ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ಅಧ್ಯಾ. ೩೬.] ದಶಮಸ್ಕಂಧನು. $ ಕಿಯ ಗರ್ಭದಲ್ಲಿ ಹುಟ್ಟಿದವನೇ ಕೃಷ್ಣನು' ಬಲರಾಮನೆಂಬವನು ರೋ ಹಿಣೀದೇವಿಯ ಮಗನು. ವಸುದೇವನು ನಿನ್ನ ಭಯಕ್ಕಾಗಿ ಆ ಎರಡು ಮಕ್ಕ ಳನ್ನೂ ತನ್ನ ಮಿತ್ರನಾದ ನಂದನ ಮನೆಯಲ್ಲಿ ಬಚ್ಚಿ ಚೈನು, ಆ ಬಲರಾಮ ಕೃಷ್ಟರೇ ಇದುವರೆಗೆ, ನೀನು ಕಳುಹಿಸಿದ ರಾಕ್ಷಸರೆಲ್ಲರನ್ನೂ ಕೊಂದವರು. ಇದ್ದ ಸಂಗತಿಯನ್ನು ತಿಳಿಸಿರುವೆನು. ಮುಂದೆ ನಿನ್ನ ಕ್ಷೇಮಕ್ಕೆ ದಾರಿಯನ್ನು ನೋಡು !” ಎಂದನು. ಈ ಮಾತನ್ನು ಕೇಳಿದೊಡನೆ ಕಂಸನಿಗೆ ಕೋಪದಿಂ ದ ಮೈತಿಳಿಯದಂತಾಯಿತು. ಆ ಕ್ಷಣವೇ ಕತ್ತಿಯನ್ನು ಕೈಗೆತ್ತಿಕೊಂಡು ಮೊದಲು ಕಪಟೆಯಾದ ವಸುದೇವನ್ನು ಕೊಂದು ಬಿಡಬೇಕೆಂಬ ಉದ್ದೇಶ ದಿಂದ ಮೇಲೆದ್ಯನು. ಆಗ ನಾರದನು, ಉಪಾಯದಿಂದ ಅವನಿಗೆ ಸಮಾ ಧಾನವನ್ನು ಹೇಳಿ ತಡೆಯಲು, ಕಂಸನು ಆ ಉದ್ದೇಶವನ್ನು ಬಿಟ್ಟು ಸುಮ್ಮ ನಾದನು. ಆದರೇನು ? ಆಗಲೇ ವಸುದೇವದೇವಕಿಯರನ್ನು ಹಿಡಿದುತರಿಸಿ, ಅವರ ಕೈ ಕಾಲುಗಳಿಗೆ ಉಕ್ಕಿನ ಸಂಕೋಲೆಗಳನ್ನು ಹಾಕಿಸಿ, ಸೆರೆಯಲ್ಲಿಟ್ಟು, ಅವರ ಮಕ್ಕಳಾದ ರಾಮಕೃಷ್ಣರನ್ನು ಕೊಲ್ಲುವುದಕ್ಕೆ ಉಪಾಯವನ್ನು ಯೋಚಿಸುತ್ತಿದ್ದನು. ಅತ್ತಲಾಗಿ , ನಾರದನು ಹೊರಟುಹೋದಕೂಡಲೆ, ಕಂಸನು ತನ್ನ ಮಿತ್ರನಾದ ಕೇಶಿಯೆಂಬ ದಾನವನನ್ನು ಕರೆದರಾಮಕೃಷ್ಣ ರನ್ನು ಕೊಲ್ಲು ವಕಾರಕ್ಕಾಗಿ ನಿಯಮಿಸಿ ಕಳುಹಿಸಿದನು. ಆಮೇಲೆ ಚಾಣೂರ ಮುಷ್ಟಿಕರೆಂಬ ತನ್ನ ಕಡೆಯಜಟ್ಟಿಗಳನ್ನೂ, ಛಲ, ತೋಲಕ ಮೊದಲಾದ ವೀರರನ್ನೂ, ಮಂತ್ರಿಗಳನ್ನೂ, ಕೆಲವು ಆನೆಯ ಮಾವಟಿಗ ರನ್ನೂ ಕರೆಸಿ 'ಓ ಚಾಣರಾ'ಮುಷ್ಟಿಕಾ! ಓಮಹಾವೀರರುಗಳಿರಾ!ವಸು ದೇವನ ಮಕ್ಕಳಿಬ್ಬರೂ ನಂದನ ಮನೆಯಲ್ಲಿರುವುದಾಗಿ ತಿಳಿದುಬಂದಿದೆ! ಆವ ರಿಬ್ಬರನ್ನೂ ದೈವವು ನನಗೆ ಮೃತ್ಯುರೂಪವಾಗಿ ನಿಲ್ಲಿಸಿರುವುದು, ಅವರನ್ನು ನಾನು ಉಪಾಯದಿಂದ ಇಲ್ಲಿಗೆ ಕರೆತರಿಸುವೆನು, ನೀವು ಅವರನ್ನು ಮಲ್ಲಯು ಹೃದನೆವದಿಂದ ತೀರಿಸಬಿಡಬೇಕು ! ಆದುದರಿಂದ ಈಗಲೇ ನಮ್ಮ ಜಟ್ಟಿ ಕಾಳ ಗದ ಮೈದಾನವನ್ನು ಕ್ರಮಪಡಿಸಿರಿ!ಅಲ್ಲಿ ಪುರಜನರೆಲ್ಲರೂ ಬಂದು ಕುಳಿತು ಕೊಳ್ಳುವುದಕ್ಕೆ ಅನುಕೂಲಿಸುವಂತೆ ಸುತ್ತಲೂ ಮಂಚಗಳು ಸಿದ್ಧಪಡಿಸಲ್ಲ ಡಲಿ!ನಮ್ಮ ಪಟ್ಟಣದಲ್ಲಿಯೂ,ದೇಶದಲ್ಲಿಯೂ ಇರತಕ್ಕ ಜನರೆಲ್ಲರೂ ಬಂದು ಡe 125