೨೦೧೨ ಶ್ರೀಮದ್ಭಾಗವತವು [ಅಧ್ಯಾ. ೩೯. ಹೊರಡುವುದಕ್ಕೆ ಸಿದ್ಧವಾಗುವಷ್ಟರಲ್ಲಿ, ನಂದಾದಿಗೋಪಾಲಕರೂ, ತಮ್ಮ ತಮ್ಮ ಬಂಡಿಗಳನ್ನು ಕಟ್ಟಿಕೊಂಡು, ಹಾಲು, ಮೊಸರು, ಮೊದಲಾದ ಕೈಕಾ ಣಿಕೆಗಳನ್ನೂ ಸಂಗ್ರಹಿಸಿಕೊಂಡು ಹೊರಟರು. ಗೋಪಿಯರೂಕೂಡ, ತಮ ಗೆ ಪ್ರಿಯನಾದ ಕೃಷ್ಣನ ರಥವನ್ನು ಹಿಂಬಾಲಿಸುತ್ತ, ಆ ಕೃಷ್ಣನು ತಮಗೆ ಯಾವಸಮಾಧಾನವನ್ನು ಹೇಳುವನೋ ಎಂದು, ಹಿಂದೆಯೇ ಹೋಗುತಿದ್ದ ರು.ಹೀಗೆ ಗೋಪಿಯರು ತನ್ನ ಪ್ರಯಾಣಕಾಲದಲ್ಲಿ ಬಹಳವಾಗಿ ತಪಿಸುತ್ತಿ ರುವುದನ್ನು ನೋಡಿ ಕೃಷ್ಣನು, ತಾನು ಶೀಘ್ರದಲ್ಲಿಯೇ ಹಿಂತಿರುಗಿ ಬರುವು ಬಾಗಿ ದೂತರಮುಖರಿಂದ ಸಮಾಧಾನವನ್ನು ಮಾಡಿ ಕಳುಹಿಸಿದನು.ಕೃಷ್ಣ ನ ರಥವು ಮುಂದೆ ಹೊರಟಿತು.ಇತ್ತಲಾಗಿ ಗೋಪಿಯರು, ಮೊದಲು ತಮ್ಮ ಕಣ್ಣಿಗೆ ಆ ಕೃಷ್ಣನ ರಥವು ಬೀಳುವವರೆಗೂ ನಟ್ಟ ಕಣ್ಣಿನಿಂದ ಅದನ್ನೆ ನೆಡತ್ತಿದ್ದರು ಕ್ರಮಕ್ರಮವಾಗಿ ರಥವು ಮರೆಸಿಹೋಗುತ್ತಬಂದು, ಅದರ ಧ್ವಜದಂಡವು ಮಾತ್ರ ಕಾಣುತಿತ್ತು. ಸ್ವಲ್ಪ ಹೊತ್ತಿನೊಳಗಾಗಿ ಅದೂ ಕಣ್ಮರೆಯಾಗಿ, ರಥದ ಧೂಳುಮಾತ್ರ ಆಕಾಶದಲ್ಲಿ ಕಾಣಿಸುತು .ಕೊನೆಗೆ ಅದೂ ಮರೆಸಿಹೋಯಿತು. ಈ ಗುರುತುಗಳೆಲ್ಲವೂ ಚೆನ್ನಾಗಿ ಮರೆಸಿಕೊ ಗುವವರೆಗೆ, ಆ ಸ್ತ್ರೀಯರು ಅದನ್ನೇ ನೋಡು, ಚಿತ್ರದ ಬೊಂಬೆಗಳಂತೆ ನಿಂತಿದ್ದರು. ಕೊನೆಗೆ ಅವರೆಲ್ಲರೂ ನಿರಾಶರಾಗಿ ಮನೆಗೆ ಬಂದು, ಹಗಲು ರಾತ್ರಿಯೂ ಆ ಕೃಷ್ಣನ ಗುಣಗಳನ್ನೇ ಹಾಡುತ್ತ ಬನಗಳನ್ನು ಕಳೆಯು ತಿದ್ದರು ಇತ್ತಲಾಗಿ ರಾಮಕೃಷ್ಣರಿಬ್ಬರೂ ಅಕ್ರೂರನೊಡನೆ ರಥದಲ್ಲಿ ಕುಳಿ ತು ವಾಯುವೇಗದಿಂದ ಪ್ರಯಾಣಮಾಡಿ, ಸ್ವಲ್ಪ ಕಾಲದೊಳಗಾಗಿ ಯ ಮುನಾತೀರಕ್ಕೆ ಬಂದು ಸೇರಿವರು ಕೃಷ್ಣನು ಬಲರಾಮನೊಡನೆ ಆಗ್ಲಿ ಸ್ನಾ ನವನ್ನು ಮಾಡಿ, ಸಾಣೆಯಿಕ್ಕಿದ ಇಂದ್ರನೀಲದಂತೆ ಸ್ವಚ್ಛವಾದ ಆನದಿಯ ಜ ಲವನ್ನು ಸಂತೋಷದಿಂದ ಪಾನ ಮಾಡಿ, ತೀರವೃಕ್ಷಗಳ ನೆಳಲಲ್ಲಿ ಸ್ವಲ್ಪವಾಗಿ ವಿಶ್ರಮಿಸಿಕೊಂಡಿದ್ದು ರಥವನ್ನೇರಿದನು. ಆ ರಾಮಕೃಷ್ಣರಿಬ್ಬರನ್ನೂ ಕರೆ ತಂದು ರಥದಲ್ಲಿ ಕುಳ್ಳಿರಿಸಿದಮೇಲೆ, ಅಕ್ಕರನು ಅವರ ಅನುಜ್ಞೆಯನ್ನು ಪ ಡೆದು, ತಾನೂ ಯಥಾವಿಧಿಯಾಗಿ ಸ್ನಾನಮಾಡಬೇಕೆಂದು ಹೊರಟು, ಪ್ರಣವ ಮಂತ್ರವನ್ನು ಜಪಿಸುತ್ತ ನೀರಿನಲ್ಲಿ ಮುಳುಗಿದನು. ತಾನು ಆಗಲೇ ರಥದಲ್ಲಿ.
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪೨
ಗೋಚರ