೨೦೧೬ ಶ್ರೀಮದ್ಭಾಗವತರು [ಅಧ್ಯಾ. ೪೦ ರರೆಂಬುದನ್ನು ಹೇಳಬೇಕಾದುದೇನು? ಆದುದರಿಂದ ನೀನು ಸರಕಾರ ಣನೆಂಬುದು ಎಲ್ಲರಿಗೂ ತಿಳಿಯಲಾರದು. ನೀನು ಪ್ರಕೃತಿಗಿಂತಲೂ, ಆ ಪ್ರಕೃತಿಸಂಬಂಧವುಳ್ಳ ಬದ್ಯಮುಕ್ತಜೀವರಿಗಿಂತಲೂ, ನಿತ್ಯಮುಕ್ತರಿಗಿಂತ ಲೂ ವಿಲಕ್ಷಣನಾದುದರಿಂದಲೇ ಯೋಗಿಗಳು ನಿನ್ನನ್ನು ಮಹಾಪುರುಷನೆಂ ದು ತಿಳಿದು ಉಪಾಸಿಸುವರು. ಅಂತರಾಹಿತ್ಯವಿದ್ಯೆಯಲ್ಲಿ ನಿಷ್ಠರಾದ ಸಾಧು ಗಳು, ನೀನು ಆದಿತ್ಯಮಂಡಲಮಧ್ಯವರ್ತಿಯಾಗಿಯೂ, ಇಂದ್ರಾದೇವ ತಾಂತರಾಮಿಯಾಗಿಯೂ ಇರುವುದರಿಂದ ಸಾಧಿದೈವವೆಂದು ಉಪಾಸಿ ಸುವರು. ಸೀನು ಶರೀರಾವಯವಗಳಲ್ಲಿರುವುದನ್ನು ತಿಳಿದ ಕೆಲವರು, ನಿನ್ನನ್ನು ಸಾಧ್ಯಾತ್ಮನೆಂದು ಉಪಾಸಿಸುವರು. ಮತ್ತೆ ಕೆಲವರು ಸಶರೀರಕ ನಾಗಿ ಸತ್ವಭೂತಗಳಲ್ಲಿಯೂ ಇರುವ ನಿನ್ನನ್ನು ಸಾಧಿಭೂತನೆಂದು ಉಪಾಸಿಸುವರು. ಕರಸಿಷ್ಠರಾದ ಬ್ರಾಹ್ಮಣರು, ವೇದದ ಪೂರ ಭಾಗದಲ್ಲಿ ಹೇಳಲ್ಪಟ್ಟ ನಾನಾವಿಧಕ್ಕಠ್ಯಗಳಮೂಲಕವಾಗಿ, ಸರೋದೇವತಾತ್ಮ ಕನಾದ ನಿನ್ನನ್ನೇ ಇಂದ್ರಾದಿದೇವತಾರೂಪದಿಂದ ಆರಾಧಿಸುವರು. ನಿನ್ನ ಸ್ವ ರೂಪಗುಣಾದಿಗಳೆಲ್ಲವನ್ನೂ ಚೆನ್ನಾಗಿ ತಿಳಿದ ಜ್ಞಾನಿಗಳು, ತಮ್ಮ ಸಮಸ್ಯ ಕರ ಫಲಗಳನ್ನೂ ನಿನ್ನಲ್ಲಿಯೇ ಅರ್ಪಿಸಿ, ಸರೂವಿಧದಲ್ಲಿಯೂ ತಾವು ನಿನಗೆ ಶೇಷಭೂತರೆಂದು ತಿಳಿದು, ಅಹಂಕಾರಮಮಕಾರಾದಿಗಳನ್ನು ಬಿಟ್ಟು, ಜ್ಞಾನಸ್ವರೂಪನಾದ ನಿನ್ನನ್ನು ಜ್ಞಾನಯೋಗದಿಂದಲೇ ಆರಾಧಿಸುವರು. ನಿನ್ನಿಂದುಪದೇಶಿಸಲ್ಪಟ್ಟ ಪಾಂಚರಾತ್ರಶಾಸ್ತ್ರಕ್ರಮದಿಂದ ಪಂಚಸಂಸ್ಕಾ ರಗಳನ್ನು ಹೊಂದಿ ಶುದ್ಧಾತ್ಮರಾದವರು, ನಿನ್ನಲ್ಲಿಯೇ ನಟ್ಟ ಮನಸ್ಸುಳ್ಳವ ರಾಗಿ, ಪರಸ್ವರೂಪದಲ್ಲಿ ಏಕಮೂರ್ತಿಯಾಗಿಯೂ, ವ್ಯೂಹವಿಭವಾದ್ಯವತಾ ರಗಳಿಂದ ಬಹುಮೂರ್ತಿಯಾಗಿಯೂ ಇರುವ ನಿನ್ನನ್ನು, ಆ ಪಾಂಚರಾತ್ರ ಶಾಸೂಕ್ತವಾದ ಪೂಜಾವಿಧಿಗಳಿಂದಲೇ ನಿನ್ನನ್ನು ಆರಾಧಿಸುವರು. ಶೈ ನಾಗಮನಿಷ್ಠರಾದ ಶೈವ, ಕಾಪಾಲಿಕ, ಪಾಶುಪತಾದಿಗಳೂಕೂಡ, ತ 'ಮ್ಮ ಶಾಸ್ತ್ರವಿಧಿಯನ್ನನುಸರಿಸಿ, ನಿನ್ನನ್ನೇ ತಿವರೂಪದಿಂದ ಭಾವಿಸಿ ಉಪಾ ಸಿಸುವರು. ಹೀಗೆ ಲೋಕದಲ್ಲಿ ಬೇರೆಬೇರೆ ದೇವತೆಗಳನ್ನು ಭಜಿಸತಕ್ಕ ಆ ಯಾಜನರು, ನಿನೇ ಸರದೇವತಾತ್ಮಕನೆಂಬುದನ್ನು ತಿಳಿಯದೆ, ತಮ್ಮ ತಮ್ಮ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪೬
ಗೋಚರ