M೭೮ ಶ್ರೀಮದ್ಭಾಗವತವು [ಅಧ್ಯಾ, ೩೫ ಪಸ್ತ್ರೀಯರಿಗೆ ಕಾವಲಾಗಿದ್ದು, ಅವರನ್ನು ರಕ್ಷಿಸುತ್ತಿದ್ದನು. ಕೊನೆಗೆ ಕೃ ಹೈನು, ಆ ಗುಹ್ಯಕಾಧಮನನ್ನು ಹಿಡಿದು, ಒಂದೇ ಮುಷ್ಟಿಮುತದಿಂದ ಆ ವನ ತಲೆಯನ್ನು ಭೇದಿಸಿ, ಅದರಲ್ಲಿದ್ದ ರತ್ನವನ್ನು ಕಿತ್ತು ತಂದು, ಗೋಪ ಸ್ತ್ರೀಯರೆಲ್ಲಲೂ ನೋಡುತ್ತಿರುವಹಾಗೆಯೇ ತನ್ನಣ್ಣನ ಕೈಗೆ ಕೊಟ್ಟನು. ಇದು ಮೂವತ್ತು ನಾಲ್ಕನೆಯ ಅಧ್ಯಾಯವು, ರಹದಿಂದ }+ w ಹಗಲಲ್ಲಿ ಗೋಪಿಯರು ಕೃಷಿ ವಿರಹದಿಂದ ) ವಿಲಪಿಸಿದುದು. ವೇಣುಗೀತೆ, ರಾಜೇಂದ್ರಾ: ಕೃಷ್ಣನು ಹಗಲುಹೊತ್ತಿನಲ್ಲಿ ಹಸುಗಳನ್ನು ಮೇ ಯಿಸುವುದಕ್ಕಾಗಿ ಕಾಡಿಗೆ ಹೋಗುತಿದ್ದನಷ್ಟೆ? ಕ್ಷಣಕಾಲವೂ ಅವನ ವಿ ಯೋಗವನ್ನು ಸಹಿಸಲಾರದಿದ್ದ ಗೋಪಿಯರು, ಆ ಹಗಲುಹೊತ್ತನ್ನೂ ಎ ಪ್ರೊ ಕಷ್ಟದಿಂದ ಕಳೆಯುತ್ತ, ಅವನ ಲೀಲೆಗಳನ್ನು ವರ್ಣಿಸುವರು. ಓ ಗೋಪಿಯರೆ! ಆ ಕೃಷ್ಣನನ್ನು ಕ್ಷಣಮಾತ್ರದವರೆಗೆ ಕಾಣದಿದ್ದರೂ ನಮ್ಮ ಮನಸ್ಸು ಹೀಗೆ ಕುದಿಯುತ್ತಿರುವ ದಲ್ಲಾ! ಆಹಾ ! ಆ ವೇಣುಗೋಪಾಲ ನ ಸೌಂದರವನ್ನೇನೆಂದು ಹೇಳಬಹುದು? ಎಡದ ಭುಜಕ್ಕೆ ಕಪೋಲವು ಸೋಕುವಂತೆ ಬಗ್ಗಿದ ಕೋರಲು ! ತಲೆಯ ಮೇಲೆ ಕೊಳಲು ! ಆ ಕೊ ಛಲಿನ ರಂಧ್ರಗಳಮೇಲೆ ಆಡುತ್ತಿರುವ ಕೋಮಲವಾದ ಬೆರಳುಗಳು ! ಆ ಕೊಳಲಿನ ಸ್ವರಮೂರ್ಛನೆಗಳಿಗೆ ತಕ್ಕಂತೆ ಹುಬ್ಬಿನಾದಗಳು ! ಇಂತಹ ದಿವ್ಯಸೌಂದಯ್ಯದಿಂದ ಕೊಳಲನ್ನು ನುಡಿಸುತ್ತಿರುವ ಆ ಕೃಷ್ಣನ ವೇಣು ಗಾನವು ಕಿವಿಗೆ ಬಿದ್ದೊಡನೆ, ಆಕಾಶದಲ್ಲಿ ವಿಮಾನಚಾರಿಣಿಯರಾದ ಸಿದ್ಧಾಂ ಗನೆಯರೂರೂಡ, ಪಕ್ಕದಲ್ಲಿರುವ ತಮ್ಮ ಪತಿಗಳನ್ನೂ ಮರೆತು, ಮನ್ಮಥ ಬಾಣದಿಂದ ಕಲಗಿದ ಮನಸ್ಸುಳ್ಳವರಾಗಿ, ಮೈಮೇಲಿನ ಬಟ್ಟೆಯು ಜಾರಿ ದುದನ್ನೂ ತಿಳಿಯದೆ ಮೋಹಪರವಶರಾಗುವರು. ಮೆಲ್ಲಗೆ ಚೇತರಿಸಿಕೊಂ ಡಮೇಲೆ,ತಮ್ಮ ಸ್ಥಿತಿಗೆ ತಾವೇ ಲಜ್ಜೆ ಪಡುವರು. ತಿರುಗಿ ಮೈಮರೆತು ಮೂ ರ್ಛಹೊಂದುವರು. ಅವರ ಸ್ಥಿತಿಯೇ ಹೀಗಿರುವಾಗ, ನಾವು ಆ ಕೃಷ್ಣ ನನ್ನು ಕಾಣದೆ ಹೇಗೆ ಸಹಿಸಬಲ್ಲೆವು? ಆಹಾ ! ಸಖಿಯರೆ ! ಇದಲ್ಲವೇ ಆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೦೪
ಗೋಚರ