ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೮೪ ಶ್ರೀಮದ್ಭಾಗವತವು [ಅಧ್ಯಾ. ೩೬. ಬಿಟ್ಟನು.ಅರಿಷ್ಯನಿಗೆ ಮತ್ತಷ್ಟು ಕೋಪವುಂಟಾಯಿತು. ಅವನ ಅಂಗಾಗಗ ಳಲ್ಲಿಯೂ ಬೆವರು ಕಿತ್ತುಕೊಂಡಿತು. ತಿರುಗಿ ಮೇಲೆದ್ದು, ಕೋಪದಿಂದ ಬುಸುಗುಟ್ಟುತ್ತ ಕೃಷ್ಣನಿಗಿಹಿರಾಗಿ ಬರುತ್ತಿದ್ದನು. ಮೊದಲಿನಂತೆಯೇ ಕೃಷ್ಣನು ಅವನ ಕೊಂಬುಗಳನ್ನು ಹಿಡಿದು, ಕೊರಲನ್ನು ತಿರುಚಿ, ಕೆಳಕ್ಕೆ ಕೆಡಹಿ, ಒದ್ದೆಯ ಬಟ್ಟೆಯನ್ನು ಹಿಂಡುವಂತೆ ಅವನನ್ನು ಕಾಲಿಂದ ಮೆಟ್ಟಿ ತುಳಿದು, ಅವನ ದೇಹವನ್ನು ನಜ್ಜುಗುಜ್ಜಾಗಿ ಮಾಡಿದನು. ಆಮೇಲೆ ಅವನ ಕೊಂಬುಗಳೆರಡನ್ನೂ ಕೈಯಿಂದ ಕಿತ್ತುಕೊಂಡು, ಅವುಗಳಿಂದಲೇ ಅವನನ್ನು ಪ್ರಹರಿಸಿದನು. ಆ ಒಂದೇ ಪ್ರಹಾರಕ್ಕೆ ಅರಿಷನು, ಬಾಯಿಂದ ರಕ್ತವನ್ನು ಕಕ್ಕಿ, ಮಲಮೂತ್ರಗಳನ್ನು ಬಿಡುತ್ತ, ಕಾಲುಗಳನ್ನೊದರಿ, ಕೆಳಗೆ ಬಿದ್ದನು. ಅವನ ಕಣಲೆಗಳ ಮೇಲೆನಾಟಿಕೊಂಡುವು. ಸ್ವಲ್ಪ ಹೊತ್ತಿನವರೆಗೆ ಮರಣಸಂಕಟದಿಂದ ತತ್ತಳಿಸುತಿದ್ದು, ಪ್ರಾಣವನ್ನು ಬಿಟ್ಟ ನು. ಈ ರಾಕ್ಷಸವರವನ್ನು ನೋಡಿ ದೇವತೆಗಳು ಸಂತೋಷದಿಂದ ಕೃಷ್ಣನ ಮೇಲೆ ಪುಷ್ಟವರ್ಷವನ್ನು ಕರೆದು ಅವನನ್ನು ಸ್ತುತಿಸುತಿದ್ದರು. ( ನಾರದನ ಪ್ರೇರಣೆಯಿಂದ ಕಂಸನು ರಾಮ ) 3 ಕೃಷ್ಣರನ್ನು ಕರೆತರುವುದಕ್ಕಾಗಿ ಆಕ್ರ ನನ್ನು ಈ ಕಳಹಿಸಿದುದು, ಹೀಗೆ ಕೃಷ್ಣನು ವೃಷಭಾಸುರನನ್ನು ಕೊಂದಮೇಲೆ, ತನ್ನ ಸಹಚರ ರಾದ ಗೋಪಾಲಕರಿಂದ ಸ್ತುತಿಸಲ್ಪಡುತ್ತ, ಗೋಪಿಯರಿಗೆ ನೇತ್ರೋತ್ಸ ವನ್ನು ಬೀರುವಂತೆ ಬಲರಾಮನೊಡಗೂಡಿ ಹಿಂತಿರುಗಿ ಬಂದನು, ಇತ್ತ ಲಾಗಿ ಅರಿಷ್ಟವಧವಾದಮೇಲೆ, ನಾರದನು ಕಂಸನಬಳಿಗೆ ಬಂದು 11 ಕಂ ಸಾ! ಹಿಂದೆ ನಾನು ದೇವಕಿಯ ಎಂಟನೆಯ ಗರ್ಭದಿಂದ ಹುಟ್ಟಿದ ಮಗ ನೇ ನಿನಗೆ ಮೃತ್ಯುವೆಂದು ತಿಳಿಸಿದ್ದೆನಲ್ಲವೆ ? ಅದರ ನಿಜಸ್ಥಿತಿಯು ಇದುವರೆ ಗೂ ನಿನಗೆ ತಿಳಿದಿರಲಾರದೆಂದು ತೋರುತ್ತಿದೆ! ದೇವಕಿಯ ಎಂಟನೆಯಗರ್ಭ ದಲ್ಲಿ ಹುಟ್ಟಿದುದಾಗಿ ಭ್ರಮಿಸಿ, ನೀನು ಯಾವ ಹೆಣ್ಣು ಮಗುವನ್ನು ಕೊ ಲ್ಲುವುದಕ್ಕೆ ಯತ್ನಿಸಿದೆಯೋ, ಅದು ದೇವಕಿಯಲ್ಲಿ ಹುಟ್ಟಿದುದಲ್ಲ!ಆದುನಂದ ಪತ್ನಿಯಾದ ಯಶೋದೆಯ ಗರ್ಭದಲ್ಲಿ ಹುಟ್ಟಿದ ಕೂಸು ! ಆಗ ದೇವ