ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೯೮ ಶ್ರೀಮದ್ಭಾಗವತವು ಅಧ್ಯಾ. ೩೮ ಪತಗುಹೆಯಲ್ಲಿ ಬಚ್ಚಿಟ್ಟು,ಆ ಗುಹೆಯ ಬಾಗಿಲನ್ನು ಕಲ್ಲಿಂದ ಮುಚ್ಚಿ ಬರು ವುದು ತಿರುಗಿಮತ್ತೊಬ್ಬನನ್ನು ಸಾಗಿಸುವುದು, ಹೀಗೆಯೇ ಬಹುರುಂದಿ ಬಾಲ ಕರನ್ನು ಸಾಗಿಸಿ ಗುಹೆಯಲ್ಲಿ ಬಚ್ಚಿಟ್ಟನು. ಕೊನೆಕೊನೆಗೆ ಮಂದೆಯನ್ನು ಕಾ ಯುತಿದ್ದ ಬಾಲಕರ ಸಂಖ್ಯೆಯು ಕಡಿಮೆಯಾಗುತ್ತ ಬಂದು, ನಾಲೈದು ಮಂದಿ ಮಾತ್ರವೇ ಉಳಿದರು. ಸಾಧುರಕ್ಷಕನಾದ ಕೃಷ್ಣನು, ಈ ಕಪಟ ತಂತ್ರವನ್ನು ತಿಳಿದು, ಸಿಂಹವು ತೋಳವನ್ನು ಹಿಡಿಯುವಂತೆ ಹಿಂದಿನಿಂದ ಬಂದು, ಆ ಕ್ಷಣವೇ ಅವನನ್ನು ಬಲಾತ್ಕಾರದಿಂದಪ್ಪಿ ಹಿಡಿದು ಬಿಟ್ಟನು. ಆಗ ಆ ರಾಕ್ಷಸನು ಕೃಷ್ಣನ ಕೈಯಿಂದ ಬಿಡಿಸಿಕೊಳ್ಳಲಾರದೆ ಮಿಲಿಮಿಲಿಗು ಟ್ಟುತ್ತ, ತನ್ನ ಆಕಾರವನ್ನು ಪರತದಂತೆ ದೊಡ್ಡದಾಗಿ ಬೆಳೆಸಿದನು. ಆಗ ಲೂ ಅವನಿಗೆ ಕೃಷ್ಣನ ಕೈಯಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಸಾ ಧ್ಯವಿಲ್ಲದೆಹೋಯಿತು. ಇಷ್ಟರಲ್ಲಿಯೇ ಕೃಷ್ಣನು ಆ ರಾಕ್ಷಸನನ್ನು ಕೆಳಕ್ಕೆ ಕೆಡಹಿ, ಆಕಾಶದಲ್ಲಿ ದೇವತೆಗಳೆಲ್ಲರೂ ಆಶ್ಚರದಿಂದ ನೋಡುತ್ತಿರುವಹಾ ಗೆಯೇ, ಪಶುವನ್ನು ಕೊಲ್ಲುವಂತೆ ಅವನನ್ನು ಕೊಂದುಬಿಟ್ಟನು ಆಮೇಲೆ, ಆ ರಾಕ್ಷಸನು ಗೋಪಾಲಕರನ್ನು ಬಚ್ಚಿಟ್ಟಿದ್ದ ಗುಹೆಯಬಳಿಗೆ ಬಂದು, ಅದರ ಬಾಗಿಲಿಗೆ ಮುಚ್ಚಿದ್ದ ಕಲ್ಲನ್ನು ಕಿತ್ತು, ಅಲ್ಲಿದ್ದವರೆಲ್ಲರನ್ನೂ ಕರೆತಂ ದನು. ಈ ಕಷ್ಟದಿಂದ ತಪ್ಪಿಸಿದುದಕ್ಕಾಗಿ ಗೋಪಾಲಕರೆಲ್ಲರೂ ತನ್ನನ್ನು ಸ್ತುತಿಸುತ್ತಿರಲು, ಕೃಷ್ಣನು ಅವರೆಲ್ಲರೊಡನೆ ಹಿಂತಿರುಗಿ ಮಂದೆಯನ್ನಟ್ಟಿಕೊಂಡು ಗೋಕುಲಕ್ಕೆ ಬಂದನು. ಇದು ಮೂವತ್ತೇಳ ನೆಯ ಅಧ್ಯಾಯವು. + ಅಕರನು ನಂದಗೋಕುಲಕ್ಕೆ ಹೊರಟುದು.++ ಅತ್ತಲಾಗಿ ಕಂಸಾಳ್ಮೆಯಾದಮೇಲೆ ಆಕ್ರೂರನು, ಆರಾತ್ರಿ ಮಧು ರಾವರಿಯಲ್ಲಿಯೇ ಮಲಗಿದ್ದು, ಬೆಳಗಾದಕೂಡಲೆ ರಥವನ್ನೇರಿ, ನಂದಗೋ ಕುಲಕ್ಕೆ ಪ್ರಯಾಣಹೊರಟನು. ಆತನು ಶ್ರೀ ವಿಷ್ಣುವಿನಲ್ಲಿ ಪರಮಭಕ್ತಿ ಯುಳ್ಳವನಾದುದರಿಂದ ದಾರಿಯಲ್ಲಿ ಬರುವಾಗ ತನ್ನಲ್ಲಿ ತಾನು, “ಆಹಾ ! ಏನು ಭಾಗ್ಯವು ! ನಾನು ಪೂರಜನ್ಮದಲ್ಲಿ ಎಂತಹ ಪುಣ್ಯವನ್ನು ಮಾಡಿ