offY [ಅಧ್ಯಾ.. ಶ್ರೀಮದ್ಭಾಗವತವು [ಅಧ್ಯಾ, ೩೭, ಗರ್ಜಿಸುತ್ತ, ತನ್ನ ೩ ಹರಿಸುವುದಕ್ಕೆ ಸಿದ್ಧವಾಗಿ ನಿಂತಿರುವ ಕೃಷ್ಣನನ್ನು ಕಂಡು, ಆಕಾಶವನ್ನೇ ನುಂಗಿಬಿಡುವಂತೆ ದೊಡ್ಡದಾಗಿ ಬಾಯನ್ನು ತೆರೆದು, ಕೃಷ್ಣನ ಸಮೀಪಕ್ಕೆ ವೇಗದಿಂದೋಡಿ ಬಂದು, ಪ್ರಚಂಡಧ್ವನಿಯಿಂದ ಗರ್ಜಿಸಿ, ಕೃಷ್ಣನನ್ನು ಅಪ್ಪಳಿಸುವುದಕ್ಕಾಗಿ ಕಾಲುಗಳನ್ನೆತ್ತಿ ಒದರಿದನು. ಇಷ್ಟರಲ್ಲಿ ಕೃಷ್ಣನು, ಆ ಪ್ರಹಾರವನ್ನು ಉಪಾಯದಿಂದ ತಪ್ಪಿಸಿಕೊಂಡು, ತನ್ನ ಎರಡುಕ್ಕೆಗಳಿಂದ ಅವನ ಕಾಲುಗಳನ್ನು ಹಿಡಿದು ಮೇಲಕ್ಕೆತ್ತಿ, ಗಿರ ಗಿರಸೆ ತಿರುಗಿಸಿ, ಗರುಡನು ಹಾವನ್ನು ಹಿಡಿದೆಸೆಯುವಂತೆ ಲೀಲಾಮಾತ್ರ ದಿಂದ ಅವನನ್ನು ನೂರುಬಿಲ್ಲಳತೆಗಳ ದೂರಕ್ಕೆ ಬಿಸಾಡಿದನು. ಕೆಳಗೆಬಿಳುವ ವೇಗವಲ್ಲಿ, ಆ ಕುದುರೆಯ ದೇಹವೆಲ್ಲವೂ ಜರ್ಝರಿತವಾಗಿ, ಅದಕ್ಕೆ ಪ್ರಜ್ಞೆ ತಪ್ಪಿತು. ಆದರೇನು?ಸ್ವಲ್ಪ ಕಾಲದೊಳಗಾಗಿಯೇ ತಿರುಗಿ ಚೇತರಿಸಿಕೊಂಡು ಮೇಲಕ್ಕೆದ್ದು, ಕೃಷ್ಣನನ್ನು ಕಚ್ಚುವುದಕ್ಕಾಗಿ ದೊಡ್ಡದಾಗಿ ಬಾಯನ್ನು ತೆರೆದು, ವೇಗದಿಂದ ಮುಂದೆಬಂದಿತು. ಇಷ್ಟರಲ್ಲಿಯೇ ಕೃಷ್ಣನು, ಬಿಲದಲ್ಲಿ ಹಾವನ್ನು ಹುಗಿಸುವಂತೆ,ತನ್ನ ಎಡದೋಳನ್ನು ಅದರ ಬಾಯೊಳಗೆ ಹುಗಿಸಿ ದನು.ಆಗ ಕೇಶಿಯು ಕೋಪದಿಂದ ಕೃಷ್ಣನ ಭುಜವನ್ನು ಕಡಿಯುವುದಕ್ಕಾಗಿ ಹಲ್ಲೂರಿದಾಗ, ಕಾಸಿದ ಕಬ್ಬಿಣದ ಗಡಾರಿಯನ್ನು ಕಡಿದಂತಾಗಿ, ಅವನ ಹಲ್ಲುಗಳೆಲ್ಲವೂ ಮುರಿದುಬಿದ್ದುವು. ತಕ್ಕ ಚಿಕಿತ್ಸೆಯಿಲ್ಲದೆ ಅಲಕ್ಷವಾಗಿ ಬಿಟ್ಟ ಮಹೋದರವೆಂಬ ವ್ಯಾಧಿಯು, ದೇಹದಲ್ಲಿ ಪ್ರಬಲಿಸುವಂತೆ, ಆ ಕುದುರೆಯ ಕಂಠನಾಳದಲ್ಲಿ ಹುದುಗಿದ ಕೃಷ್ಣನ ತೋಳು, ಮೇಲೆಮೇಲೆ ದೊಡ್ಡದಾಗಿ ಉಬ್ಬುತ್ತಬಂದಿತು. ಆ ಕುದುರೆಗೆ ಉಸಿರಾಡುವುದಕ್ಕೂ ಅವಕಾಶವಿಲ್ಲದಂತಾ ಯಿತು. ಮೈಯಲ್ಲಿ ಬೆವರು ಕಿತ್ತುಕೊಂಡಿತು. ಕಣ್ಣಾಲೆಗಳು ಮೇಲೆ ನಾಟಿ ಕೊಂಡುವು. ಮರಣಬಾಧೆಯಿಂದ ಮಲಮೂತ್ರಗಳನ್ನು ವಿಸರ್ಜಿಸುತ್ತ, ಕೈ ಕಾಲುಗಳನ್ನೊದರಿ, ತಗಪ್ರಾಣವಾಗಿ ಕೆಳಗೆ ಬಿದ್ದಿತು. ಆಗ ಆ ದೇಹವು, ಚೆನ್ನಾಗಿ ಮಾಗಿ ಬಿಂತ ಕರ್ಬೂಜದ ಹಣ್ಣಿನಂತೆ ಉದ್ದಕ್ಕೂ ಸೀಳಿ ಹೋಯಿತು. ಆಮೇಲೆ ಕೃಷ್ಣನು, ಅಸೀಳಿನ ಮಾರ್ಗವಾಗಿಯೇ ತನ್ನ ತೋಳನ್ನು ಹಿಂದಕ್ಕೆಳೆದುಕೊಂಡು, ತಾನು ಹೀಗೆ ನಿರಾಯಾಸವಾಗಿ ಶತ್ರು ವನ್ನು ಕೊಂದರೂ ಮನಸ್ಸಿನಲ್ಲಿ ಗರವಿಲ್ಲದೆ ಶಾಂತವಾಗಿದ್ದನು. ದೇವತೆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೨೨
ಗೋಚರ