ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ ಅಧ್ಯಾ. ೪೫.] ದಶಮಸ್ಕಂಧನು. ಗಳ ಮೂಲಕವಾಗಿ ಆಗಾಗ ಪಾನಮಾಡುವುದರಿಂದ, ಯೌವನಶಾಲಿ 'ಗಳಂತೆ ಹೊಸದಾಗಿ ದೇಹಬಲವನ್ನೂ, ತೇಜಸ್ಸನ್ನೂ ಹೊಂದಿ ಶೋಭಿಸು ತಿದ್ದರು. ಆಮೇಲೆ ರಾಮಕೃಷ್ಣರಿಬ್ಬರೂ ತಮ್ಮ ಸಾಕುತಂದೆಯಾದ ನಂ ದಗೋಪನ ಬಳಿಗೆ ಬಂದು, ಅವನನ್ನು ಪ್ರೀತಿಯಿಂದಾಲಿಂಗಿಸಿಜನಕಾ!ನಮ್ಮ ನ್ನು ಇದುವರೆಗೆ ಎಷ್ಟೋ ಪ್ರೇಮದಿಂದ ಲಾಲಿಸಿ ಪೋಷಿಸಿದಿರಿ! ತಂದೆತಾ ಯಿಗಳಿಗೆ ತಮ್ಮ ಶರೀರಕ್ಕಿಂತಲೂ ಮಕ್ಕಳಲ್ಲಿ ಹೆಚ್ಚು ಪ್ರೀತಿಯಿರುವುದೇ ನೋ ಸಹಜವು! ಮತ್ತು ಹೆತ್ತ ತಾಯ್ತಂದೆಗಳು, ತಮ್ಮ ಮಕ್ಕಳನ್ನು ಪೋ ಹಿಸಲಾರದೆ ಕೈಬಿಟ್ಟಾಗ, ಯಾವ ಬಂಧುಗಳು ಆ ಮಕ್ಕಳನ್ನು ಪೋಷಿಸುವ ರೋ, ಅವರೇ ಆ ಮಕ್ಕಳಿಗೆ ತಾಯ್ತಂದೆಗಳು ! ಆದುದರಿಂದ ನಮ್ಮನ್ನು ಹೆತ್ತವರು ಬೇರೆಯಾಗಿದ್ದರೂ, ನೀವೇ ನಮಗೆ ತಂದೆತಾಯಿಗಳು : ತಾ ತಾ! ಇನ್ನು ನೀವು ಗೋಕುಲಕ್ಕೆ ಹೋಗಿರಿ ! ನಾವು ಇಲ್ಲಿ ನಮ್ಮ ಮಿತ್ರ ರೆಲ್ಲರನ್ನೂ ನೋಡಿಕೊಂಡು, ಅವರ ಮನಸ್ಸನ್ನು ಸಂತೋಷಪಡಿಸಿ ನಿಮ್ಮನ್ನು ನೋಡುವುದಕ್ಕಾಗಿ ಗೋಕುಲಕ್ಕೆ ಬರುವೆವು.” ಎಂದು ಹೇಳಿ ನಂದನಿಗೂ, ಅವನ ಸಂಗಡಿಗರಿಗೂ ಯಥೇಷ್ಟವಾಗಿ ವಸ್ತ್ರಾಭರಣ ಗಳನ್ನೂ, ಪಾತ್ರದಾರಗಳನ್ನೂ ಕೊಡಿಸಿ, ಅತ್ಯಾದರದಿಂದ ಮನ್ನಿಸಿ ಕಳುಹಿಸಿದನು. ನಂದನು, ಪತ್ರಪ್ರೇಮದಿಂದ ಕಣ್ಣಿರುಸುರಿಸುತ್ತ, ರಾ ಮಕೃಷ್ಣರನ್ನಾಲಿಂಗಿಸಿಕೊಂಡು, ಅವರನ್ನು ಬಿಟ್ಟು ಹೋಗಲಾರದೆ ಕಳವ ಳಿಸುತ್ತಿದ್ದು ಕೊನೆಗೆ ತನ್ನ ಪರಿವಾರಗಳೊಡನೆ ಮಂದೆಗೆ ಹೊರಟನು. wx (ರಾಮಕೃಷ್ಟರಿಗೆ ವಸುದೇವನು ಉಪನಯನಾದಿ).

  • 1 ಸಂಸ್ಕಾರಗಳನ್ನು ನಡೆಸಿದುದು,

ಆಮೇಲೆ ವಸುದೇವನು, ಪುರೋಹಿತರಾದ ಗರ್ಗಾಗಾರರನ್ನೂ, ಇತರಬ್ರಾಹ್ಮಣರನ್ನೂ ಕರೆಸಿ, ತನ್ನ ಮಕ್ಕಳಿಬ್ಬರಿಗೂ ದ್ವಿಜರಿಗೆ ನಡೆಯ ಬೇಕಾದ ಉಪನಯನಸಂಸ್ಕಾರವನ್ನು ಯಥಾವಿಧಿಯಾಗಿಮಾಡಿಸಿದನು. ಆಗ ಬ್ರಾಹ್ಮಣರೆಲ್ಲರನ್ನೂ ವಿಶೇಷವಾಗಿ ಸತ್ಕರಿಸಿ, ಅವರನ್ನು ವಸಾಭರಣ ಗಳಿಂದಲಂಕರಿಸಿ, ಭೂರದಕ್ಷಿಣೆಗಳೊಡನೆ ಸುವರ್ಣಾಲಂಕೃತಗಳಾದ ಅನೇ ಕಗೋವುಗಳನ್ನು ಕರುಗಳ ಸಹಿತವಾಗಿ ದಾನಮಾಡಿದನು. ಮತ್ತು ಹಿಂದೆ