೨೦೨೨ ಶ್ರೀಮದ್ಭಾಗವತವು ಅಧ್ಯಾ. ೪೧. ನಮ್ಮನ್ನು ಸನಾಧರನ್ನಾಗಿ ಮಾಡಬೇಕು. ಯಾವ ಪಾದಗಳನ್ನು ತೊಳೆದ ತೀರ್ಥವನ್ನು ದಾನಮಾಡಿದರೂ, ತಲೆಯಲ್ಲಿ ಧರಿಸಿದರೂ, ಅಗ್ನಿ ಮುಖರಾದ ಸಮಸ್ತ ದೇವತೆಗಳೂ, ಪಿತೃದೇವತೆಗಳೂ ತೃಪ್ತಿ ಹೊಂದುವರೋ, ಅಂತಹ ನಿನ್ನ ಪಾದಾರವಿಂದದ ಧೂಳಿಯಿಂದ ಗ್ರಹಸ್ಥರಾದ ನಮ್ಮ ಗೃಹವನ್ನು ಪವಿತ್ರ ಮಾಡಬೇಕು. ಹಿಂದೆ ಬಲಿಚಕ್ರವರ್ತಿಯು, ಈ ನಿನ್ನ ಪಾದಗ ಳನ್ನು ತೊಳೆದು ಸತ್ಕರಿಸಿದುದರಿಂದಲ್ಲವೇ, ಕೀರ್ತಿಯಲ್ಲಿಯೂ,ಗುಣದಲ್ಲಿಯೂ ಮೇಲೆನಿಸಿಕೊಂಡು, ಎಣೆಯಿಲ್ಲದ ಐಶ್ವರವನ್ನು ಹೊಂದಿ, ಕೊನೆಗೆ ಅನನ್ಯ ಪ್ರಯೋಜನರಾದ ಪ್ರಸನ್ನರ ಗತಿಯನ್ನೂ ಪಡೆದನು ಕೃಷ್ಣಾ! ಈಗ ಶ್ರೀ ಲೆಕ್ಕವನ್ನೂ ಪಾವನಮಾಡುತ್ತಿರುವ ಗಂಗಾನದಿಯಕೂಡ. ಈ ನಿನ್ನ ಪಾದಗಳನ್ನು ತೊಳೆದ ನೀರಲ್ಲವೆ? ಆ ತೀರ್ಥವನ್ನು ತಲೆಯಲ್ಲಿ ಧರಿಸಿದುದರಿಂ ಇಲ್ಲವೇ ಶಿವನು ಮಹೇಶ್ವರನೆನಿಸಿಕೊಂಡನು! ಆ ತೀರ್ಥದಿಂದಲ್ಲವೇ ಅರು ವತ್ತು ಸಾವಿರಮಂಟ ಸಗರಪುತ್ರರಿಗೂ ಸ್ವರ್ಗವು ಲಭಿಸಿತು! ದೇವದೇವಾ ! ಜಗನ್ನಾಥಾ : ನಿನ್ನ ನಾಮಾಕ್ಷರಗಳ ಶ್ರವಣರ್ಕಿತ್ರನೆಗಳ ಸಮಸ್ತಲೋ ಕವನ್ನೂ ಪಾವನಮಾಡುವುವು. ಓ ಯದೂತಮಾ ! ಉತ್ತಮಶ್ಮಿಕಾ! ನಾರಾಯಣ: ನಿನಗೆ ನಮಸ್ಕಾರವು” ಎಂದನು. ಆಗ ಕೃಷ್ಣನು ಅಕ್ಷರ ನನ್ನು ಕುರಿತು ..ಓ ಭದ! ಮೊದಲು ನಾನು ಯದುಕುಲಕ್ಕೆ ದ್ರೋಹಿ ಯಾದ ಕಂಸನನ್ನು ಕೊಂದು, ಆಮೇಲೆ ನನ್ನಣ್ಣನೊಡನೆ ನಿನ್ನ ಮನೆಗೆ ಬರು ವೆನು. ಮೊದಲು ಆ ಕಾದ್ಯವನ್ನು ಮಾಡಿದಮೇಲೆಯೇ ನಿನಗೂ, ಇತರ ಮಿತ್ರರಿಗೂ ಪ್ರಿಯವನ್ನುಂಟುಮಾಡಬೇಕು! ನೀನು ಚಿಂತಿಸಬೇಡ ಹೋಗು” ಎಂದನು. ಕೃಷ್ಣನು ಈ ಮಾತನ್ನು ಹೇಳಿದರೂ, ಆಕರನ ಮನಸ್ಸಿಗೆ ಅಷ್ಟಾಗಿ ಸಮಾಧಾನವಿರಲಿಲ್ಲ. ಆದರೂ ಕೃಷ್ಟಾಜ್ಞೆಯನ್ನು ಮೀರಲಾರದೆ, ಮುಂದಾಗಿ ಪುರವನ್ನು ಪ್ರವೇತಿಸಿ, ತಾನು ನಡೆಸಿಬಂದ ಕಾವ್ಯಗಳನ್ನು ಕಂಸ ಸಿಗೆ ತಿಳಿಸಿ, ತನ್ನ ಮನೆಗೆ ಬಂದು ಸೇರಿದನು.ಆಮೇಲೆ ಇತ್ತಲಾಗಿ ಕೃಷ್ಣನು, ಆ ರಾತ್ರಿಯು ಕಳೆದು ಬೆಳಗಾದಮೇಲೆ, ಮಧ್ಯಾಹ್ನದವರೆಗೂ ಆ ತೋಟದ ಲ್ಲಿಯ ವಿನೋದದಿಂದಿದ್ದು, ಅಪರಾಷ್ಟ್ರದಲ್ಲಿ ತನ್ನಣ್ಣನಾದ ಬಲರಾಮ ನೊಡನೆಯೂ, ಇರ್ತಗೋಪಾಲಕರೊಡನೆಯೂ ಮಧುರಾಪುರವನ್ನು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೫೨
ಗೋಚರ