ಅಧ್ಯಾ. ೩೩.] ದಶಮಸ್ಕಂಧನು. ೧೯೯೧ ಬೇಕು ! ಆಗ ನಾವು ಸಾಭೀಷ್ಟಪ್ರದನಾದ ಭೂತಪತಿಗೆ (ರುದ್ರನಿಗೆ) ಅನೇಕಪಶುಗಳನ್ನು ಬಲಿಕೊಡಬೇಕು. ಅದಕ್ಕೆ ಬೇಕಾದ ಸನ್ನಾಹಗಳೆಲ್ಲವೂ ನಡೆಯಲಿ ! ” ಎಂದು ಆಜ್ಞೆ ಮಾಡಿದನು. ಹೀಗೆ ಅವರವರಿಗೆ ಆಯಾಆಜ್ಞೆಯನ್ನು ಮಾಡಿ, ಆರನೆಂಬ ಯಾದವನನ್ನು ಕರೆದು, ಅವನ ಕೈಹಿಡಿದು, ಮೃದುವಾಕ್ಯದಿಂದ ಹೀಗೆಂದು ಹೇಳುವನು, “ಓ ಆಕ್ರೋರಾ! ಸೌಮ್ಯಾ ! ನೀನು ಮಹೋದಾರಸ್ವಭಾವ ವುಳ್ಳವನು. ನೀನು ನನಗಾಗಿ ಒಂದು ಮಿತ್ರಕಾರವನ್ನು ನಡೆಸಿಕೊಡಬೇಕು. ನನಗೆ ವೃಷ್ಠಿಗಳಲ್ಲಿಯಾಗಲಿ, ಭೋಜರಲ್ಲಿಯಾಗಲಿ. ನಿನಗಿಂತಲೂ ಹಿತೈಷಿ ಗಳು ಬೇರೊಬ್ಬರಿಲ್ಲ! ದೇವೇಂದ್ರನು ವಿಷ್ಣುವನ್ನಾಶ್ರಯಿಸಿ ತನ್ನ ಅಭೀಷ್ಯವನ್ನು ಸಾಧಿಸಿದಂತೆ, ಈಗ ನಾನೂ ನನ್ನ ಕಾರೈಗೌರವಕ್ಕಾಗಿ ನಿನ್ನನ್ನು ನಂಬಿರುವೆನು. ಓಸೌಮ್ಯಾ ! ಈಗಲೇ ನೀನು ನಂದವ್ರಜಕ್ಕೆ ಹೋಗ ಬೇಕು. ವಸುದೇವನ ಮಕ್ಕಳಾದ ರಾಮಕೃಷ್ಣರಿಬ್ಬರೂ ಅಲ್ಲಿರುವರು. ಇದೇ ! ನಿನಗಾಗಿ ಆಗಲೇ ರಥವನ್ನೂ ತರಿಸಿಟ್ಟಿರುವೆನು, ಆದುದರಿಂದ ನೀನು ವಿಳಂಬಮಾಡದೆ ಈ ರಥವನ್ನೇರಿ ಹೋಗಿ, ಅವರಿಬ್ಬರನ್ನೂ ಇದೇ ರಥದಮೇಲೆ ಕುಳ್ಳಿರಿಸಿಕೊಂಡು,ಇಲ್ಲಿ ಕರೆತರಬೇಕು. ದೇವತೆಗಳು ವಿಷ್ಣುವ ನ್ನು ಪ್ರೋತ್ಸಾಹಿಸಿ, ಆ ರಾಮಕೃಷ್ಣರಿಬ್ಬರನ್ನೂ ನನಗೆ ಮೃತ್ಯುರೂಪವಾಗಿ ಏರ್ಪಡಿಸಿರುವರು.ಆದುದರಿಂದ ಈಗ ನನಗಾಗಿ ಕಾಣಿಕೆಯನ್ನೊಪ್ಪಿಸುವುದ ಕೈ ಬರುವ ನಂದಾದಿಗೋಪಾಲಕರೊಡನೆ, ಆ ರಾಮಕೃಷ್ಣರನ್ನೂ ನೀನು ಉಪಾಯದಿಂದ ಇಲ್ಲಿಗೆ ತರತರಬೇಕು. ಅವರಿಬ್ಬರೂ ಇಲ್ಲಿಗೆ ಬಂದೊಡನೆ, ಮೃತ್ಯುಸಮಾನವಾದ ನಮ್ಮ ಆನೆಯಿಂದ ಅವರನ್ನು ಕೊಲ್ಲಿಸುವೆನು. ಒಂದುವೇಳೆ ಅವರು ಆ ಗಂಡವನ್ನು ತಪ್ಪಿಸಿಕೊಂಡರೆ, ಸಿಡಿಲಿನಂತೆ ಮಹಾ ವೇಗವುಳ್ಳ ನಮ್ಮ ಜಟ್ಟಿಗಳಿಂದ ಅವರನ್ನು ಕೊಲ್ಲಿಸುವೆನು! ಅವರಿಬ್ಬರನ್ನು ಕೊಲ್ಲಿಸಿದಕೂಡಲೆ, ವಸುದೇವಾದಿಗಳನ್ನೂ, ಅವರ ಬಂಧುಗಳನ್ನೂ,ವೃಷ್ಟಿ, ಭೋಜ, ದಾಶಾರ್ಹರೇ ಮೊದಲಾದ ಸಮಸ್ಯೆಯಾದವಕುಲದವರನ್ನೂ, ರಾಜ್ಯದಾಸೆಯಿಂದ ಕುದಿಯುತ್ತಿರುವ ನನ್ನ ಮುದಿತಂದೆಯಾದ ಉಗ್ರಸೇನ ನನ್ನೂ , ಅವನ ತಮ್ಮನಾದ ದೇವಕನನ್ನೂ, ಇನ್ನೂ ನನಗೆ ಶತ್ರುಗಳಾದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧೯
ಗೋಚರ