ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೮ ಶ್ರೀಮದ್ಭಾಗವತವು [ಅಧ್ಯಾ. ೩೯. ತಮ್ಮ ಜನಕನಾದ ನಂದನಿಗೆ ತಿಳಿಸಿದರು. ನಂದನು ಕೇವಲಋಜುಬುದ್ಧಿಯು ಕೃವನಾದುದರಿಂದ ಆಗಲೇ ಗೋಪಾಲಕರನ್ನು ಕರೆದು ಓ ಗೋಪಾಲಕರೆ! ನಮ್ಮ ಹಳ್ಳಿಯಲ್ಲಿ ಸಿಕ್ಕುವ ಹಾಲು ಮೊಸರು ಬೆಣ್ಣೆಗಳೆಲ್ಲವನ್ನೂ ಸಂಗ್ರಹಿ ಸಿಡಿರಿ! ಕಾಣಿಕೆಗಳನ್ನು ಸಿದ್ಧಪಡಿಸಿರಿ! ಬಂಡಿಗಳನ್ನು ಕಟ್ಟಿಸಿರಿ ! ನಾಳೆಯೇ ನಾವು ಮಧುರಾಪುರಿಗೆ ಹೋಗಿ, ಕಂಸನಿಗೆ ಕಾಣಿಕೆಗಳನ್ನೂ, ಗೋರಸಗಳ ನ್ನೂ ಒಪ್ಪಿಸಿಬಿಡಬೇಕು. ಅಲ್ಲಿ ನಾಳೆ ಧಮರ್ಯಾಗವೆಂಬ ಒಂದು ದೊಡ್ಡ ಯಾಗವು ನಡೆಯುವುದಂತೆ ! ನಾವೂ ಆ ಉತ್ಸವವನ್ನು ನೋಡಿ ಬರಬಹುದು! ಊರೂರುಗಳಿಂದ ಅದನ್ನು ನೋಡುವುದಕ್ಕಾಗಿ ಜನರಗುಂಪು ಸೇರುತ್ತಿರುವು ದಂತೆ.” ಎಂದನು. ಮತ್ತು ತನ್ನ ಬಂಡಿಯಾಳಿನಮಲಕವಾಗಿ ಊರ ಲ್ಲೆಲ್ಲಾ ಸರಿಸಿದನು. ಆಕ್ರನು ರಾಮಕೃಷ್ಣರನ್ನು ಕರೆದುಕೊಂಡು ಹೋಗುವುದಕ್ಕಾಗಿ ಬಂದಿರುವ ಸಂಗತಿಯೂ, ಊರಲ್ಲೆಲ್ಲಾ ಹರಡಿ ಕೊಂಡಿತು. ರಾಮಕೃಷ್ಣರು ಪ್ರಯಾಣಮಾಡುವರೆಂಬ ಸುದ್ದಿಯನ್ನು ಕೇಳಿದೊಡನೆ, ಕೆಲವು ಗೋಪಿಯರು ಹೃದಯತಾಪದಿಂದ ಸಿಟ್ಟು ಸಿರುಬಿಡುತ್ತಿದ್ದರು. ಕೆಲವರ ಮುಖವು ಕಂತು. ಕೆಲವರು ದುಖದಿಂದ ಮೈಮರೆತು ಹೊರಳುತ, ಬಿಚಿ ದ ತಲೆಯನೂ ಸಡಿಲಿದ ಸೀರೆಯನೂ ತಿಳಿಯದೆ ಚಿಂತಾಕುಲರಾಗಿದ್ದರು ಬೇರೆ ಕೆಲವರು. ಆ ಕೃಷ್ಣನನ್ನೇ ಮನಸ್ಸಿ ನಲ್ಲಿ ಧ್ಯಾನಿಸುತ್ತ ಇತರ ವ್ಯಾಪಾರಗಳೆಲ್ಲವನ್ನೂ ಮರೆತು, ಆತ್ಮಧ್ಯಾನ ದಲ್ಲಿರುವ ಯೋಗಿಗಳಂತೆ, ಈ ಪ್ರಪಂಚವನ್ನೇ ತಿಳಿಯದಿದ್ದರು. ಮತ್ತೆ ಕೆಲ ವರು ಆ ಕೃಷ್ಣನು ತಮ್ಮಲ್ಲಿ ತೋರಿಸುತ್ತಿದ್ದ ಮಂದಹಾಸವನ್ನೂ , ಮನೋ ಹರವಾದ ಅವನ ಮಾತುಗಳನ್ನೂ, ಆತನ ವಿಚಿತ್ರಲೀಲೆಗಳನ್ನೂ, ಸ್ನೇಹ ಪೂರ್ವಕವಾದ ಅವನ ದೃಷ್ಟಿಯನ್ನೂ, ದುಖನಿವಾರಕವಾದ ಆತನ ನಮ್ಮ ವಾಕ್ಯಗಳನ್ನೂ; ಅವನು ಆಗಾಗ ನಡೆಸುತ್ತಿದ್ದ ಅದ್ಭುತ ಕಾವ್ಯಗಳನ್ನೂ , ಮನ ಸ್ಸಿನಲ್ಲಿ ಸ್ಮರಿಸಿಕೊಂಡು ಹಾಗೆಯೇ ಮೂರ್ಛಬಿದ್ದರು. ಅಕೃಷ್ಣನನ್ನು ಸ್ಮ ರಿಸಿಕೊಂಡಹಾಗೆಲ್ಲಾ ಅವರಿಗೆ ವಿರಹಸಂಕಟದಿಂದ ಹೃದಯವು ನಡುಗು ತಿತ್ತು, ಈ ಸುದ್ದಿಯನ್ನು ಕೇಳಿದ ಗೋಪಿಯರೆಲ್ಲರೂ ಒಂದು ಕಡೆಯಲ್ಲಿ ಗುಂಪಾಗಿ ಸೇರಿ ಕಣ್ಣೀರುಬಿಡುತ್ತ ಹಾವಿಥೀ! ನಿನಗೆ ಯಾರಲ್ಲಿಯ ,