ಅಚ್ಛಾ ೩೯.] ದಶಮಸ್ಕಂಧವ ೨೦೧೩ ಕುಳ್ಳಿರಿಸಿ ಬಂದ ರಾಮಕೃಷ್ಣರಿಬ್ಬರೂ ಜಲಮಧ್ಯದಲ್ಲಿ ಅವನ ಕಣ್ಣಿಗೆ ಗೋಚರಿಸಿದರು. ಆಗ ಅವನಿಗುಂಟಾದ ಪರಮಾಶ್ರವನ್ನು ಕೇಳ ಬೇಕೆ ? ಹಿಂದುಮುಂದುತೋರದೆ ವಿಭ್ರಾಂತನಾಗಿ ತನ್ನಲ್ಲಿ ತಾನು ಆ ಹಾ! ಏನಿದು ? ನಾನು ಈಗಲೆ ರಥವನ್ನೆ ರಿಸಿ ಬಂದ ರಾಮಕೃಷ್ಣರಿಬ್ಬ ರೂ ಇಲ್ಲಿಗೆ ಹೇಗೆ ಬಂದರು? ಒಂದುವೇಳೆ ನಾನು ಅಲ್ಲಿಂದ ಹಿಂತಿರುಗಿದೊಡ ನೆ ನನಗೆ ತಿಳಿಯದಹಾಗೆ ಅವರೂ,ರಥವನ್ನಿಳಿದು, ಮುಂದೆ ಓಡಿಬಂದಿರಬಹುದೆ? ಇದ್ದರೂ ಇರಬಹುದು ! ಹಾಗಿದ್ದರೆ ಈಗ ಅವರು ರಥದಲ್ಲಿಲ್ಲದಿರಬೇಕಲ್ಲವೆ? ಇರಲಿ! ಅಲ್ಲಿ ಹೋಗಿ ನೋಡಿಬರುವೆನು.”ಎಂದು ರಥದಕಡೆಗೆ ನೋಡುವಾಗ, ರಥದಲ್ಲಿ ಮೊದಲಿನಂತೆಯೇ ಅವರು ಕುಳಿತಿರುವುದನ್ನು ಕಂಡನು. ಆಗ ಮತ್ತೆ ಹು, ಏಸ್ಮಿತನಾಗಿ ಇದೇನಿದು ! ನಾನು ನೀರಿನಲ್ಲಿ ನೋಡಿದರೇ ಕೇವಲ ಭಾಂತಿಯಾಗಿರಬಹುದೆ ? ” ಎಂದು ತಿರುಗಿ ಮುಳುಗಿನೋಡಿದಾಗ, ಅಲ್ಲಿ ಅನೇಕಸಿದ್ಧಗಣಗಳಿಂದಲೂ, ನಾಗರಿಂದಲ, ದೇವತೆಗಳಿಂದಲೂ ಪ್ರ ನಾಮಪೂರೈಕವಾಗಿ ಸ್ತುತಿಸಲ್ಪಡುತ್ತಿರುವ ಆದಿಶೇಷನನ್ನು ಕಂಡನು. ಅವಸಿ ಗೆ ದಿವ್ಯಕಿರೀಟಶೋಭಿತಗಳಾದ ಸಹಸ್ರತಿರಸ್ಸುಗಳು ! ತಾವರೆದಂಟಿನಂತೆ ಬಿಳುಪಾದ ಮೈ! ಆದಮೇಲೆ ನೀಲವರ್ಣದ ಪಟ್ಟಿ ಮಡಿ! ಇಂತಹ ಹವಾ ದ್ಭುತರೂಪದಿಂದ, ಸುವರ್ಣಶಿಖರಗಳುಳ್ಳ ರಜತಪರತದಂತೆ ಶೋಭಿಸುತ್ತಿ ರುವ ಆ ಆದಿಶೇಷನ ಶರೀರದಲ್ಲಿ, ಮೇಘಶ್ಯಾಮಲಮೂರ್ತಿಯಾಗಿ, ಪೀತಾಂ ಬರವನ್ನು ಟು ಮಲಗಿದ್ದ ಮಹಾಪುರುಷನನ್ನೂ ಕಂಡನು. ಅವನಿಗೆ ನಾಲ್ಕು ಭುಜಗಳು!ಸೌಮ್ಯವಾದ ಆಕೃತಿ ! ಕಮಲದಳದಂತೆ ವಿಶಾಲವಾದ ಕಣ್ಣುಗ ಳು : ಪ್ರಸನ್ನ ವಾದ ಮುಖದ ಸೊಗಸು! ಮಂದಹಾಸದಿಂದರಳಿದ ಕಣ್ಣುಗ ಳು ! ಅಂದವಾದ ಹುಬ್ಬು ! ಎತ್ತರವಾದ ಮಗು!ಸುಂದರವಾದ ಕಿವಿಗಳು! ನುಣುಪಾದ ಕೆನ್ನೆ ಕೆಂಪಾದ ತುಟಿ: ದುಂಡಾಗಿ ನೀಡಿದ ತೋಳುಗಳು ! ಬ್ಬಿದ ಹೆಗಲು ! ಎದೆಯಲ್ಲಿ ಮಹಾಲಕ್ಷ್ಮಿ ! ಶಂಖದಂತೆ ಕೋರಲು! ಆಳವಾದ ಹೊಕ್ಕುಳು ! ಚಿಗುರೆಲೆಯಂತೆ ತೆಳುವಾಗಿ, ತ್ರಿವಳಿಗಳಿಂದ ಕೂಡಿದ ಉದರೆ ಪ್ರದೇಶದ ಸೊಗಸು! ವಿಶಾಲವಾದ ಕಟಿತಟಗಳು ! ಆನೆಯ ಸುಂಡಿಲಿನಂತೆ ಉಬ್ಬಿ ದುಂಡಾದ ತೊಡೆಗಳು! ಸುಂದರವಾದ ಜಾನುಗಳು! ನೀಡಿದ ಮೋಳ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪೩
ಗೋಚರ