ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೩ ಅಧ್ಯಾ, ೩೮.೨ | ದಶಮಸ್ಕಂಧನು. ನೋಡಿ, ಅಯ್ಯಾ ! ಆಕ್ರರಾ ! ಬಂದೆಯಾ ?” ಎಂದು ಮಾತಾಡಿಸದಿರು ವನೆ? ಆ ಮಾತನ್ನು ಕೇಳಿದಾಗಲ್ಲವೇ ನನ್ನ ಜನ್ಮವು ಸಫಲವಾಗುವುದು ! ಅಂತಹ ಮಹಾತ್ಮನಿಂದ ಆದರಿಸಲ್ಪಡದಿದ್ದಮೇಲೆ ಜನ್ಮವೆತ್ತಿ ಫಲವೇನು ? ಅಂತಹ ಜನ್ಮವನ್ನು ಸುಡಬೇಕು ! ಆತನು ಸರಸಮನಾದುದರಿಂದ, ಅವನಿಗೆ ಪ್ರಿಯನೆಂದೂ, ಆಪ್ರಿಯನೆಂದೂ, ದ್ವೇಷಿಯಂದೂ, ಉದಾಸೀನನೆಂದೂ, ಯಾರಲ್ಲಿಯೂ ಭೇದಬುದ್ದಿಯೇ ಹುಟ್ಟಲಾರದು. ಹಾಗಿದ್ದರೂ, ಕಲ್ಪವು ಕ್ಷವು ತನ್ನಲ್ಲಿ ಬಂದು ಕೇಳಿದವರಿಗೆಮಾತ್ರವೇ ಕೋರಿದ ಫಲಗಳನ್ನು ಕೊಡು ವಂತೆ, ಆತನೂ ತನ್ನನ್ನು ಭಜಿಸಿದವರನ್ನೇ ತಾನೂ ಭಜಿಸುವನು. ಇದನ್ನು ವೈಷಮ್ಯವೆಂದು ಹೇಳಬಹುದೆ ? ಈಗ ನನಗೆ ದೈವಾಧೀನವಾಗಿ ಅವನ ಸ್ನಾಶ್ರಯಿಸತಕ್ಕ ಭಾಗ್ಯವು ಲಭಿಸಿತು ! ಅವನ ಅಣ್ಣನಾದ ಬಲರಾಮನೂ ಕೂಡ, ನಾನು ಹೋಗಿ ನಮಸ್ಕರಿಸಿದೊಡನೆ, ಹಸನ್ಮುಖನಾಗಿ ಬಂದು, ನನ್ನ ನಾಲಿಂಗಿಸಿ, ಮನೆಗೆ ಕರೆದುಕೊಂಡು ಹೋಗಿ, ನನ್ನನ್ನು ಸತ್ಕರಿಸಿ, ಆಮೇಲೆ ಕಂಸನು ತನ್ನ ಬಂಧುಗಳವಿಷಯದಲ್ಲಿ ನಡೆಸುವ ಕೂರಕೃತ ಗಳನ್ನು ಕುರಿತು ತಾನಾಗಿಯೇ ಪ್ರಶ್ನೆ ಮಾಡುವನು.” ಎಂದು ತನ್ನಲ್ಲಿ ತಾನೇ ಆಲೋಚಿಸುತ್ತಿದ್ದನು. ಹೀಗೆ ಅಕ್ರೂರನು ದಾರಿಯುದ್ದಕ್ಕೂ ಕೃಷ್ಣನನ್ನೇ ಚಿಂತಿಸುತ್ತ, ರಥಾರೂಡನಾಗಿ ಗೋಕುಲದ್ವಾರದ ಸಮೀಪಕ್ಕೆ ಬರವಷ್ಟರಲ್ಲಿ, ಸೂರಾ ಸಮಯವಾಗುತ್ತ ಬಂದಿತು. ಯಾವನ ಪಾದರೇಣುವನ್ನು ಸಮಸ್ತಲೋಕ ಪಾಲಕರೂ ಅತ್ತಾವರದಿಂದ ತಮ್ಮ ಕಿರೀಟದಲ್ಲಿ ಧರಿಸುವರೋ, ಆ ಕೃಷ್ಣನ ಹಜ್ಜೆಯ ಗುರುತುಗಳು ಅಲ್ಲಲ್ಲಿ ನೆಲದಮೇಲೆ ಗೋಚರಿಸುತ್ತಿದ್ದುವು. ಪದ್ಮ ರೇಖೆ, ಯವರೇಖೆ, ಅಂಕುಶರೇಖೆ, ಮುಂತಾದ ಶುಭಲಕ್ಷಣಗಳಿಂದ ಅಲ್ಲಿನ ಭೂಮಿಗೆ ಅಲಂಕಾರಭೂತವಾಗಿದ್ದ ಆ ಪಾದಚಿಹ್ನಗಳನ್ನು ಕಂ ಡಾಗ, ಅಕ್ರೂರನ ಸಂತೋಷಸಂಭ್ರಮಗಳನ್ನು ಕೇಳಬೇಕೆ ? ಅದನ್ನು ಕಂಡೊಡನೆ ಆನಂದದಿಂದ ಅವನ ದೇಹವೆಲ್ಲವೂ ಪುಳಕಿತವಾಯಿತು ! ಅವನ ಕಣ್ಣುಗಳಲ್ಲಿ ಆನಂದಬಾಷ್ಪವು ತುಳುಕುತ್ತಿತ್ತು! ತಟ್ಟನೆ ರಥದಿಂದ ಕೆಳಕ್ಕೆ ಧುಮಿಕಿ, (ಆಹಾ ! ಇದೋ ! ಆನನ್ನ ಪ್ರಭುವಾದ ಕೃಷ್ಣನ ಪಾದ