೨೧೨೦ ಶ್ರೀಮದ್ಭಾಗವತವು [ಅಧ್ಯಾ ೪೧, ನಿನ್ನ ಪಾದದರ್ಶನವು ದೈವಾಧೀನದಿಂದ ಈಗ ನನಗೆ ಲಭಿಸುವಂತಾಯಿತು. ದೇವಾ! ಈ ಭಾಗ್ಯವೂ ನನಗೆ, ನಿನ್ನ ಅನುಗ್ರಹದಿಂದಲೇ ಲಭಿಸಿತೆಂದೆಣಿಸು ವೆನು. ನೀನು ಅವರವರಲ್ಲಿ ಅಂತರಾಮಿಯಾಗಿದ್ದು, ಅನುಗ್ರಹಿಸುವುದರಿಂ ದಲೇ ಚೇತನರಿಗೆ ಈ ವಿಧವಾದ ಭಾಗ್ಯವು ಲಭಿಸಬೇಕು. ಇಂತಹ ಬುದ್ಧಿ ಯ ಸಹವಾಸದಿಂದ ಹುಟ್ಟಲಾರದೆ?” ಎಂದರೆ, ಸತ್ಸಹವಾಸವೆಂಬುದು, ಸಂಸಾರಸಿವೃತ್ತಿಗೆ ಕಾರಣವೆಂಬುದೇನೋ ನಿಜವಾದರೂ, ಆ ಸಹವಾಸದ ↑ ಬುದ್ದಿ ಹುಟ್ಟುವುದಕ್ಕೂ ನಿನ್ನ ಅನುಗ್ರಹವ ಬೇಕು ಆದುದರಿಂದ ನಿನ್ನ ಅನುಗ್ರಹವೇ ಎಲ್ಲಕ್ಕೂ ಮೂಲಕಾರಣವು. ಜ್ಞಾನಸ್ವರೂಪನಾಗಿಯೂ, ಸಮಸ್ತರಿಗೂ ಜ್ಞಾನಪ್ರದನಾಗಿಯೂ, ಪ್ರಕೃತಿಪುರುಷರಿಗೆ ನಿಯಾಮಕ ನಾಗಿಯೂ, ಪರಬ್ರಹ್ಮನಾಗಿಯೂ, ಅನಂತ ಶಕ್ತಿಯುಳ್ಳವನಾಗಿಯೂ ಇರು ವ ನಿನಗೆ ನಮಸ್ಕಾರವು. ಹೃಷಿಕೇಶಾ! ನಿನಗೆ ನಮಸ್ಕಾರವು ಪ್ರಭೂ! ನಿನ್ನಲ್ಲಿ ಮರೆಹೊಕ್ಕಿರುವೆನು. ನನ್ನನ್ನು ರಕ್ಷಿಸು ” ಎಂದು ಸ್ತುತಿಸಿದನು ಇದು ನಾ ಲ್ಪನೆಯ ಅಧ್ಯಾಯವು. ರಾಮಕೃಷ್ಣರು ಮಧುರೆಗೆ ಬಂದುದು++ ಹೀಗೆ ಕೃಷ್ಣನು, ಜಲದಲ್ಲಿ ಅಕ್ಕನಿಗೆ ತನ್ನ ವಿಶ್ವರೂಪವನ್ನು ತೋರಿಸಿ,ನಟನರಂಗಸ್ಥಳಕ್ಕೆ ಬಂದು ತನ್ನ ನಾಟ್ಯವನ್ನು ತೋರಿಸಿದಮೇಲೆ, ಆ ವೇಷವನ್ನು ತೆಗೆದುಹಾಕುವಂತೆ, ಅವನು ಸ್ತುತಿಸುತ್ತ ನಿಂತಿರುವಾಗಲೇ ಆ ರೂಪವನ್ನು ಮರೆಸಿಕೊಂಡು ಕಣ್ಮರೆಯಾದರು. ಆ ದಿವ್ಯರೂಪವು ಕಣ್ಮರೆಯಾದಮೇಲೆ, ಆಕ್ರ ನು ಜಲದಿಂದ ತಟ್ಟನೆ ಮೇಲೆದ್ದು,ಆವಶ್ಯಕ ವಾದ ಮಾಧ್ಯಾಹ್ನ ಕಕರಗಳನ್ನು ತೀರಿಸಿಕೊಂಡು, ಆಶ್ಚಯ್ಯಪರವಶನಾಗಿ, ಅಲ್ಲಿಂದ ಹೊರಟು ಬಂದು ರಥವನ್ನೇರಿ ಕುಳಿತನು. ಆಗ ಕೃಷ್ಣನು ಆಕ್ಕೂ ರನ ಮುಖವನ್ನು ನೋಡಿ ಒಳಗೊಳಗೆ ನಗುತ್ತ,ಏನೂ ತಿಳಿಯದವನಂತೆ ಪ್ರಶ್ನೆ ಮಾಡುವನು. (ಮಿತ್ರಾ ! ಅಕ್ಷರಾ! ಏನಿದು ? ನಿನ್ನ ಮುಖವನ್ನು ನೋಡಿ ಪರೆ, ಈಗಲೇ ನೀನು ಯಾವುದೋ ಅತ್ಯಾಶ್ರವನ್ನು ನೋಡಿ ಬಂದಂತೆ ತೋರುವುದು. ನೆಲದಲ್ಲಿಯಾಗಲಿ, ಜಲದಲ್ಲಿಯಾಗಲಿ, ಆಕಾಶದಲ್ಲಿಯಾಗಲಿ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೫೦
ಗೋಚರ