಪಕ್ಕಗಳಲ್ಲಿರುವ ಗೋಪಿಯರ ಕಂಠವ ನೃಪ್ಪಿ ನಿಂತನು. ಆಗ ಆ ಗೋಪಸ್ತ್ರೀಯರಲ್ಲಿ ಒಬ್ಬೊಬ್ಬಳಿಗೂ, ಕೃಷ್ಣ ಸಿಗೆ ತನ್ನೊಬ್ಬಳಲ್ಲಿಯೇ ವಿಶೇಷಪ್ರಿತಿಯಿರುವುದರಿಂದ, ಪಕ್ಕದಲ್ಲಿದ್ದು, ತನ್ನನ್ನೇ ಎಡೆಬಿಡದೆ ಆಲಿಂಗಿಸಿಕೊಂಡಿರುವ'ನೆಂಬ ಭಾವವು ಹುಟ್ಟಿತು. ಆ ಮೂರಲ್ಲಿ ಈ ವಿನೋದವನ್ನು ನೋಡುವುದಕ್ಕಾಗಿ, ಆಕಾಶದಲ್ಲಿ ಅನೇಕದೇ ವದಂಪತಿಗಳು ವಿಮಾನಾರೂಢರಾಗಿ ಬಂದು ನೆರೆದರು. ಎಲ್ಲರೂ ಕೃಷ್ಣನ ಈ ವಿಚಿತ್ರಲೀಲೆಯನ್ನು ಆಶ್ರಯಿಂದ ಸ್ತಬ್ಧರಾಗಿ ನೋಡುತ್ತಿದ್ದರು. ದೇವದುಂದುಭಿಗಳು ಮೊಳಗಿದವು. ಕೃಷ್ಣನ ಮೈ ಮೇಲೆ ಪುಷ್ಪವೃಷ್ಟಿಗಳು ಬಿದ್ದುವು. ಗಂಧದಂಪತಿಗಳು ಆ ಕೃಷ್ಣನ ನಿರ್ಮಲವಾದ ಕೀರ್ತಿಯ ನ್ನು ಗಾನಮಾಡುತಿದ್ದರು. ಇತ್ತಲಾಗಿ ಕೃಷ್ಣನ ಕೊರಲನ್ನ ಪ್ಪಿಕೊಂಡು ಮಂಡಲಾಕಾರವಾಗಿ ನಿಂತಿದ್ದ ಗೋಪಿಯರೆಲ್ಲರೂ, ಸಂತೋಷದಿಂದ ಕೈ ಬಳೆ, ಕಾಲಂದುಗೆ, ನಡುಗೆಜ್ಜೆ ಮುಂತಾದ ಆಭರಣಗಳ ಫುಲ್ವಲಧ್ವನಿಯೊ ಡನೆ ನರ್ತಿಸಲಾರಂಭಿಸಿದರು. ಆ ಗೋಪಿಯರ ನಡುನಡುವೆ ಕೃಷ್ಣನೂ ನಿಂತು ವರ್ತಿಸುತ್ತಿರುವಾಗ, ಆ ರಾಸಗೋಷ್ಠಿಯು, ಬಂಗಾರದ ಕಿರುಗೆಜ್ಜೆ ಗಳ ನಡುನಡುವೆ ನೀಲರತ್ರವನ್ನು ಪೋಣಿಸಿ ಮಾಡಿದ ರತ್ನಹಾರದಂತೆ ಕಾ ಣುತಿತ್ತು. ಆಗ ಗೋಪಸ್ತ್ರೀಯರು ಕಾಲುಗಳನ್ನು ಜೆನ್ನು ಹಾಕುವುದು, ಕೈಗ ಇನ್ನಾಡಿಸುವುದು, ಮುಗುಳ್ಳಗೆಯೊಡನೆ ಹುಬ್ಬನ್ನು ಕುಣಿಸುವುದು, ಸಣ್ಣ

  • ರಾಸಕ್ರೀಡೆಯಂದರೆ ಅನೇಕನರ್ತಕನರ್ತಕಿಯರು ಒಟ್ಟಾಗಿ ಸೇರಿ ನಡೆ ಸಕ್ಕೆ ಹಿಂದು ಮನವು.