ಅಧ್ಯಾ. ೪೧.] ದಶಮಸ್ಕಂಧವು. ೨೦೨೩ ನೋಡುವಉದ್ದೇಶದಿಂದ ಹೊರಟು ಪುರದ್ವಾರಕ್ಕೆ ಬಂದನು. ಅಲ್ಲಿನ ಸೌಭಾಗ್ಯವನ್ನು ಕೇಳಬೇಕೆ ? ಮಹೋನ್ನ ತಗಳಾದ ಸ್ಪಟಿಕದ ಗೋ ಪುರಗಳು ದೊಡ್ಡ ದೊಡ್ಡ ಸುವರ್ಣಕವಾಟಗಳು !' ಆಂದವಾದ ಬಾಗಿಲವಾಡಗಳು : ಅಲ್ಲಲ್ಲಿ ತಮ್ಮ ಮತ್ತು ಹಿತ್ತಾಳೆಯ ತಗಡುಗ ಳಿಂದ ಕಟ್ಟಲ್ಪಟ್ಟ ಧಾನ್ಯಶಾಲೆಗಳು ! ಪಟ್ಟಣದ ಕೋಟೆಯ ಸುತ್ತಲೂ ಬಾಲಸಾಧ್ಯವಾದ ದೊಡ್ಡಗಳು! ಅದರ ಸುತ್ತಲೂ ಶೃಂಗಾರವನಗಳು! ಅದರ ಸುತ್ತಿನಲ್ಲಿ ಮರದ ತೋಪಗಳು!ಅಲ್ಲಲ್ಲಿ ಸುವರ್ಣದಿಂದ ಚಿತ್ರಿತಗಳಾದ ಚತುಷ್ಪಥಗಳು ! ದೊಡ್ಡದೊಡ್ಕ ಉಪ್ಪರಿಗೆಗಳು : ಆ ಉಪ್ಪರಿಗೆಗಳ ಹಿಂದೆ ಸಣ್ಣತೋಟಗಳು ! ಅಲ್ಲಲ್ಲಿ ಬೇರೆಬೇರೆ ಶಿಲ್ಪಗಾರರಿಗೆ ನಿವಾಸಯೋಗ್ಯಗೆ Yಾದ ಕೇರಿಗಳು ! ಅಲ್ಲಲ್ಲಿ ಸಭಾಮಂಟಪಗಳು ! ಅಲ್ಲಲ್ಲಿ ವಿನೋದಶಾಲೆಗಳು! ಮತ್ತು ಉಪ್ಪರಿಗೆಯ ಮುಂದೆ ವಸಾರೆಗಳು, ಅದರ ಕೆಳಗೆ ವೇಲಕರ ಳು, ಗವಾಕ್ಷಗಳು, ಮನೆಯ ಮುಂಹನ ನೆಲಗಟ್ಟುಗಳು, ರಾಜಮಾರ್ಗಗಳು, ಇವೆಲ್ಲವೂ, ವಜ್ರ, ವೈಡೂಲ್ಯ, ಸೀಲ, ಮರಕತ, ಮುತ್ತು, ಹವಳ, ಮುಂತಾದ ನವರತ್ನಗಳ ಚಿತ್ರಕಾರಗಳಿಂದ ಶೋಭಿಸುತ್ತಿರುವುವು. ಮನೆಗಳಮುಂದೆ ನವಿಲು, ಪಾರಿ ತಳೆ, ಮುಂತಾದ ಪಕ್ಷಿಗಳು ಕಿವಿಗಿಂಪಾಗಿ ಧ್ವನಿಮಾಡುತ್ತಿರು ವವು ಅಲ್ಲಿನ ರಾಜಮಾರ್ಗಗಳು, ಅಂಗಡಿಬೀಜಗಳು, ಚತಥಗಳು ಇವೆ ಇವೂ ಶೀತಜಲದಿಂದ ಸೇಚಿತವಾಗಿ, ಅಲ್ಲಲ್ಲಿ ಹೂ, ಗಂಧ, ಅರಳು, ಅಕ ತೆ, ಗರಿಕೆ ಮೊದಲಾದ ಮಂಗಳದ್ರವ್ಯಗಳಿಂದ ಶೋಭಿತವಾಗಿರುವುವು. ಒಂದೊಂದು ಮನೆಯ ಬಾಗಿಲುಗಳೂ, ಮೊಸರು, ಗಂಧ ಮೊದಲಾದ ಮಂ ಗಳದ್ರವ್ಯಗಳಿಂದಲಂಕರಿಸಲ್ಪಟ್ಟ ಪೂರ್ಣಕುಂಭಗಳಿ೦ದಲ , ದೀಪಮಾಲಿ ಕಗಳಿಂದಲ, ಪ್ರಷಹ ರಗಳಿಂದ, ಚಿಗುರಿನ ತೋರಣಗಳಿಂದಲೂ, ಹಣ್ಣು ಗೋವೆಗಳೊಡಗೂಡಿದ ಬಾಳೆಯ : ಕಂಬಗಳ೦ದಲೂ, ಅಡಕೆಯ ಹೂಗಳಿಂದ ಅಲಂಕೃತವಾಗಿರುವುವು. ಒಂದೊಂದು ಗೃಹಬ್ಯಾರೆ. ದಲ್ಲಿಯೂ ವಿಚಿತ್ರವರ್ಣದ ಧ್ವಜಪದಗಳು ತೂಗಾಡುತ್ತಿರುವುವು. ಒಂದೊಂದು ಮನೆಯ ಬಾಗಿಲ, ರಂಗವಲ್ಲಿ ಮುಂತಾದ ವಿಚಿತ್ರಾ ಲಂಕಾರಗಳಿಂದ ಶೋಭಿಸುತ್ತಿರುವುವ, ಓ ಪರೀಕ್ಷಿದ್ರಾಜಾ ! ಕಂಸನು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೫೩
ಗೋಚರ