ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೫ ಅಧ್ಯಾ. ೩೮.] ದಶಮಸ್ಕಂಧನು. ಸ್ನಾನಮಾಡಿ, ಶುದ್ಧವಾದ ಮಡಿಬಟ್ಟೆಯನ್ನು , ದಿವ್ಯಚಂದನವನು ಮೈಗೆ ಲೇಪಿಸಿಕೊಂಡು,ಮಂದೆಯಲ್ಲಿ ಸಂಚರಿಸುತಿದ್ದರು. ಸೃಷ್ಟಿಗೆ ಮೊದ ಲೇ ಯಾವನು ಜಗತ್ಕಾರಣನಾದ ಪ್ರಧಾನಪುರುಷನೆನಿಸಿಕೊಂಡಿದ್ದ ನೋ, ಈ ಜಗತ್ತೆಲ್ಲವೂ ಯಾವನ ಶರಿರವೆನಿಸಿಕೊಂಡಿರುವುದೋ, ಆ ಪರ ಮಾತ್ಮನೇ ಲೋಕರಕ್ಷಣಾರವಾಗಿ, ತನ್ನ ಸಂಕಲ್ಪದಿಂದ ಈ ರಾಮಕೇಶವ ರೆಂಬ ಎರಡುರೂಪಗಳಿಂದವತರಿಸಿರುವಾಗ, ಅವರ ದಿವ್ಯ ತೇಜಸ್ಸನ್ನು ಕೇಳ ಬೇಕೆ ? ಅವರಿಬ್ಬರೂ ಸುವರ್ಣಮಿತ್ರಿತಗಳಾದ ಸೀಲರಜತಶೈಲಗಳಂತೆ ಶೋಭಿಸುತ್ತ, ತಮ್ಮ ದೇಹಕಾಂತಿಯಿಂದ ದಿಕ್ಕುಗಳೆಲ್ಲವನ್ನೂ ಬೆಳಗುತಿದ್ದರು. 02 ರಾಮಕೃಷ್ಣರನ್ನು ಕಂಡೊಡನೆ, ಅಕ್ರ ನು ತಟ್ಟನೆ ರಥದಿಂದಿಳಿದು ಅವರಮುಂದೆ ಸಾಷ್ಟಾಂಗಪ್ರಣಾಮವನ್ನು ಮಾಡಿದನು. ಆ ಮಹಾ ತ್ಮರ ದರ್ಶನದಿಂದುಂಟಾದ ಮಹಾವಂದವು ಅವನಿಗೆ ಮೈಮರೆಯು ವಂತೆ ಮಾಡಿತು. ಅವನ ಕಣ್ಣುಗಳಲ್ಲಿ ಆನಂದಬಾಷ್ಪವು ತಳಕುಕಿತ್ತು. ಅವನ ದೇಹವು 'ಪುಳಕಿತವಾಯಿತು. ತನ್ನ ಹೆಸರನ್ನು ತಿಳಿಸುವುದಕ್ಕೂ ಧ್ವನಿ ಯು ಹೊರಡದಂತಾಯಿತು ಇದನ್ನು ನೋಡಿ ಆಿತವತ್ಸಲನಾದ ಕೃಷ್ಣ ನು, ತಾನಾಗಿಯೇ ಮುಂದೆ ಬಂದು, ಚಕ್ರಾಂಕಿತವಾದ ತನ್ನ ಕೈಯನ್ನು ನೀಡಿ, ಅವನನ್ನು ಸಮೀಪಕ್ಕೆ ಕರೆದು, ಪ್ರೇಮಪೂರಕವಾಗಿ ಅವನನ್ನಾ ಲಿಂಗಿಸಿ ಕೊಂಡನು. ಆಮೇಲೆ ಬಲರಾಮನೂಕೂಡ, ತನಗೆ ಪ್ರಣಾಮಮಾಡಿದ ಆಕ್ರ ನನ್ನು ಕೈಹಿಡಿದು ಕರೆದುಕೊಂಡು, ಕೃಷ್ಣನೊಡನೆ ತನ್ನ ಮನೆಗೆ ಬಂದನು. ಅಲ್ಲಿ ಆಕ್ರೋಸಿಗೆ ಉಚಿತಾಸನವನ್ನು ಕೊಟ್ಟು, ಕುಶಲಪ್ರ ವನ್ನು ಮಾಡಿ, ಅವನ ಕಾಲನ್ನು ತೊಳೆದು, ಯಥಾವಿಧಿಯಾಗಿ ಪ್ರತಿಭೆಗಳಿಗೆ ಕೊಡತಕ್ಕ ಮಧುಪರ್ಕವನ್ನೂ , ಗೋರಸವನ್ನೂ ಕೊಟ್ಟು ಸತ್ಕರಿಸಿದನು. ಮಾರ್ಗಾಯಾಸಪರಿಹಾರವಾಗುವಂತೆ, ಅವನ ಕಾಲುಗಳನ್ನೊ ತುವುದ ಕೈಾಗಿ ಸಮರರಾದ ಸೇವಕರನ್ನು ನಿಯಮಿಸಿದನು. ಮೃಷ್ಟಾನ್ನ ವಸ್ತಿಕ್ಕಿಸಿ ಭೋಜನಮಾಡಿಸಿದನು. ಭೋಜನವಾದಮೇಲೆ ಕರಾದಿಸುವಾಸನೆಗೆ ಳುಳ್ಳ ಗಂಧಪಷ್ಟತಾಂಬೂಲಾದಿಗಳನ್ನು ಕೊಡಿಸಿ, ಅವನಿಗೆ ವಿಶೇಷಸಂ ತೋಷವನ್ನುಂಟುಮಾಡಿದನು. ಹೀಗೆ ಅತಿಥಿಸತ್ಕಾರಗಳೆಲ್ಲವೂ ಮುಗಿದ