೧೯೮೯ ಅಧ್ಯಾ. ೩೬] . ದಶಮಸ್ಕಂಧವು. ಧ್ವನು, ನನ್ನ ತಾಯಿಯ ಕೋಪವನ್ನು ನೋಡಿ,ಶಾಪಭಯದಿಂದ ನಡುಗುತ್ತ ವಿನಯಪೂರಕವಾಗಿ ಅವಳನ್ನು ಕುರಿತು, ಎಲೆಭದ್ರೆ ! ಉತ್ತಮಜಾತಿಯ ಪುರುಷರು, ಹೀನಜಾತಿಯ ಸ್ತ್ರೀಯರನ್ನು ಪರಿಗ್ರಹಿಸುವುದರಿಂದ ದೋ ಷವೇನೂ ಕಾಣಲಿಲ್ಲ ! ಮನುಷ್ಯರು ದೇವಸ್ತಿಯರನ್ನು ಪರಿ ಗ್ರಹಿಸಿದಾಗ ಅದನ್ನು ನ್ಯಾಯವಿರುದ್ಧವೆಂದು ಹೇಳಬಹುದೇಹೊರತು, ದೇವತೆಗಳು ಮನುಷ್ಯ ಸ್ತ್ರೀಯರನ್ನು ಪರಿಗ್ರಹಿಸುವುದೇನೋ ದೋಷಾಸ್ಪದ ವಲ್ಲ! ಆದುದರಿಂದ ನನ್ನಲ್ಲಿ ನೀನು ದೋಷವನ್ನೆಣಿಸಬಾರದು. ಇದರಿಂದ ನಿನಗೆ ಶ್ರೇಯಸ್ಸುಂಟು!ನನ್ನ ನೀವು ವ್ಯಶ್ಯವಾಗಲಾರದು! ಈ ನನ್ನ ವೀಯ್ಯ ದಿಂದ ನಿನ್ನ ಗರ್ಭದಲ್ಲಿ ಜನಿಸತಕ್ಕ ಪುತ್ರನು, ಬುದ್ದಿಯಲ್ಲಿಯೂ, ಸಂಪತ್ತಿ ನಲ್ಲಿಯೂ, ವೀರದಲ್ಲಿಯೂ ಮೇಲೆನಿಸಿಕೊಳ್ಳುವನು. ನನ್ನ ಮಾತು ಎಂದಿ ಗೂ ಸುಳ್ಳಾಗಲಾರದು ಇನ್ನು ನೀನು ಚಿಂತಿಸಬೇಡ! ಹೋಗು !”ಎಂದನು. ಹೀಗೆ ಆ ಗಂಧಪ್ಪನು ಎಷ್ಟೆಷ್ಟು ವಿಧದಿಂದ ಸಮಾಧಾನಪಡಿಸಿದರೂ, ಸುಶೀಲೆಯಾದ ನನ್ನ ತಾಯಿಯು, ತನ್ನ ಪಾತಿವ್ರತ್ಯವು ಕೆಟ್ಟು ಹೋಯಿ ತೆಂಬ ಸಂಕಟದಿಂದ ಪರಿತಪಿಸುತ್ತ, ಅವನನ್ನು ಕುರಿತು ಕೋಪದಿಂದ (ಎಲ ವಂಚಕಾ ! ಸದಾಚಾರವನ್ನು ಮೀರಿ ದುರಾರ್ಗದಲ್ಲಿ ಪ್ರವರ್ತಿಸಿದ ನಿನಗೆ ಹುಟ್ಟುವ ಪುತ್ರನನ್ನು ನೋಡಿ ನಾನು ಸಂತೋಷಪಡಬೇಕೆ ? ಎಲಪಾಪೀ ! ನಿನಗೆ ಹುಟತಕ ಪತನೂ ಸಿನಂತೆಯೇ ಪಾಪಿಯಾಗಿ, ಕೂರಾತ ನಾಗಿ, ಲೇಶಮಾತ್ರವೂ ಸುಗುಣಗಳಿಲ್ಲದೆ, ದುರ್ಗುಣಗಳಿಂದಲೇ ಕೂಡಿರಲಿ ! ಅವನು ದೇವಬ್ರಾಹ್ಮಣರ, ಮತ್ತು ತಪಸ್ವಿಗಳ ಕೋಪಕ್ಕೆ ಪಾತ್ರನಾಗುವ ನೇಹೊರತು, ಅವರ ಅನುಗ್ರಹಕ್ಕೆ ಪಾತ್ರನಾಗಲಾರನು”ಎಂದಳು! ಅವಳು ಹೀಗೆ ಹೇಳಿ, ಮೇಲೆಮೇಲೆ ಕೋಪದಿಂದಕ್ಕುತ್ತಿರುವುದನ್ನು ನೋಡಿ, ಗಂಧಧ್ವನಿಗೆ ಮನಸ್ಸಿನಲ್ಲಿ ಭೀತಿ ಹುಟ್ಟಿತು. ತನಗೆ ಎಲ್ಲಿ ಶಾಪವನ್ನು ಕೊಡು ವಳೋ ಎಂದು ಹೆದರಿ, ಆ ಗಂಧಧ್ವನು ಅವಳನ್ನು ನೋಡಿ ಹಾಗಿದ್ದರೆ ನಿನ್ನ ಗರ್ಭದಲ್ಲಿ ಜನಿಸತಕ್ಕ ಆ ಪುತ್ರನು ನಿನ್ನ ಬಂಧುವರ್ಗಕ್ಕೇ ದ್ವೇಷಿಯಾಗಲಿ” ಎಂದು ಹೇಳಿ ಆಕ್ಷಣವೇ ಕಣ್ಮರೆಯಾಗಿಬಿಟ್ಟನು. ಅತ್ತಲಾಗಿ ಆ ಗಂಧ ಧ್ವನು ಅಂತರ್ಧಾನಹೊಂದಿದಮೇಲೆ, ಇತ್ತಲಾಗಿಯಶಸ್ವಿನಿಯಾದ ನನ್ನ ತಾ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧೭
ಗೋಚರ