ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ff ಅಧ್ಯಾ, ೩೭.] ದಶಮಸ್ಕಂಧವು. ಣಗಳನ್ನೂ ನಿಗ್ರಹಿಸಿರತಕ್ಕವನು. ಪಾಡು ಪರಿಪೂರ್ಣನು. ಇಂತಹ ನಿನ್ನನ್ನು ಮರೆಹೊಕ್ಕಿರುವೆವು, ದೇವಾ ! ನಿನಗೆ ನೀನೇ ಆಧಾರನಾಗಿ, ನಿಜಸಂಕಲ್ಪದಿಂದಲೇ ದೇವರನುಷ್ಯಾಹಸಕಲಪ್ರಪಂಚವ್ಯಾಪಾರವ ನ್ಯೂ ನಿರ್ವಹಿಸುತ್ತಿರುವೆ. ಹೀಗೆ ನೀನು ಸರಸ್ವತಂತ್ರನಾಗಿ, ಸದ್ವನಿಯಾ ಮಕನಾಗಿದ್ದರೂ, ಲೀಲಾರರಾಗಿ ಈ ಮನುಷ್ಯ ಶರೀರವನ್ನು ಕೈಕೊಂಡು, ಯಾದವರಿಗೂ, ವೃಷ್ಟಿಗಳಿಗೂ, ಸಾತ್ವತರಿಗೂ ಪ್ರಮುಖನೆನಿಸಿಕೊಂಡಿರು ವೆ ! ಹೀಗೆ ಮನುಷ್ಯಲೀಲೆಯಿಂದ ವಿಹರಿಸುತ್ತಿರುವ ನಿನಗೆ ವಂದನು” ಎಂದು ನಾರದನು, ಶ್ರೀ ಕೃಷ್ಣನ ಪೂರಚರಿತ್ರಗಳನ್ನು ಸ್ತುತಿಸಿ, ಅವನ ಪಾದಗಳಿಗೆ ನಮಸ್ಕರಿಸಿ, ಅವನ ಅನುಜ್ಞೆಯನ್ನು ಪಡೆದು, ಆ ಶ್ರೀ ಕೃಷ್ಣನ ಸಂದರ್ಶನದಿಂದುಂಟಾದ ಮಹಾನಂದದಿಂದುಬ್ಬು, ತನ್ನ ದಾರಿ ಯನ್ನು ಹಿಡಿದು ಹೊರಟುಹೋದನು. ಭಗವಂತನಾದ ಶ್ರೀಕೃಷ್ಣನೂ ಕೂಡ, ಇತ್ತಲಾಗಿ ಕೇತಿಸಂಹಾರವಾದಮೇಲೆ, ತನ್ನ ಸಹಚರರಾದ ಗೋ ಪಾಲಕರೊಡನೆ ಮಂದೆಯನ್ನು ಕಾಯುತ್ತ, ಗೋಕುಲಕ್ಕೆ ಕ್ಷೇಮವನ್ನುಂ ಟುಮಾಡುತಿದ್ದನು. w+ ಪ್ರೊಮಾಸುರವಧನ, ww ರಾಜೇಂದ್ರಾ ! ಅದರಿಂದಾಚೆಗೆ ಒಮ್ಮೆ ಗೋಪಬಾಲಕರೆಲ್ಲರೂ ಒಂ ದಾನೊಂದು ಬೆಟ್ಟದ ಕಿಬ್ಬರಿಯಲ್ಲಿ ದನಗಳನ್ನು ಮೇಯಿಸುತ್ತ, ಕಳ್ಳರಂತೆ ಯ, ಕಾವಲಿನವರಂತೆಯೂ ಬೇರೆಬೇರೆ ಗುಂಪಾಗಿ, ಹಿಡಿದಾಟವನ್ನಾಡ ತೊಡಗಿದರು. ಕೆಲವರು ಮೇಕೆಗಳಾಗಿ ನಿಲ್ಲುವುದು, ಬೇರೆ ಕೆಲವರು ಕಳ್ಳ ರಂತೆ ಅವುಗಳನ್ನು ಕದ್ದುಕೊಂಡು ಓಡುವುದು, ಬೇರೆ ಕೆಲವರು ಆ ಕಳ್ಳ ರನ್ನು ಹಿಡಿಯುವುದು, ಈ ರೀತಿಯಿಂದ ನಿರ್ಭಯವಾಗಿ ಆಟವಾಡುತ್ತಿರುವಾ ಗ, ಮಾಯೆಯಲ್ಲಿ ನಿಪುಣನೆನಿಸಿದ ಮಯಪುತ್ರನಾದ ಮೈಮಾಸುರನೆಂಬವ ನು, ಗೊಲ್ಲರ ವೇಷದಿಂದ ಬಂದು, ಅವರೊಡನೆ ತಾನೂ ಆಟಕ್ಕೆ ಸೇರಿಕೊಂಡ ನು.ಅವನು ಕಪಟಬುದ್ಧಿಯಿಂದಲೇ ಬಂದವನಾದುದರಿಂದ, ಕಳ್ಳರಲ್ಲಿ ತಾನೂ ಒಬ್ಬನಾಗಿದ್ದು, ಮೇಕೆಗಳನ್ನು ಹಿಡಿಯುವಹಾಗೆ ನಟಿಸುತ್ತ,ಅನೇಕಬಾಲಕರ ನ್ನು ನಿಜವಾಗಿಯೇಸಾಗಿಸಿಬಿಟ್ಟನು.ಕೈಗೆ ಸಿಕ್ಕಿದವರನ್ನೆಲ್ಲಾ ಒಂದಾನೊಂದು