೨೦೫೨ ಶ್ರೀಮದ್ಭಾಗವತವು ಅಧ್ಯಾ. ೪೫, ತಾನು ಕಂಸನ ಸೆರೆಯಲ್ಲಿದ್ದಾಗ, ರಾಮಕೃಷ್ಣರ ಜನನಕಾಲದಲ್ಲಿ, ಎಷ್ಟು . ಗೋವುಗಳನ್ನು ದಾನಮಾಡುವುದಾಗಿ ಸಂಕಲ್ಪಿಸಿದನೋ ಅವೆಲ್ಲವನ್ನೂ ಈಗ ಲೋಪವಿಲ್ಲದೆ ನಡೆಸಿದನು. ಇದಲ್ಲದೆ ಕಂಸನು ಅಧರದಿಂದ ಯಾವಯಾವ ಬ್ರಾಹ್ಮಣರ ಸ್ವತ್ತನ್ನು ಅಪಹರಿಸಿದ್ದನೋ, ಅವೆಲ್ಲವನ್ನೂ ತ ರಿಸಿ ಆಯಾಬ್ರಾಹ್ಮಣರಿಗೆ ಒಪ್ಪಿಸಿದನು. ರಾಮಕೃಷ್ಣರಿಬ್ಬರೂ ಉಪನಯನ ಸಂಸ್ಕಾರದಿಂದ ದ್ವಿಜತ್ವವನ್ನು ಹೊಂದಿದಮೇಲೆ, ಗರ್ಗಾಚಾತ್ಯರ ಉಪದೇ ಶಕ್ರಮವನ್ನನುಸರಿಸಿ ಬ್ರಹ್ಮಚಯ್ಯವ್ರತವನ್ನು ನಡೆಸುತಿದ್ದರು. ಆ ಸಹೋದರ ರಿಬ್ಬರೂ ಸಮಸ್ತ ವಿದ್ಯೆಗಳಿಗೂ ತಾವೇ ಉತ್ಪತ್ತಿ ಸ್ಥಾನವಾಗಿ, ಸರೂಜ್ಯರಾಗಿ ದರೂ, ಸ್ವತಸ್ಸಿದ್ದವಾದ ತಮ್ಮ ವಿಮಲಜ್ಞಾನವನ್ನು ಮನುಷ್ಯಲೀಲೆ ಯಿಂದ ಮರೆಸಿಟ್ಟುಕೊಂಡು, ಲೋಕನಟನೆಗಾಗಿ ಗುರುಕುಲವಾಸವನ್ನು ಮಾಡಬೇಕೆಂಬ ಉದ್ದೇಶದಿಂದ, ಆವಂತೀಪುರಕ್ಕೆ ಬಂದು, ಅಲ್ಲಿ ಕಾಶ್ಯಗೊ ತ್ರದ ಸಾಂದೀಪನನೆಂಬ ಗುರುವಿನಲ್ಲಿ ಜಿತೇಂದ್ರಿಯರಾಗಿ ಗುರುಶುಕ್ರೂಷೆ ಯನ್ನು ಮಾಡುತಿದ್ದರು. ಮತ್ತು ತಮ್ಮ ನಡತೆಯಿಂದ ಗುರೂವಾಸನಾಕ್ರ ಮವನ್ನು ಲೋಕಕ್ಕೆ ಬೋಧಿಸುವುದಕ್ಕಾಗಿ, ಆ ಗುರುವನ್ನೇ ಪರದೇವತೆ ಯಂತ ಗೌರವಿಸಿ ಪೂಜಿಸುತಿದ್ದರು. ಬಾಹ್ನ ಸೋತ ಮನಾದ ಸಾಂದೀ ಪನನು, ಆ ಅಣ್ಣತಮ್ಮಂದಿರಿಬ್ಬರೂ ನಿರ್ಮಲಭಾವದಿಂದ ತನಗೆ ಮಾಡು ತಿರುವ ಶುಶೂಷೆಗಾಗಿ ಬಹಳ ಸಂತೋಷಪಟ್ಟು, ಉಪನಿಷತ್ತುಗಳೊಡನೆ ಸಮಸ್ತ ವೇದಗಳನ್ನೂ, ವೇದಾಂಗಗಳನ್ನೂ ಕ್ರಮವಾಗಿ ಅವರಿಗೆ ಉಪದೇಶಿ ಸಿದನು. ಮತ್ತು ಮಂತ್ರರಹಸ್ಯಗಳೊಡನೆ ಧನುರ್ವೇದವನ್ನೂ, ಮನ್ಯಾವಿ ಧರಶಾಸ್ತ್ರಗಳನ್ನೂ, ನ್ಯಾಯಶಾಸ್ತ್ರವನ್ನೂ, ಮೀಮಾಂಸೆಯನ್ನೂ, ಸಂಧಿ ವಿಗ್ರಹ ಮೊದಲಾದ ಆರುಬಗೆಯ ರಾಜನೀತಿಗಳನ್ನೂ ತಿಳಿಸಿದನು. ಭಗವದಂ ಶಭೂತರಾದ ಆ ಬಾಲಕರಿಬ್ಬರೂ ಸ್ವತಃ ಸರೂಜ್ಯರಾಗಿಯೂ, ಸಮಸ್ತ ವಿದ್ಯೆ ಗಳಿಗೂ ತಾವೇ ಪ್ರವರ್ತಕರಾಗಿಯೂ ಇದ್ದುದರಿಂದ, ತಮ್ಮ ಗುರುವಿನಬಾ • ಯಿಂದ ಒಂದಾವರ್ತಿ ಹೊರಟಮಾತ್ರಕ್ಕೆ ಅವನು ಹೇಳಿದುದಕ್ಕಿಂತಲೂ ಹೆಚ್ಚಾಗಿ ಗ್ರಹಿಸುತ್ತ, ಅರುವತ್ತು ನಾಲ್ಕು ದಿನಗಳೊಳಗಾಗಿಯೇ, ಆ ರುವತ್ತು ನಾಲ್ಕು ಕಲೆಗಳನ್ನೂ, ಅವುಗಳ ಅನುಷ್ಠಾನನಿಯಮಗಳನ್ನೂ ಕಲಿ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೮೬
ಗೋಚರ