೧೯೬೪ ಶ್ರೀಮದ್ಭಾಗವತವು [ಅಧ್ಯಾ. ೩೪. ತನಲ್ಲಿ ಸ್ಥಿರಭಕ್ತಿಯನ್ನು ಹೊಂದಿ, ಅಜ್ಞಾನವನ್ನು ನೀಗಿ, ಉತ್ತಮಗತಿಯ ನ್ಯೂ ಪಡೆಯುವನು. ಇದು ಮೂವತ್ತುಮೂರನೆಯ ಅಧ್ಯಾಯವು. 4+ (ಸರ್ಪರೂಪದಿಂದಿದ್ದ ಸುದರ್ಶನನೆಂಬ ಗಂಧರನಿಗೆ .. 1 ಶಾಪವಿಮೋಚನವಾದುದು, . ರಾಜೇಂದ್ರಾ ಕೇಳು ! ಅದರಿಂದಾಚೆಗೆ ಒಮ್ಮೆ ನಂದಾದಿಗೊಪಾ ಲಕರೆಲ್ಲರೂ ಅಂಬಿಕಾವನವೆಂಬ ಶಿವಕ್ಷೇತ್ರಕ್ಕೆ ಯಾತ್ರೆ ಹೊರಡುವುದಾಗಿ ಉ ದೈತಿಸಿ, ತಮ್ಮ ತಮ್ಮ ಬಂಡಿಗಳನ್ನು ಕಟ್ಟಿಕೊಂಡು ಪ್ರಯಾಣಹೊರಟರು. ಎಲ್ಲರೂ ಆ ಪುಣ್ಯಸ್ಥಳಕ್ಕೆ ಬಂದು ಸೇರಿ, ಸಮೀಪದಲ್ಲಿದ್ದ ಸರಸ್ವತೀ ನದಿಯ ಕ್ಲಿ ಸ್ನಾನಮಾಡಿ, ಪೂಜಾದ್ರವ್ಯಗಳನ್ನು ಸಂಗ್ರಹಿಸಿ, ಪಶುಪತಿಯಾದ ರು ದ್ರನನ್ನೂ , ಅಂಬಿಕಾದೇವಿಯನ್ನೂ ಭಕ್ತಿಯಿಂದ ಪೂಜಿಸುತಿದ್ದರು. ಆ ಪಾಶ್ವತೀಪರಮೇಶ್ವರರ ಪ್ರೀತಿಗಾಗಿ, ಬ್ರಾಹ್ಮಣರಿಗೆ ಸಮೃದ್ಧವಾಗಿ, ಗೋದಾನ, ಹಿರಣ್ಯದಾನ, ವಸ್ತ್ರದಾನಾದಿಗಳನ್ನು ನಡೆಸಿದರು. ತುಪ್ಪ, ಜೇನು, ಮುಂತಾದ ಮಧುರದ್ರವ್ಯಗಳೊಡನೆ ಯಥೇಚ್ಛವಾಗಿ ಅನ್ನ ದಾನ ವನ್ನೂ ಮಾಡಿದರು: ತಾವೆಲ್ಲರೂ ಆ ರಾತ್ರಿಯಲ್ಲಿ ವ್ರತನಿಷ್ಠರಾಗಿ, ಜಲ ಪಾನವನ್ನು ಮಾತ್ರ ಮಾಡಿ, ಆ ಸರಸ್ವತೀನದೀತೀರದಲ್ಲಿಯೇ ವಾಸಮಾಡು ತಿದ್ದರು. ರಾಜೇಂದ್ರಾ ! ಆ ಅಂಬಿಕಾವನದಲ್ಲಿ ಒಂದಾನೊಂದು ಹೆಬ್ಬಾ ವು ಬಹಳಹಸಿವಿನಿಂದ ಬಾಧೆಪಡುತ್ತ, ಆಹಾರಾರವಾಗಿ ಅಲ್ಲಲ್ಲಿ ಸಂಚರಿ ಸುತಿತ್ತು. ಆ ಸರ್ಪವು ದೈವಿಕವಾಗಿ ನಂದಾದಿಗೋಪಾಲಕರಿದ್ದ ಸ್ಥಳಕ್ಕೆ ಬಂದು, ಅಲ್ಲಿ ಮಲಗಿದ್ದ ನಂದನನ್ನು ಆತುರದಿಂದ ನುಂಗುವುದಕ್ಕೆ ಯ ತ್ರಿಸಿತು. ಆಗ ಆ ಹಾವಿನ ಬಾಯಿಗೆ ಸಿಕ್ಕಿ ಬಿದ್ದ ನಂದನು, ಭಯಾತುರ ನಾಗಿ (ಅಯ್ಯೋ ! ಇನ್ನೇನುಗತಿ ! ಕೃಷ್ಣಾ ಕೃಷ್ಣಾ ! ಇದೋ ! ಈ ಮಹಾಸರ್ಪವು ನನ್ನನ್ನು ನುಂಗುತ್ತಿರುವುದಲ್ಲಾ! ನಿನ್ನಲ್ಲಿ ಮರೆಹೊಕ್ಕಿರು ವೆನು! ನನ್ನನ್ನು ಬಿಡಿಸು” ಎಂದು ಗಟ್ಟಿಯಾಗಿ ಕೂಗಿಕೊಂಡನು. ಈ ಆಂ ಕ್ರದನಧ್ವನಿಯನ್ನು ಕೇಳಿ ಗೋಪಾಲಕರೆಲ್ಲರೂ ಓಡಿಬಂದರು ಆ ಸರ್ಪ ವನ್ನು ಕೊಳ್ಳಿಗಳಿಂದ ತಿವಿದು, ದೊಣ್ಣೆಗಳಿಂದ ಬಡಿದರೂ ಬಿಡದೆ, ಅದು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೯೮
ಗೋಚರ