ಅಧ್ಯಾ, ೩೮.] ದಶಮಸ್ಕಂಧವು. ೧೯೪೯ ಹೈನೋ ! ಯಾವ ತಪಸ್ಸನ್ನು ನಡೆಸಿದ್ದೆನೋ ! ಎಷ್ಟು ದಾನಧರಗಳನ್ನು ಮಾಡಿದ್ದೆನೋ.! ಆ ಶ್ರೀಕೃಷ್ಣನನ್ನು ಕಣ್ಣಾರೆ ನೋಡುವ ಮಹಾಭಾಗ್ಯವು ನನಗೆ ಲಭಿಸುವಂತಾಯಿತಲ್ಲವೆ? ಆದರೆ ಶೂದ್ರರಿಗೆ ವೇದಪ್ರವಚನಾಧಿ ಕಾರವಿಲ್ಲದಂತೆ, ವಿಷಯಾಸಕ್ತರಾದ ನಮ್ಮಂತವರಿಗೆ, ಭಗವದರ್ಶನವು ದುರ್ಲಭವೆಂದು ಹೇಳುವರು. ಹಾಗಿದ್ದರೆ ಆ ಭಾಗ್ಯವು ನನಗೆಲ್ಲಿ ಲಭಿಸು ವುದು ? ಆಥವಾ ಹಾಗೂ ಹೇಳುವುದಕ್ಕಿಲ್ಲ! ಯಾರ ಅದೃಷ್ಟವನ್ನು ಯಾರು ಬಲ್ಲರು ! ನಾನು ಎಷ್ಟೇ ಆಧಮನಾಗಿದ್ದರೂ, ನನಗೆ ಅ ಶ್ರೀ ಕೃಷ್ಣನ ಸಾಕ್ಷಾದರ್ಶನವು ಲಭಿಸಿದರೂ ಲಭಿಸಬಹುದು. ನದಿಯಲ್ಲಿ ಕೊಚ್ಚಿ ಕೊಂಡು ನಾನಾಕಡೆಗೆ ಹೋಗುತ್ತಿರುವ ಹುಲ್ಲು ಕಡ್ಡಿ ಮೊದಲಾದುವುಗಳಲ್ಲಿ,ಯಾವಾ ಗಲೋ ಒಮ್ಮೆ,ಯಾವುದಾದರೂ ಒಂದು ಕಡ್ಡಿ ಯು, ದೈವವಶದಿಂದ ತಡಿಗೆ ಬಂದು ಸೇರುವುದುಂಟಲ್ಲವೆ ? ಅದರಂತೆಯೇ ಕರ ವಶದಿಂದ ಕಾಲವೆಂಬ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಜೀವರಾಶಿಗಳಲ್ಲಿ, ಯಾವನಾದರೂ ಒಬ್ಬ ಚೇತನನು, ದೈವಿಕವಾಗಿ ಆ ಸಂಸಾರಸಾಗರದಿಂದ ಉತ್ತೀರ್ಣನಾಗ ಬಹುದು. ಈಗ ನಾನೇ ಅದಕ್ಕೆ ನಿದರ್ಶವಾಗಬಾರದೆ ? ಆಹಾ ! ಯೋಗಿ ಗಳ ಮನಸ್ಸಿಗೂ ಅಗೋಚರವಾದ ಆ ಶ್ರೀಕೃಷ್ಣನ ಪಾದಕಮಲವನ್ನು ಈಗ ನಾನು ಕಣ್ಣಾರೆ ನೋಡಿ, ಅದಕ್ಕೆ ತಲೆಯನ್ನು ಸೋಕಿಸಿ ನಮಸ್ಕರಿಸು ವಂತಾದರೆ, ನನ್ನ ಭಾಗ್ಯಕ್ಕಿಂತಲೂ ಭಾಗ್ಯವುಂಟೆ ? ನನ್ನ ಪಾಪಶೇಷ ವೆಲ್ಲವೂ ಅಂದಿಗೆ ತೀರಿತು ! ನನ್ನ ಜನ್ಮವು ಸಫಲವಾಯಿತು ? ಪೂರೈದಲ್ಲಿ ಪ್ರಹ್ಲಾದಾದಿಗಳೂಕೂಡ, ಯಾವನ ಕಾಲುಗುರುಗಳ ಕಾಂತಿಯನ್ನು ಹೃದ ಯದಲ್ಲಿ ತಳೆದು, ದುರಂತವಾದ ಸಂಸಾರತಮಸ್ಸನ್ನು ದಾಟಿದರೋ, ಈಗ ಕೃತ್ಯರೂಪದಿಂದವತರಿಸಿದ ಆ ಭಗವಂತನ ಪಾದಕಮಲವನ್ನು ನಾನು ಕಣ್ಣಾರೆ ಕಂಡು ಆನಂದಿಸುವಂತಾಯಿತಲ್ಲಾ ! ಕಂಸನಿಂದಲ್ಲವೇ ನನಗೆ ಈ ಭಾಗ್ಯವು ಲಭಿಸುವಂತಾಯಿತು. ಕಂಸನು ನನ್ನಲ್ಲಿ ಪರಮಾನುಗ್ರಹವನ್ನೇ ತೋರಿಸಿದನು! ಆಹಾ ! ಲೋಕಪ್ರವರ್ತಕರಾದ ಬ್ರಹ್ಮ ರುದ್ರಾದಿದೇವತೆ ಗಳು! ಆ ಬ್ರಹ್ಮಾದಿದೇವತೆಗಳಿಂದಲೂ ಪೂಜಿತಳಾದ ಮಹಾಲಕ್ಷ್ಮಿ! ಆ ಮಹಾಲಕ್ಷ್ಮಿಯೂ ಗೌರವಿಸತಕ್ಕ ಮಹರ್ಷಿಗಳು ! ಆ ಮಹರ್ಷಿಗಳಿಗೂ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೨೭
ಗೋಚರ