ಅL ಶ್ರೀಮದ್ಭಾಗವತವು [ಅಧ್ಯಾ, ೩೩, ಸೇರಿ, ನಿಮ್ಮ ಪರಾಕ್ರಮವನ್ನು ನೋಡಿ ಸಂತೋಷಪಡಲಿ! ” ಎಂದು ಹೇಳಿ ಆನೆಯ ಮಾವಟಿಗರಲ್ಲಿ ಪ್ರಧಾನನಾದವನೊಬ್ಬನನ್ನು ಕರೆದು “ಓ ಮಹಾ ಮಾತ್ರಾ: (ಮಾವಟೆಗಾ ನೀನು ಆನೆಗಳನ್ನು ನಡೆಸುವುದರಲ್ಲಿ ಬಹಳ ಚತುರನಲ್ಲವೆ ? ನಾನು ಹೇಳುವ ಉಪಾಯವನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟು ಕಾರಸಾಧನೆಯನ್ನು ಮಾಡಬೇಕು ! ಏನೆಂದು ಕೇಳುವೆಯಾ ? ನಮ್ಮ ಕ್ಲಿ ಈಗಲೇ ಮದಹತ್ತಿರುವ ಕುವಲಯಾಪೀಡವೆಂಬ ಮಹಾಗಜವುಂ ಎಲ್ಲವೆ? ಅದರ ಕೈಗೆ ಒಂದು ದೊಡ್ಡ ಮುದ್ರವನ್ನು ಕೊಟ್ಟು, ಆ ಮಲ್ಲ ಯುದ್ಧವು ನಡೆಯತಕ್ಕ ಮೈದಾನದ ಹೊರಬಾಗಿಲಲ್ಲಿಯೇ ನಿಲ್ಲಿಸಿರಬೇಕು. ರಾಮಕೃಷ್ಣರು ಆ ಬಾಗಿಲನ್ನು ಪ್ರವೇಶಿಸುವಾಗಲೇ,ಆ ಆನೆಯ ಕೈಯಿಂದ ಅವರನ್ನು ಕೊಲ್ಲಿಸಬೇಕು. ಈ ವಿಷಯವು ಚೆನ್ನಾಗಿ ನೆನಪಿರಲಿ!” ಎಂದನು. ಆ ಮಾವಟಿಗನಾದರೋ ಕೇವಲಋಜುಬುದ್ಧಿಯುಳ್ಳವನು ! ಅವನು ಕಂಸನ ಕೂರಸ್ವಭಾವವನ್ನಾಗಲಿ, ರಾಮಕೃಷ್ಣರ ಪೂರೋತ್ತರಗಳ ನಾಗಲಿ ಯಾವುದನ್ನೂ ತಿಳಿದವನಲ್ಲ ! ಆದುದರಿಂದ, ಕಂಸನು ಹೇಳಿದ ಕ್ರೂರವಾಕ್ಯವನ್ನು ಕೇಳಿ ಭಯದಿಂದ ಬೆರಬಿದ್ದು, ವಿಜ್ಞಾಪಿಸುವನು. ««ಓ ಮಹಾಪ್ರಭೋ ! ಇದೇನಿದು! ನಿಮ್ಮ ಆಶ್ರಯದಲ್ಲಿದ್ದು ನಿಮ್ಮ ಉಪ್ಪನ್ನು ತಿಂದು ಬದುಕುತ್ತಿರುವ ನಾನು, ನಿಮ್ಮ ತಂಗಿಯ ಮಕ್ಕಳನ್ನು ಕೊಲ್ಲಬೇಕೆ? ನನ್ನನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಹೇಳುವಿರೇನು ? ನಿಮ್ಮ ಮನಸಿಗೆ ಅಹಿತವಾದ ಕಾವ್ಯವನ್ನು ಸ್ವಪ್ನದಲ್ಲಿಯೂ ನಾನು ಎಣಿಸತಕ್ಕವನಲ್ಲ " ಎಂದನು. ಈ ವಾಕ್ಯವನ್ನು ಕೇಳಿ ದುಷ್ಟನಾದ ಕಂಸನು, ಅವನ ಸಂದೇಹ ವನ್ನು ಪರಿಹರಿಸುವುದಕ್ಕಾಗಿ, ಆ ಸಭೆಯಲ್ಲಿರುವವರೆಲ್ಲರೂ ಕೇಳುತ್ತಿರಲು, ಹೀಗೆಂದು ಹೇಳುವನು. ಎಲೈಸಭ್ಯರೆ! ನಾನು ಹೇಳುವ ಮಾತನ್ನು ಸಾವಧಾನವಾಗಿ ಕೇಳಿರಿ! ಆ ರಾಮಕೃಷ್ಣರಿಬ್ಬರೂ ನನಗೆ ಕೇವಲಸಮೀಪಬಂಧುಗಳಾಗಿದ್ದರೂ, ಅವರಲ್ಲಿ ನನಗೆ ಆಜನ್ಮ ದೋಷವುಂಟಾಗಿರುವುದಕ್ಕೆ ಕಾರಣವನ್ನು ತಿಳಿಸುವನು. ಮಹಾಭಾಗ್ಯವತಿಯಾದ ನನ್ನ ತಾಯಿಯು, ಬಾಲ್ಯದಿಂದಲೂ ನಿರತಿಶಯ ಸೌಂದರವುಳ್ಳವಳು! ಕಮಲದಂತೆ ಕಣ್ಣುಳ್ಳವಳು! ಆಕೆಯು ಆಗಾಗ ತನ್ನ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧೪
ಗೋಚರ