ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ado ಶ್ರೀಮದ್ಭಾಗವತನು [ಅಧ್ಯಾ ೪೬ ಆಹೋದಂತೆಯೇ, ಅವನು ಇಲ್ಲಿಗೆ ಬರುವುದರಲ್ಲಿ ಸಂದೇಹವಿಲ್ಲ ! ಅವನು ಆಡಿ ದಮಾತಿಗೆ ತಪ್ಪಿನಡೆಯಲಾರನು ! ನೀವು ಚಿಂತಿಸಬೇಕಾದುದಿಲ್ಲ : ನೀವು ಶೀ ಪುದಲ್ಲಿಯೇ ಅವನನ್ನು ಇಲ್ಲಿ ನೋಡಬಹುದು ! ಅಥವಾ ಈಗಲೂ ಕೃಷ್ಣ ನು ನಿಮ್ಮನ್ನು ಬಿಟ್ಟು ಹೋಗಿರುವನೆಂದು ತಿಳಿಯಬೇಡಿರಿ! ಅರಣಿಯಲ್ಲಿರುವ ಅಗ್ನಿ ಯಂತೆ, ಅವನು ಯಾವಾಗಲೂ, ಎಲ್ಲರ ಹೃದಯದಲ್ಲಿಯೂ ಗೂಢವಾಗಿ ಅಡಗಿರುವನು. ಅರಣಿಕಾಷ್ಟ್ರಗಳನ್ನು ಜೈದಾಗಲ್ಲವೇ ಅಗ್ನಿ ಯು ಹೊರಕ್ಕೆ ಬರು ವುದು? ಅದರಂತೆ ಹೃತನಾದ ಆ ಪರಮಾತ್ಮನನ್ನು ಭಕ್ತಿಭಾವದಿಂದ ಕಂಡುಕೊಳ್ಳಬಹುದು. ಆದರೆ ಆಕೃನಸಿಗೆ, ಹೆತ್ತತಾಯಿತಂದೆಗಳಾ ದ ದೇವಕೀವಸುದೇವರು ನಮಗಿಂತಲೂ ಹೆಚ್ಚು ಪ್ರಿಯರಾಗಿರುವಾಗ, ವರನ್ನು ಬಿಟ್ಟು ಇಲ್ಲಿಗೆ ಬರುವ ?” ಎಂದು ನೀವು ಶಂಕಿಸಬೇಡಿರಿ! ಅವನಿಗೆ ಒಬ್ಬನು ಪ್ರಿಯನೆಂದೂ,ಮತ್ತೊಬ್ಬನು ಅಪ್ರಿಯನೆಂದೂ, ಉತ್ತಮನೆಂದೂ, ಅಧಮನೆಂದೂ, ಸಮಾನನೆಂದೂ ಭೇದಬುದ್ಧಿಯಿಲ್ಲ ಎಲ್ಲರಲ್ಲಿಯೂ ಸಮ ಬುದ್ದಿಯುಳ್ಳವನು. ಏಕೆಂದರೆ, ಅವನಿಗೆ ಯಾವುದರಲ್ಲಿಯೂ ತ ಇದೆಂಬ ಮಮತೆಯೇ ಪುಟ್ಟಲಾರದು ಅವನಿಗೆ ತಂದೆ, ತಾಯಿ, ಹೆಂಡತಿ, ಮಕ್ಕಳು, ಎನ್ನವರು, ತನ್ನವರೆಂಬವರು ಯಾರೂ ಇಲ್ಲ ! ಅವನಿಗೆ ಕಮ್ಮಸಂಬಂಧವಿಲ್ಲದುದರಿಂದ, ಕಾಯತ್ತವಾದ ದೇಹವೂ ಅವನಿಗಿರುವುದಿಲ್ಲ ! ಹೀಗೆ ದೇಹಸಂಬಂಧವೇ ಇಲ್ಲದವ ಸಿಗೆ, ಆ ದೇಹದ ಮೂಲಕವಾಗಿ ಏರ್ಪಡುವ ಬಂಧುತ್ಯಾಭಿಮಾನವೆಲ್ಲಿಯ ದು ? ಅವನು ತಾನಾಗಿ ಸ್ವಚ್ಛೆಯಿಂದ ಅವತಾರವನ್ನೆ ತುವನೇ ಹೊರತು ನಮ್ಮಂತೆ ಆವನಿಗೆ ಉತ್ತಮಮಧ್ಯಮಾಧ್ಯಮಗಳೆನಿಸಿಕೊಂಡ ದೇವಾದಿ ಜನ್ಮಗಳೂ ಇಲ್ಲ ಅವನು ಈ ಅವತಾರಗಳನ್ನು ಕೈಗೊಳ್ಳುವುದೂ ಲೋ ಕಕ್ಷೇಮಕ್ಕಾಗಿಯೇ ಹೊರತು ಬೇರೆಯಲ್ಲ. ಇವೆಲ್ಲವೂ ಅವನ ಲೀಲೆಗಳು ! ಮತ್ತು ಅವನು, ಸತ್ವ,ರಜಸ್ಸು, ತಮಸ್ಸು ಎಂಬೀ ಮೂರುಗುಣಗಳಿಗೆ ವಶ ನಲ್ಲದಿದ್ದರೂ, ಲೀಲಾಧ್ಯವಾಗಿಯೇ ಅವುಗಳನ್ನು ಕೈಕೊಂಡು, ಸೃಷ್ಟಿ, `ಸ್ಥಿತಿ, ಸಂಹಾರಗಳನ್ನು , ನಡೆಸುತ್ತಿರುವನು. ಮನುಷ್ಯನು ತನ್ನಷ್ಟಕ್ಕೆ ತಾ ನು ಸುತ್ತುವಾಗ, ಅವನ ಕಣ್ಣಿಗೆ ಸ್ಥಿರವಾದ ಭೂಮಿಯ ಸುತ್ತುತ್ತಿರುವ