೨೦೨f ಅಧ್ಯಾ, ೪೦ || ದಶಮಸ್ಕಂಧವು ಕ್ಕಾಗಿ ಮುಂದೆ ಕಲ್ಕಿರೂಪದಿಂದವತರಿಸುವ ನಿನಗೆ ನಮಸ್ಕಾರವು. ಓ ಭಗ ವಂತಾ ! ಈ ಸಮಸ್ತ ಜೀವಲೋಕವೂ, ನಿನ್ನ ಮಾಯೆಯಿಂದ ಮೋಹಿತ ವಾಗಿ, ನಾನು, ನನ್ನ ” ವೆಂಬ ಅಹಂಕಾರಮಮಕಾರಗಳಿಂದ ಕರೆಮಾ ರ್ಗಗಳಲ್ಲಿ ತೊಳಲುತ್ತಿರುವುದು. ನಾನೂ ಆ ಜೀವಲೋಕದಲ್ಲಿಯೇ ಸೇರಿದವ ನಾದುದರಿಂದ, ಈ ನನ್ನ ದೇಹವನ್ನೂ , ಪತ್ರ, ಮಿತ್ರ, ಕಳತ್ರ, ಪರಿಜನ, ಗೃಹ, ಧನ, ಮೊದಲಾದುವನ್ನೂ ಅಸತ್ಯವೆಂದೂ, ಸ್ವಪ್ನ ಸಮಾನವೆಂದೂ ತಿಳಿಯದೆ ಮೂಢನಾಗಿ, ಅವುಗಳನ್ನು ಸತ್ಯವೆಂದು ಭಾವಿಸಿ, ಮೋಹದಿಂದ ಸಂಸಾರದಲ್ಲಿ ತೊಳಲುತ್ತಿರುವೆನು. ನಿತ್ಯವಸ್ತುಗಳನ್ನು ಅತ್ಯವೆಂದೂ, ಆತ್ಮ ಮದ ದೇಹವನ್ನೆ ಆತ್ಮನೆಂದೂ, ಕೇವಲದುಃಖರೂಪಗಳಾದ ಶಬ್ದಾಟ ವಿಷಯಗಳನ್ನು ಸುಖವೆಂದೂ ವಿಪರೀತಬುಟ್ಟಿಯುಳ್ಳವನಾಗಿ, ಸುಖದುಃಖಾ ಒದ್ವಂದ್ವಗಳಲ್ಲಿ ಸಿಕ್ಕಿ ನರಳುತ್ತಿರುವೆನು. ನನ್ನಲ್ಲಿ ಕೇವಲತಮೋಗುಣವೇ ತುಂಬಿರುವುದರಿಂದ, ನಿರುಪಾಧಿಕಪ್ರಿಯನಾಗೆ ಸಿಕ್ಕ ವೈ೦ ತಿಳಿಯಲಾರbರ) ವೆನು ಜಲದಲ್ಲಿ ಹುಟ್ಟಿದ ಪಾಚಿಯೇ ಆ ಜಲದಸ್ವರೂಪವು ಹೊರಕ್ಕೆ ಕಾಣದ ಹಾಗೆ ಮರೆಸಿಬಿಡುವಂತೆ, ಮನುಷ್ಯನಲ್ಲಿ ಹುಟ್ಟಿದ ಅಜ್ಞಾನವೇ ಅವನಿಗೆ ಆತ್ಮ ಸ್ವರೂಪವು ತಿಳಿಯದಂತೆ ಮರೆಸಿಬಿಡುವುದು ತಿಳಿಯದ ಮೂಢರು, ಆ ತೃಣ ಛಾದಿತವಾದ ನೀರನ್ನು ಕಂಡುಕೊಳ್ಳಲಾರದೆ, ಜಲದಂತೆ ತೋರುತ್ತಿರುವ ಬಿಸಿಲೆನ್ಸಿರೆಗೆ ಆಸೆಪಟ್ಟು, ಅದಕ್ಕಿಮರಾಗಿ ಓಡುವಂತೆ, ಈಗ ನಾನೂ, ಪುರು ಫಾರಸ್ವರೂಪನಾದ ನಿನ್ನನ್ನು ಬಿಟ್ಟು, ಶಾದಿಮಿಷ ಯಗಳಿಗಾಗಿ ತೊಳಲು ತಿರುವೆನು. ಹಾಗೆ ಅದನ್ನು ತಿಳಿದ ಮೇಲೆ,ಸಿನಗೆ ಆ ವಿಷಯಗಳಲ್ಲಿ ಅಭಿಲಾ ಷೆಯೇಕೆ?” ಎಂದು ಕೇಳುವೆಯಾ ? ನಾಧಾ ! ಇದರಲ್ಲಿ ನನ್ನ ಯತ್ನ ವೇಸಿದೆ ? ನನ್ನ ಬುದ್ಧಿಯು ಅನಾದಿಯಾಗಿ ವಿಷಯವಾಸನೆಯಲ್ಲಿ ಸಿಕ್ಕಿ ದುರ್ಬಲವಾಗಿ ರುವುದು. ಆದುದರಿಂದ ಬಲವತ್ತಾದ ಇಂದ್ರಿಯಗಳಿಂದ ನಾನಾ ಕಡೆಗೆ ಎಳೆಯಲ್ಪಡುತ್ತ, ಕಾಮದಲ್ಲಿಯೂ, ಕರದಲ್ಲಿಯೂ ಬಿದ್ದು ತೊಳಲು ತಿರುವ ಮನಸ್ಸನ್ನು ತಡೆದಿಡುವುದಕ್ಕೆ ನಾನು ಶಕ್ತನಲ್ಲಿ ಹೀಗೆ ವಿಷಯಪರವ ಶನಾಗಿ,ಉಪಾಯಾಂತರವನ್ನು ಕಾಣದೆ ಕಳವಳಿಸುತಿದ್ದ ನಾನು, ಈಗ ನಿನ್ನ ಪಾದಮೂಲವನ್ನು ಸೇರಿದನು. ನನ್ನಂತಹ ಆಪತ್ತುಗಳಿಗೆ ದುರ್ಲಭವಾದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೪೯
ಗೋಚರ