೨೧1೧ ಅಧ್ಯಾ. ೪೨ ] ದಶಮಸ್ಕಂಧವು. ನಲ್ಲಿದ್ದ ಡೊಂಕುಗಳೆಲ್ಲವೂ ಕ್ರಮಪಟ್ಟವು. ಉಬ್ಬಿದ ಸೃನನಿತಂಬಗಳೊಡ ನೆ ಆಕೆಯು ಉತ್ತಮಸೌಂದರದಿಂದ ಶೋಭಿಸಿದಳು. ಹೀಗೆ ರೂಪದಿಂದ ಲೂ, ಯೌವನದಿಂದಲೂ, ಗುಣದಿಂದಲೂ ಸ್ತ್ರೀಯರಲ್ಲಿ ತಾನೇ ಮೇಲೆಸಿಸಿ •ಕೊಂಡಿದ್ದ ಆ ಸೀಯ, ಪರಮಸಂತೋಷದಿಂದ ಮಂದಹಾಸಪೂರೈ ಕವಾಗಿ ಹೀಗೆಂದು ಹೇಳುವಳು, “ಓ ಪೀರಾ ! ಮನೆಗೆ ಹೋಗುವೆವು ಬಾ ! ನಾನು ನಿನ್ನನ್ನು ಬಿಟ್ಟು ಹೋಗಲಾರೆನು ನಿನ್ನ ಗುಣಕ್ಕೂ, ನಿನ್ನ ರೂಪ ಪಕ್ಕೂ ನನ್ನ ಮನಸ್ಸು ಕಲಗಿ ಹೋಗಿರುವುದು ಅವಶ್ಯವಾಗಿ ನೀನು ನನ್ನೊ ಡನೆ ಬಂದೇ ತೀರಬೇಕು.” ಎಂದು ಹೇಳುತ್ತ, ಆ ಕೃಷ್ಣನು ಹೊದೆದ ಉತ್ತರೀಯದ ಸೆರಗನ್ನು ಹಿಡಿದು ಎಳೆಯುತ್ತಿದ್ದಳು. ಹೀಗೆ ಆ ಯುವತಿಯ ಬಲಾತ್ಕರಿಸುತ್ತಿರಲು, ಕೃಷ್ಣನು, ಬಲರಾಮನ ಮತ್ತು ತನ್ನ ಸಂಗಡಿಗರಾದ ಇತರಿಗೋಪಾಲಕರ ಮುಖವನ್ನು ನೋಡಿ ನಗುತ್ತ, ಅವಳನ್ನು ಕುರಿತು <ಓ ಸುಭು! ನಿನ್ನ ಇಷ್ಟದಂತೆಯೇ ಆಗಲಿ! ಹೋಗು ! ಆದರೆ ಈಗ ಸೀ ನು ನನ್ನನ್ನು ನಿರ್ಬಂಧಿಸಬೇಡ. ನಾವು ಇಲ್ಲಿಗೆ ಬಂದ ಕಾರವನ್ನು ಮೊದ ಲು ನಡೆಸಿ, ಆಮೇಲೆ ನಿನ್ನ ಮನೆಗೆ ಬಂದೇ ಹೋಗುವೆನು. ಹೀಗಿದ್ದರೂ ಇಲ್ಲಿಗೆ ನಾವು ಪರದೇಶಿಗಳು ! ಇಲ್ಲಿ ನಮಗೆ ಮನೆಮಠಗಳೆಂದೂ ಇಲ್ಲ ವಷ್ಟೆ' ಸದಸ್ಯಳಂದ ಬಂದ ನಮ್ಮಂತವರಿಗೆ ನಿಮ್ಮ ಮನೆಯೇ ಸತ್ರದಂ ತಿರುವುದು. ಅವಶ್ಯವಾಗಿ ಬರುವೆವು ಹೋಗು.” ಎಂದು ಹೇಳಿ ಅವಳನ್ನು ಷ್ಣ ಯುದ್ದಕ್ಕೂ ಅಲ್ಲಿದ್ದ ವರ್ತಕರು, ಗಂಧಪಷ್ಟತಾಂಬೂಲಾದಿಗಳೊಡನೆ ಕೈಕಾಣಿಕೆಯ ತಟ್ಟೆಗಳನ್ನು ಹಿಡಿದು ಬಂದು, ರಾಮಕೃಷ್ಣರನ್ನು ಪೂಜಿಸು ತಿದ್ದರು. ಈ ರಾಮಕೃಷ್ಣರನ್ನು ನೋಡಿದೊಡನೆ, ಆ ಮಧುರಾಪುರಿಯಲ್ಲಿದ್ದ ಸಿ ಯರೆಲರೂ ಕಾಮವಿಕಾರದಿಂದ ಮನಸುಕಲಗಿ,ಮ್ಮ ಮೇಲಿನ ವಸಾ ಭರಣಗಳು ಕದಲಿದುದನ್ನೂ ತಿಳಿಯದೆ, ಚಿತ್ರದ ಬೊಂಬೆಗಳಂತೆ ಬಹಳ ಹೊತ್ತಿನವರೆಗೆ ಮೈಮರೆತು ನಿಂತುಬಿಟ್ಟರು. ಹೀಗೆ ಕೃಷ್ಣನು ಆ ಪುರದೆ ರಾಜಮಾರ್ಗಗಳನ್ನು ಸುತ್ತಿ ನೋಡಿದಮೇಲೆ, ಕಂಸನು ಧನುಶ್ಯಾಗಕ್ಕಾಗಿ ಪೂಜಿಸಿಟ್ಟಿರುವ ಧನುಸ್ಸೆಸ್ಲಿರುವುದೆಂದು ಪುರಜನರನ್ನು ವಿಚಾರಿಸಿ ತಿಳಿದು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೬೩
ಗೋಚರ