so೪೨ ಶ್ರೀಮದ್ಭಾಗವತವು [ಅಧ್ಯಾ, ೪೪, ಗಿರಗಿರನೆ ಸುತ್ತಿಸುವುದು, ಒಬ್ಬರನ್ನೊಬ್ಬರು ಮೇಲಕ್ಕೆತ್ತಿ ಬಿಸುಡುವುದು, ಅಲ್ಲಾಡುವುದಕ್ಕೆ ಸಾಧ್ಯವಿಲ್ಲದಂತೆ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿ ಹಿಡಿ ಯುವುದು, ಕೆಳಕ್ಕೆ ಕೆಡಹುವುದು, ಮುಂದೆ ಬರುವುದು, ಬೆನ್ನ ಹಿಂದೆ ನಿಲ್ಲುವು ದು, ಹೀಗೆನಾನಾತರದ ವರಿಸೆಗಳಿಂದ ಒಬ್ಬರನ್ನೊಬ್ಬರು ಮೇಲೆ ಬಿಳದಹಾಗೆ ತಡೆಯುತಿದ್ದರು. ಮತ್ತು ಕುಳಿತವನನ್ನು ಮೇಲಕ್ಕೆಬ್ಬಿಸುವುದು, ಎದ್ದವನನ್ನು ಕೈಯಿಂದೆತ್ತುವುದು, ಒಬ್ಬರನ್ನೊಬ್ಬರು ಮೈಹಿಡಿದಾಡಿಸುವುದು, ಅಲ್ಲಾಡದ ಹಾಗೆ ಕೈ ಕಾಲುಗಳನ್ನು ಹಿಡಿದು ನಿಲ್ಲಿಸುವುದು, ಹೀಗೆ ಹಠದಿಂದ ಮೈಮುರಿ ದು ಹೋರಾಡುತಿದ್ದರು. ಬಾಲಕರಾದ ಆರಾಮಕೃಷ್ಣರಿಬ್ಬರೂ, ಮೈಕೊಬ್ಬಿ ಬೆಳೆದ ಜಟ್ಟಿಗಳೊಡನೆ ಹೋರಾಡುತ್ತಿರುವುದನ್ನು ನೋಡಿ, ಅಲ್ಲಿ ನೆರೆದಿದ್ದ ಸ್ತ್ರೀಯರೆಲ್ಲರೂ ಪರಿತಾಪಪಡುತ್ತ ಲೀ ! ಇದು ಬಹಳ ಅನ್ಯಾಯವು! ಈ ರಾಜನು ದಾಂಡಿಗರಾದ ಈ ಜಟ್ಟಿಗಳೊಡನೆ ಈ ಸಣ್ಣ ಬಾಲಕರನ್ನು ನಿಲ್ಲಿಸಿ ಯುದ್ಧಮಾಡಿಸುತ್ತಿರುವಾಗಲೂ, ಇಲ್ಲಿನ ಸಭಿಕರಲ್ಲಿ,ಯಾರೊಬ್ಬರೂ ಬಾಯೆ ಇದೆ ಸುಮ್ಮನೆ ನೋಡುತ್ತಿರುವರಲ್ಲಾ ! ಏನನ್ಯಾಯವಿದು .. ಬೆಟ್ಟದಂತೆ ಮೈಕೊಬ್ಬಿ ಬೆಳೆದು ವಜ್ರದೇಹವುಳ್ಳ ಈ ಜಟ್ಟಿಗಳೆಲ್ಲಿ! ಇನ್ನೂ ಯೌವನಾ ರಂಭವಿಲ್ಲದೆ ಸುಕುಮಾರವಾದ ಮೈಯುಳ್ಳ ಈ ಬಾಲಕರೆಲ್ಲಿ! ಇಲ್ಲಿ ನೋಡುತ್ತಿರುವ ಸಭಿಕರಿಗೆ, ಇದರಿಂದ ಧರಾತಿಕ್ರಮದೋಷವು ಎಂದಿಗೂ ತಪ್ಪಲಾರದು! ಹೀಗೆ ಅಧರವು ನಡೆಯತಕ್ಕ ಸ್ಥಳದಲ್ಲಿ ಕ್ಷಣಮಾತ್ರವೂ ನಿಲ್ಲಬಾರದು. ಸಭ್ಯರಲ್ಲಿ ದೋಷವುಂಟೆಂದು ತಿಳಿದಮೇಲೆ,ಬುದ್ದಿಶಾಲಿಯಾದ ವನು ಅಂತಹ ಸಭೆಗಳಿಗೆ ಪ್ರವೇಶಿಸಲೇಬಾರದು ! ಏಕೆಂದರೆ, ಒಬ್ಬರಲ್ಲಿರುವ ವ ದೋಷವನ್ನು ತಿಳಿದಮೇಲೆಯೂ, ಅದನ್ನು ಹೇಳದಿದ್ದರೆ, ಅಥವಾ ಮುಖ ದಾಕ್ಷಿಣ್ಯಕ್ಕಾಗಿ ವಿಪರೀತವಾಗಿ ಹೇಳಿದರೆ, ಅದರಿಂದ ಬಹಳ ಪಾಪವುಂಟು! ಓ ಸಖಿ! ಈ ಥರರಾಥರ ವಿಚಾರವು ಹಾಗಿರಲಿ ! ಶತ್ರುವಿಗಿದಿರಾಗಿ ಸು ತಾಡುವುದರಿಂದ, ನಮ್ಮ ಕೃಷ್ಣನ ಮುದ್ದು ಮುಖವು ಎಷ್ಟು ಬಾಡಿ ಹೋಗಿರುವುದು ನೋಡು ! ಕಮಲದಲ್ಲಿ ಮಕರಂದಬಿಂದುವಿನಂತೆ ಅವನ ಮುಖದಲ್ಲಿ ಬೆವರಿನ ಹನಿಗಳು ಹೇಗೆ ತೊಟ್ಟಿಕ್ಕುತ್ತಿರುವುವು ನೋಡು!ಓ ಸಖಿ ಯರೆ ! ಅದೋ ! ಅಲ್ಲಿ ಕೋಪದಿಂದ ಕೆಂಪೇರಿದ ಕಣ್ಣುಗಳುಳ್ಳವನಾಗಿ,
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೭೪
ಗೋಚರ