೨೦೨೪ ಶ್ರೀಮದ್ಭಾಗವತವು [ಅಧ್ಯಾ ೪೧. ಧನುರಾಗವೆಂಬ ನೆವವನ್ನು ಹೇಳಿ, ತನ್ನ ಪುರಜನರನ್ನು ನಿರ್ಬಂಧಿಸಿ ಮಾಡಿ ಸಿದ ಈ ಅಲಂಕಾರಗಳೆಲ್ಲವೂ, ಈ ರಾಮಕೃಷ್ಣರ ಪುರಪ್ರವೇಶಕ್ಕಾಗಿ ಪುರಜನರೆಲ್ಲರೂ ಸಂತೋಷದಿಂದ ಮಾಡಿದ ಮಂಗಳಾಲoಕಾರಗ ಳಂತಾಯಿತು. ರಾಮಕೃಷ್ಣರಿಬ್ಬರೂ ಹೀಗೆ ಸಾಲಂಕಾರಶೋಭಿತ ವಾದ ಮಧುರಾಪರಿಯನ್ನು ಪ್ರವೇಶಿಸಿ, ತಮ್ಮ ಮಿತ್ರವರ್ಗದೊಡನೆ ಅಲ್ಲಿನ ರಾಜಬೀದಿಯಮಾರ್ಗವಾಗಿ ಬರುತಿದ್ದರು. ಅಲ್ಲಿನ ಪುರಸ್ತಿಯಲ್ಲ. ರೂ ಇವರನ್ನು ನೋಡಬೇಕೆಂಬ ಆತುರದಿಂದ, ತಾವುತಾವು ಮಾಡುತಿದ್ದ ಮನೆಗೆಲಸಗಳನ್ನು ಅಷ್ಟಕ್ಕೆ ನಿಲ್ಲಿಸಿ, ತಮ್ಮ ತಮ್ಮ ಮನೆಯ ಉಪ್ಪರಿಗೆಯ ಮೇಲೆ ಹೋಗಿ ನಿಂತರು. ಈ ಆತುರದಲ್ಲಿ ಕೆಲವು ಸ್ತ್ರೀಯರು, ತಮ್ಮ ವ ಸ್ನಾಭರಣಗಳನ್ನು ಸರಿಯಾಗಿ ಧರಿಸಿಕೊಂಡು ಬರುವಷ್ಟಕ್ಕೂ ಅವಕಾಶ ವಿಲ್ಲದೆ, ತಾರುಮಾರಾಗಿ ಮೈಮೇಲೆ ಜೋಡಿಸಿಕೊಂಡು, ಹಾಗೆಯೇ ಬಂದು ನಿಂತರು. ಬೇರೆ ಕೆಲವರು ಕಿವಿಯೋಲೆ, ಕೈಬಳೆ, ಕಾಲಂದುಗೆ, ಮುಂತಾದ ಜತೆಜತೆಯಾದ ಅಭರಣಗಳಲ್ಲಿ, ಒಂದನ್ನು ಮಾತ್ರ ತೊಟ್ಟುಕೊಂಡು, ಮ ತೊಂದನ್ನು ಮರೆತು ಬಂದುದರಿಂದ, ಆ ಸ್ತ್ರೀಯರ ಗುಂಪಿನಲ್ಲಿ, ಒಂದು ಕಿವಿಗೆಮಾತ್ರ ಓಲೆಯ ಓವರೂ, ಒಂದೇ ಕಾಲಲ್ಲಿ ಕಾಲಂದುಗೆಯ ನ್ನು ಧರಿಸಿದವರೂ, ಒಂದು ಕಣ್ಣಿಗೆ ಮಾತ್ರ ಕಾಡಿಗೆಯನ್ನು ಹಚ್ಚಿದವರೂ ಬಹಳಮಂದಿಯಿದ್ದರು. ಇದಲ್ಲದೆ ಊಟಮಾಡುತ್ತಿದ್ದವರು ಕೈತೊಳೆಯ ದಂತೆಯೇ ಬಂದುಸಿಂತರು. ಅಭ್ಯಂಗನಮಾಡುತಿದ ವರು ಮಯೋರಸಿಕೊ ಇದಹಾಗೆಯೇ ಬಂದರು. ಮಲಗಿದ್ದವರು ಈ ಗದ್ದಲವನ್ನು ಕೇಳಿ ಹಾಸಿಗೆ ಯಿಂದೆದ್ಯ ಹಾಗೆಯೇ ಬಂದುನಿಂತರು. ಮಕ್ಕಳಿಗೆ ಮೊಲೆಯೂಡಿಸು ತಿದ್ದವರು, ಬಲಾತ್ಕಾರದಿಂದ ಬಿಡಿಸಿಕೊಂಡು ಓಡಿಬಂಡರು ಹೀಗೆ ಪರ ಸಿಯರೆಲ್ಲರೂ ನೆರೆದು ನೋಡುತಿದ್ದಾಗ, ಪುಂಡರೀಕಾಕ್ಷನಾದ ಶ್ರೀ ಕೃ ಪ್ರಮ, ಮದದಾವೆಯಂತೆ ಗಂಭೀರವಾದ ನಡೆಯಿಂದ ಬೀದಿಯಲ್ಲಿ ನಡೆದ ಬರುತಿತ್ತು. ತನ್ನ ನಡೆಯ ಸೊಗಸಿನಿಂದಲೂ, ಮಂದಹಾಸಸೌಂದರಂದ ಲೂ, ಪ್ರಸನ್ನ ದೃಷ್ಟಿಯಿಂದಲೂ, ಆ ಸ್ತ್ರೀಯರ ಮನಸ್ಸನ್ನು ಸೂರೆಗೊಳು ತ, ಅಲ್ಲಿ ತನ್ನನ್ನು ನೋಡಿದವರೆಲ್ಲರಿಗೂ ನೇತ್ರೋತ್ಸವವನ್ನುಂಟುಮಾಡು
ಣ