ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ ೩೫.] ದಶಮಸ್ಕಂಧವು ೧೯೮೧ ಸುತ್ತ ಬರುವಾಗ ಅವನ ನಡೆಯನ್ನೂ , ಅವನ ವಿಲಾಸಗಳನ್ನೂ,ಅವನ ಹೃ ಮೈಸೌಂದಠ್ಯವನ್ನೂ ನೋಡಿದಹಾಗೆಲ್ಲಾ ನಮಗೆ ನಿಜವಾಗಿಯೂ ಕಾಮ ವಿಕಾರದಿಂದ ಮೈತಿಳಿಯದಂತಾಗುವುದು. ಮೋಹಪಾರವಶ್ಯದಿಂದ ತಲೆಬಿಚ್ಚಿ ದುದೂ, ಸೀರೆಯು ಸಡಲಿದುದೂ ತಿಳಿಯದೆ, ಅಚೇ ತನಗಳಾದ ವೃಕ್ಷಗಳಂತೆ ನಿಶ್ಲೇಷ್ಯರಾಗಿ ನಿಲ್ಲುವೆವು. ಮತ್ತು ಆ ಕೃಷ್ಣನು ಕೈಯ್ಯಲ್ಲಿ ಮಣಿಸರವನ್ನು ಹಿಡಿದು, ಆ ಮಣಿಗಳಿಂದ ತನ್ನ ಮಂದೆಯ ಗೋವುಗಳನ್ನೆಣಿಸುತ್ತಾ, ಸುಂಗಧವಿಶಿಷ್ಟವಾದ ತುಲಸೀಮಾಲಿಕೆಯನ್ನು ಕೊರಳಲ್ಲಿ ಧರಿಸಿ,ತನ್ನ ಸ್ನೇಹಿತನ ಭುಜದಮೇಲೆ ತೋಳೂರಿ ನಿಂತು ವೇಣು ಗಾನವನ್ನು ಮಾಡುತ್ತಿರುವಾಗ, ಕಾಡಿನಲ್ಲಿರುವ ಹೆಣ್ಣು ಜಿಂಕೆಗಳೆಲ್ಲವೂ ಆ ವೇಣುಗಾನಕ್ಕೆ ಮರುಳಾಗಿ,ಗೋಪಿಯರಂತೆ ತಮ್ಮ ಮನೆಮಕ್ಕಳಲ್ಲಿಯೂ ಆಸೆಯನ್ನು ತೊರೆದು, ಆ ಕೃಷ್ಣನನ್ನೇ ಅನುಸರಿಸಿ ಹೋಗುತ್ತಿರುವುವು. ಅಮ್ಮ ಯಶೋದೆ!ನಿನ್ನ ಮಗನಾದ ಕೃಷ್ಣನು, ಮೊಲ್ಲೆ ಹೂವಿನ ಮಾಲಿಕೆ ಯಿಂದ ದೇಹವನ್ನಲಂಕರಿಸಿಕೊಂಡು, ಗೋವುಗಳಿಂದಲೂ ಗೋಪಾಲಕ ರಿಂದಲೂ ಪರಿವೃತನಾಗಿ, ಯಮುನಾತೀರದಲ್ಲಿ ವಿಹರಿಸುತ್ತಿರುವಾಗ, ಅವನ ವೇಣುಗಾನಕ್ಕೆ ಮರುಳಾಗಿ ವಾಯುವೂಕೂಡ ಸುಗಂಧಶೀತಲವಾಗಿ ಬೀಸುತ್ತಿರುವುದು. ಸಿದ್ಧವಿದ್ಯಾಧರರೇ ಮೊದಲಾದ ದೇವಗಣಗಳೂ ಕೂಡ ಗೀತವಾದ್ಯಗಳಿಂದಲೂ, ಪ್ರಷ್ಟ ವರ್ಷಗಳಿಂದಲೂ ಅವನನ್ನು ಸೇವಿಸಿ ಸ್ತುತಿ ಸುತ್ತಿರುವರು. ಗೋವರ್ಧನಗಿರಿಯನ್ನೆತ್ತಿ, ಗೋಕುಲವಾಸಿಗಳೆಲ್ಲರನ್ನೂರ ಕ್ಷಿಸಿದ ಆ ಕೃಷ್ಣನು, ಸಾಯಂಕಾಲದಲ್ಲಿ ಮಂದೆಯನ್ನಟ್ಟಿಕೊಂಡು ಕಾಡಿ ಸಿಂದ ಹಿಂತಿರುಗಿ ಬರುವಾಗ, ಅವನ ವೈಭವವನ್ನು ಕೇಳಬೇಕೆ? ಗೋಪಾದ ಧೂಳಿಯಿಂದ ಕೊಳೆಗಟ್ಟಿದ ಕಂಠಮಾಲಿಕೆಯೊಡನೆ, ಕೊಳಲನ್ನು ನುಡಿ ಸುತ್ತ, ತನ್ನ ಅನುಚರರೆಲ್ಲರೂ ಸುತ್ತಲೂ ನೆರೆದು ತನ್ನ ಕೀರ್ತಿಯನ್ನು ಕೊಂಡಾಡುತ್ತಿರಲು, ಬ್ರಹ್ಮಾದಿದೇವತೆಗಳಿಂದ ನಮಸ್ಕರಿಸಲ್ಪಡುತ್ತ ಬರುವ ಆ ಕೃಷ್ಣನ ಸೌಂದಯ್ಯವು, ಮನ್ಮಥತಾಪದಿಂದ ಕಣ್ಣಾಣದ ನಮಗೆ ನೇತ್ರೋತ್ಸವದಂತಿರುವುದು. ನಮ್ಮ ಕೋರಿಕೆಯನ್ನಿಡೇರಿಸುವದ ಕ್ಕಾಗಿ ದೇವಕೀದೇವಿಯ ಗರ್ಭದಿಂದವತರಿಸಿದ ಪೂರ್ಣಚಂದ್ರನೇ ಅವನು. ೧