೨೦೬೧ ಅಧ್ಯಾ. ೪೬.] | ದಶಮಸ್ಕಂಧವು. ಹಾಗೆ ಕಾಣುವುದಲ್ಲವೆ? ಅದರಂತೆಯೇ ಕರ ಮಾರ್ಗದಲ್ಲಿ ತೊಳಲುತ್ತಿರುವ ಜೀವನು ತನ್ನಂತೆಯೇ ಆ ಕೃಷ್ಣನನ್ನೂ ಭಾವಿಸಬಹುದು. ಓ ನಂದಾ ! ಭಗವಂತನಾದ ಕೃಷ್ಣನು ನಿಮಗೆ ಮಾತ್ರವೇ ಆತ್ಮಜ (ಮಗ) ನಲ್ಲ ! ಸಮಸ್ತಪ್ರಾಣಿಗಳಲ್ಲಿಯೂ ಅಂತರಾತ್ಮನಾಗಿರುವುದರಿಂದ ಎಲ್ಲರಿಗೂ ಆತ್ಮಜನೆನಿಸಿರುವನು, ಮತ್ತು ಎಲ್ಲರಿಗೂ ಅವನೇ ತಂದೆ!ಅವನೇ ತಾಯಿ! ಪಾ ಲಿಸತಕ್ಕ ಪ್ರಭುವೂ ಆತನೇ! ಅಷ್ಟೇಕೆ? ನಾವು ಕಣ್ಣಿಂದ ಕಾಣುವುದು, ಕಿವಿಯಿಂದ ಕೇಳುವುದು, ಹಿಂದೆ ಹುಟ್ಟಿದುದು, ಮುಂದೆ ಹುಟ್ಟತಕ್ಕದು, ಈಗ ಇರತಕ್ಕುದು, ರಚರಗಳು, ಎಲ್ಲಕ್ಕಿಂತಲೂ ಮಹತ್ತಾದುದು, ಅತ್ಯ ಲ್ಪವಾದುದು, ಇವೆಲ್ಲವೂ ಆ ಪರಮಾತ್ಮನ ಸ್ವರೂಪವೆಂದೇ ತಿಳಿ! ಆ ಆ ಚ್ಯುತನಿಲ್ಲದ ವಸ್ತುವೊಂದಾದರೂ ಇಲ್ಲ! ಸಮಸ್ತಲೋಕಕ್ಕೂ ಅಂತರಾ ತ್ಮನಾಗಿ ನಿಯಮಿಸತಕ್ಕವನೇ ಅವನಾದುದರಿಂದ ಜಗತ್ತೆಲ್ಲವೂ ಅವನೇ !” ಎಂದನು. ಹೀಗೆ ನಂದನೂ, ಉದ್ದವನೂ ಪರಸ್ಪರಸಂಭಾಷಣಗಳನ್ನು ಮಾ ಡುತ್ತಿರುವುದರಲ್ಲಿಯೇ ಆ ರಾತ್ರಿಯು ಕಳೆಯುತ್ತ ಬಂದಿತು, ಬೆಳಗಿನ ಚಾವ ದಲ್ಲಿಯೇ ಗೋಪಿಯರೆಲ್ಲರೂ ಎಚ್ಚರಗೊಂಡು, ದೀಪಗಳನ್ನು ಬೆಳಗಿಸಿ, ಮ ನೆಗೆಲಸಗಳನ್ನು ನೋಡುತಿದ್ದರು. ಮನೆಬಾಗಿಲುಗಳನ್ನು ಸಾರಿಸಿ ಗುಡಿಸಿ, ರಂ ಗೋಲೆಗಳಿಂದಲೂ, ಗಂಧಪುಷ್ಪಾದಿಗಳಿಂದಲೂ ಅಲಂಕರಿಸಿಟ್ಟು, ಮೊಸರ ನ್ನು ಕಡೆಯುವುದಕ್ಕೆ ಆರಂಭಿಸಿದರು ಮೊಸರನ್ನು ಕಡೆಯುವಾಗ ಅವರಿಗೆ, ಕೈಬಳೆಗಳ ಫುಲಧ್ವನಿ , ದೀಪಪ್ರಭೆಯಲ್ಲಿ ಥಳಥಳಿಸುತ್ತಿರುವ ರತ್ನಾ ಭರಣಗಳು ! ಕುಲುಕಾಡುವ ಸ್ತನಜಘನಗಳು ! ಕಂಠದಲ್ಲಿ ತೂಗಾ ಡುತ್ತಿರುವ ಮುತ್ತಿನ ಸರಗಳು: ಕೆನ್ನೆ ಯಲ್ಲಿ ಅಲುಗಾಡುತ್ತಿರುವ ಕಿವಿಯೋ ಲೆಗಳು ! ಮುಖದಲ್ಲಿ ಕದಲಿದ ಕುಂಕುಮಪರಾಗಗಳು ! ಇವೆಲ್ಲವೂ ಒಂದು ವಿಧವಾದ ಅಪೂಶೋಭೆಯನ್ನುಂಟುಮಾಡುತ್ತಿದ್ದುವು ಆ ಗೂ ಪಸಿಯರು, ಶ್ರೀಕೃಷ್ಣನ ಗುಣವರ್ಣನರೂಪವಾದ ಹಾಡುಗಳನ್ನು ಹಾಡು ಮೊಸರನ್ನು ಕಡೆಯುವಾಗ, ಉತ್ಸಾಹದಿಂದುಬ್ಬಿದ ಅವರ ಕಂಠ ಧ್ವನಿಯೂ, ಕರೆಯುವ ಧ್ವನಿಯೂ ಒಂದಾಗಿ ಕಲೆತು, ದಿಕ್ಕುಗಳನ್ನೂ, ಆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೯೫
ಗೋಚರ