೨೦೫೦ ಶ್ರೀಮದ್ಭಾಗವತವು ಅಧ್ಯಾ, ೪೨, ದೆ ನಿನಗೆ ಶ್ರೇಯಸ್ಸುಂಟು.” ಎಂದನು. ಅದಕ್ಕಾ ಗೂಸಿಯು ಓ ಸುರ' ದರಾಂಗಾ ! ನಾನು ಕಂಸನ ಅಂತಃಪುರದ ವಾಸಿ ! ಕಂಸನಿಗೆ ನಾನು ಬಹಳ ವಿಶ್ವಾಸಪಾತ್ರಳಾಗಿರುವೆನು' ನನ್ನ ನ್ನು ತ್ರಿವಕ್ರೆಯೆಂದು ಕರೆಯುವ ರು ಕಂಸಸಿಗೆ ಪ್ರತಿನವೂ ಗಂಧವನ್ನರೆದುಕೊಡಬೇಕಾದುದು ನನ್ನ ಕಾರವು ನಾನು ಅರೆದುಕೊಡತಕ್ಕ ಗಂಧದಲ್ಲಿ ಅವನಿಗೆ ಬಹಳ ಪ್ರೀತಿ ಯುಂಜ ಅವನಿಗಾಗಿಯೇ ಈಗ ನಾನು ಈ ಗಂಧವನ್ನು ತೆಗೆದುಕೊಂ ಡು ಹೋಗುತ್ತಿರುವೆನು ಆದರೇನು? ಈ ದಿನದಲ್ಲಿ ನಾನು ಅರೆದು ತಂ ಬರತಕ್ಕೆ ಈ ಅನುಲೇಪನವು ಅತ್ಯುತ್ತಮವಾಗಿರುವುದು. ನಿಮ್ಮಿಬ್ಬರ ರೂಪಲಾವಣ್ಯಗಳನ್ನು ನೋಡಿದರೆ, ಇದನ್ನು ಧರಿಸುವುದಕ್ಕೆ ನಿಮಗಿಂತ ಊ ಅರ್ಹರಾದವರು ಬೆ೦ಕಬ್ಬಲಿಲ್ಲವೆಂದೂ ನನಗೆ ತೋರಿರುವುದು ಆ ದುದರಿಂದ ನೀವು ಯಥೇಚ್ಛವಾಗಿ ಸ್ವೀಕರಿಸಬಹುದು. ಸಂತೋಷದಿಂದ ಕೊಡುವೆನು” ಎಂದಳು. ಹೀಗೆ ಆ ಗೂಸಿಯು, ರಾಮಕೃಷ್ಣರ ರೂಪ ಕೂ, ಸೌಕುಮಾರಕ್ಕೂ, ರಸಿಕತೆಗೂ, ಮಂದಹಾಸಪೂರೈಕವಾದ ಅವರ ಮಾತಿಗೂ, ಅವರ ದೃಷ್ಟಿ ಸೌಂದಯ್ಯ ಮರುಳಾಗಿ, ತಾನು ತಂದಿದ್ದ ಗಂಧವನ್ನು ಅವರಿಬ್ಬರಿಗೂ ಪ್ರೀತಿಪೂರಕವಾಗಿ ಕೊಟ್ಟಳು ಬಿಳುಪು ಮತ್ತು ಕಪ್ಪು ಬಣ್ಣದ ಮೈಯುಳ್ಳ ಆ ರಾಮಕೃಷ್ಣರಿಬ್ಬರೂ, ತಮ್ಮ ಮೈಬಣ್ಣಕ್ಕಿಂತ ಬೇರೆಯಾಗಿ ತೋರುವಂತೆ, ಕುಂಕುಮ ಕೇಸರಿಯಿಂದ ಮಿತ್ರಿತವಾಗಿದ್ದ ಆ ರಕ್ತಚಂದನವನ್ನು ಮೈಗೆ ಲೇಪಿಸಿಕೊಂಡು, ಅಪೂ ಶೋಭೆಯಿಂದ ಪ್ರಕಾಶಿಸುತಿದ್ದರು. ಆಗ ಕೃಷ್ಣನಿಗೆ ಅವಳಲ್ಲಿ ಅನುಗ್ರಹ ಬುದ್ಧಿಯುಂಟಾಯಿತು, ಅಂದವಾದ ಮುಖವುಳ್ಳ ಆಕೆಯ ವಜ್ರದೇಹವನ್ನು ನೆಟ್ಟಗೆ ಮಾಡುವುದರಿಂದ, ತನ್ನ ದರ್ಶನಕ್ಕೆ ಆಗಲೇ ಅವಳಿಗೆ ಫಲವನ್ನು ತೋರಿಸಬೇಕೆಂದುದ್ದೇಶಿಸಿದನು. ಅವಳ ಕಾಲುಗಳೆರಡನ್ನೂ ತನ್ನ ಪಾದಾ ಗ್ರಗಳಿಂದ ಮೆಟ್ಟಿ ಹಿಡಿದು, ಅವಳ ಗಡ್ಡದ ಕೆಳಗೆ ತನ್ನ ಕೈಬೆರಳುಗ ಇನ್ನಿಟ್ಟು, ಅವಳ ದೇಹವು ನೆಟ್ಟಗೆ ನಿಲ್ಲುವಂತೆ ಮೇಲಕ್ಕಳೆದನು. ಹೀಗೆ ಕೈ ಹೈನು ಮೇಲಕ್ಕೆತ್ತಿದೊಡನೆ, ಬಗ್ಗಿ ಹೋಗಿದ್ದ ಅವಳ ಬೆನ್ನ ಮೂಳೆಯು ನೆಟ್ಟಗೆ ನಿಂತಿತು. ಕೃಷ್ಣನ ಕರಸ್ಪರ್ಶಮಾತ್ರದಿಂದಲೇ ಅವಳ ದೇಹ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೬೦
ಗೋಚರ