೨೧೨೧ ಅಧ್ಯಾ, ೪೧.] ದಶಮಸ್ಕಂಧವು ಏನಾದರೂ ಅದ್ಭುತವನ್ನು ಕಂಡು ಬಂದೆಯೇನು ? ನಿನ್ನ ಆಶ್ಚರಕಾರಣ ವೇನು ಹೇಳು” ಎಂದನು. ಆಗ ಆಕ್ರನು ಬದ್ಧಾಂಜಲಿಯಾಗಿ ಕೃತ್ಯ ನನ್ನು ಕುರಿತು. “ಕೃಷ್ಣಾ ! ಸಾಕ್ಷರಗಳಿಗೂ ನಿಧಿಯಾದ ನೀನು ಇಲ್ಲಿ ನನ್ನ ಮುಂದೆಯೇ ಇರುವಾಗ, ನಾನು ನೋಡಬೇಕಾದ ಆಶ್ಚರೈವು ಬೇರೆಲ್ಲಿ ರುವುದು ? ಭೂಮ್ಯಾಕಾಶಗಳಲ್ಲಿಯಾಗಲಿ, ಜಲದಲ್ಲಿಯಾಗಲಿ ಕಾಣಬಹು ದಾದ ಆದ್ಭುತಗಳೆಲ್ಲವೂ ವಿಶ್ವ ಶರೀರಕನಾದ ನಿನ್ನಲ್ಲಿಯೇ ಅಡಗಿರುವುವು. ನಿನ್ನ ಕ್ಲಿಲ್ಲದ ಆಶ್ಚರಗಳು ಬೇರೆಲ್ಲಿರುವುವು ? ” ಎಂದುಮಾತ್ರ ಹೇಳಿ, ರಥವನ್ನು ಮುಂದೆ ಬಿಟ್ಟುಕೊಂಡು ಸಂಜೆಯಹೊತ್ತಿಗೆ ಸರಿಯಾಗಿ,ರಾಮಕೃಷ್ಣರಿಬ್ಬ ರನ್ನೂ ಮಧುರಾಪುರದ್ವಾರಕ್ಕೆ ಕರೆತಂದುಬಿಟ್ಟನು. ಇವರ ಪ್ರಯಾಣಕಾಲ ದಲ್ಲಿ ದಾರಿಯುದ್ದಕ್ಕೂ ಅಲ್ಲಲ್ಲಿನ ಗ್ರಾಮವಾಸಿಗಳೆಲ್ಲರೂ, ಈ ರಾಮಕೃಷ್ಣ ರನ್ನು ನೋಡಿ ಸಂತೋಷದಿಂದುಬ್ಬುತ, ಅವರಮೇಲೆ ಬಿದ್ದ ದೃಷ್ಟಿಯನ್ನು ಹಿಂತಿರುಗಿಸಲಾರದೆ ಹೋದರು. ಗೋಕುಲದಿಂದ ಹೊರಟು ನಂದಾದಿಗೊ ಪಾಲಕರೆಲ್ಲರೂ, ಮುಂದಾಗಿಯೇ ಬಂದು ಪಟ್ಟಣದ ಹೊರಗಿನ ಪರೋಬ್ಯಾನದಲ್ಲಿ, ರಾಮಕೃಷ್ಣರ ರಥವನ್ನು ಇದಿರುನೋಡುತ್ತ ನಿಂತಿ ದರು.ಆಕ್ರ ನ ರಥವು ಅಲ್ಲಿಗೆ ಬಂದು ಸೇರಿದಮೇಲೆ, ಅಲ್ಲಿಂದ ಎಲ್ಲರೂ ಒಂದಾಗಿಕಲೆತು ಮುಂದೆ ಹೊರಡಲು ಸಿದ್ಧರಾದರು. ಆಗ ಕೃಷ್ಣನು, ಆಕ್ರೋರನ ಕೈಯ್ಯನ್ನು ಹಿಡಿದು, ಮಿತ್ರಾ! ನೀನು ಇದೇರಥದಮೇಲೆ ಕುಳಿತು, ಮುಂದಾಗಿ ಪಟ್ಟಣವನ್ನು ಪ್ರವೇಶಿಸಿ ನಿನ್ನ ಗೃಹವನ್ನು ಸೇರು. ನಾವು ಈ ರಾತ್ರಿ ಇಲ್ಲಿಯೇ ಇದ್ದು, ಬೆಳಗಾದಮೇಲೆ ಪಟ್ಟಣವನ್ನು ನೋಡುವುದಕ್ಕೆ ಬರುವೆವು"ಎಂದನು. ಅದಕ್ಕಾ ಆಕ್ರ ನು. ಕೃಷ್ಣ' ಸಿ ಮ್ಮನ್ನು ಬಿಟ್ಟು ನಾನು ಎಂದಿಗೂ ಪಟ್ಟಣಕ್ಕೆ ಪ್ರವೇಶಿಸಲಾರೆನು ಭಕ ವತy ನಾದ ನೀನು ನನ್ನನ್ನು ಕೈಬಿಡಬಾರದು. ಈಗ ನೀನು ಅವಶ್ಯವಾಗಿ ಈ ಸಮ ಸ್ವ ಗೋಪಾಲಕರೊಡನೆಯೂ, ಈ ನಿನ್ನ ಬಂಧುಮಿತ್ರರೊಡನೆಯೂ, ನ ನ್ನ ಮನೆಗೆ ಬಂದು, ನನ್ನ ಆತಿಥ್ಯವನ್ನು ಸ್ವೀಕರಿಸಬೇಕು!ಗೃಹಸ್ಥರಾದ ನಮಗೆ' ನಿಮ್ಮಂತವರ ಪಾದಪೂಜೆಯನ್ನು ಮಾಡುವುದಕ್ಕಿಂತಲೂ ಉತ್ತಮಧರ್ಮ ವೇನಿದೆ ? ಓ ದೇವದೇವಾ ? ನೀನು ನಮ್ಮ ಮನೆಗೆ ಬಂದು, ಅನಾಥರಾದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೫೧
ಗೋಚರ