ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೧೮ ಶ್ರೀಮದ್ಭಾಗವತವು ಅಧ್ಯಾ. ೪೦, ಪತಿಯು ನಿನ್ನ ಪುರುಷಲಿಂಗವು! ಮಳೆಯೆಂಬುದು ನಿನ್ನ ವೀರವು' ಓ ಅವ್ಯ ಯಾತ್ರಾ' ಅನೇಕಜೀವರಾಶಿಗಳಿಂದಲೂ, ಅವುಗಳ ಪಾಲಕರಿಂದಲೂ ತುಂಬಿದ ಸಮಸ್ತಲೋಕಗಳೂ, ಜಲದಲ್ಲಿರುವ ಸಣ್ಣ ಜಂತುಗಳಂತೆಯೂ, ಅತ್ತಿಯ ಹಣ್ಣಿನೊಳಗೆ ಸೇರಿರುವ ಕ್ರಿಮಿಗಳಂತೆಯೂ, ಪರಮಪುರುಷನಾದ ನಿನ್ನಲ್ಲಿಯೇ ಅಡರುವುವು. ಇಂತಹ ಮಹಾಮಹಿಮೆಯುಳ್ಳ ಸೀನು, ಕೇವಲ ಪಿನೋದಾದ್ಯವಾಗಿ ಲೋಕದಲ್ಲಿ ಹೀಗೆ ನಾನಾರೂಪಗಳನ್ನೆತ್ತುತ್ತಿರುವೆ ! ಈ ನಿನ್ನ ರೂಪಗಳನ್ನೂ , ಈ ರೂಪಗಳಿಂದ ನೀನು ನಡೆಸತಕ್ಕ ಕಾವ್ಯಗಳನ್ನೂ, ನಿನ್ನ ಗುಣಗಳನ್ನೂ ಅನುಸಂಧಾನಮಾಡುವುದರಿಂದ, ಚೇತನರು ತಮ್ಮ ದುಃಖವನ್ನು ನೀಗಿ, ನಿತ್ಯಸಂತೋಷಿಗಳಾಗಿ, ಆ ನಿನ್ನ ಗುಣಗಳನ್ನೇ ಗಾನ ಮಾಡುತ್ತಿರುವರು. ದೇವಾ' ಜಗತ್ತಿನ ಸ್ಥಿತಿಗೆ ಕಾರಣನಾಗಿ, ಪ್ರಳಯಸಮು ದ್ರದಲ್ಲಿ ಮತ್ಸರೂಪುಂದ ಸಂಚರಿಸುತಿದ್ದ ನಿನಗೆ ನಮಸ್ಕಾರವು!ಹಯ ಗ್ರೀವರೂಪದಂದ ಮಧುಕೈಟಭರನ್ನು ಸಂಹರಿಸಿದ ನಿನಗೆ ನಮಸ್ಕಾರವು. ಮಹಾಕೊಮ್ಮನಾಗಿ ಮಂದರಸತವನ್ನು ಬೆನ್ನ ಮೇಲೆ ಧರಿಸಿದ ನಿನಗೆ ನಮ ಸಾರವು. ವರಾಹರೂಪದಿಂದ ಭೂಮಿಯನ್ನು ದರಿಸಿದ ನಿನಗೆ ನಮಸ್ಕಾರವು. ಅದ್ಭುತವಾದ ಸಿಂಹಸ್ವರೂಪವನ್ನು ತಾಳಿ,ಸಾಧುಜನಗಳ ಭಯವನ್ನು ನೀಗಿ ಸಿದ ನಿನಗೆ ನಮಸ್ಕಾರವು! ವಾಮನಮೂರ್ತಿಯಾಗಿ ತ್ರೈಲೋಕ್ಯವನ್ನೂ ಮರಡಿಗಳಂದಳದ ಸಿನಗೆ ನಮಸ್ಕಾರವು: ಪರಶುರಾಮನಾಗಿ ಬೃಗುವಂಶ ದಲ್ಲಿ ಅವತರಿಸಿ, ಮದಾಂಥರಾದ ಕ್ಷತ್ರಿಯರನ್ನ ಡಗಿಸಿದ ನಿನಗೆ ನಮಸ್ಕಾರವು! ಶ್ರೀರಾಮರೂಪಂದ ರಾವಣನನ್ನು ಸಂಹರಿಸಿದ ನಿನಗೆ ನಮಸ್ಕಾರವು ಈಗ ವಸುದೇವಪುತ್ರನಾಗಿ ಅವತರಿಸಿರುವ ಸಿನಗೆ ನಮಸ್ಕಾರವು ! ವಾಸುದೇವ, ಸಂಕರ್ಷಣ, ಪ್ರದ್ಯುಮ್ಮ , ಅನಿರುದ್ಯರೆಂಬ ನಾಲ್ಕು ಬಗೆಯ ವ್ಯೂಹಾವತಾರ ಗಳನ್ನು ಧರಿಸಿದ ನಿನಗೆ ನಮಸ್ಕರವು, ಭಕ್ತಪರಿಪಾಲನಕ್ಕಾಗಿ ಈಗ ಯಾದ ವಕುಲಪತಿಯಾಗಿರುವ ನಿನಗೆ ನಮಸ್ಕಾರವು. ಯಾವಾಗಲೂ ಶುದ್ಧಚರಿತ್ರ ನಾಗಿದ್ದರೂ, ವೇದಾಪ್ರಾಮಾಣ್ಯವೇ ಮೊದಲಾದ ಬೋಧನೆಗಳಿಂದ ದೈತ್ಯ ದಾನವರನ್ನು ಮರುಳುಮಾಡುವುದಕ್ಕಾಗಿ ಬುದ್ಧರೂಪದಿಂಡಳತರಿಸಿದನಿನಗೆ ನಮಸ್ಕಾರೆವು. ಕೇವಲಮೇಷ್ಟ್ರಪ್ರಾಯರಾದ ಕ್ಷತ್ರಿಯರನ್ನು ಕೊಲ್ಲುವುದ