೨00 ಶ್ರೀಮದ್ಭಾಗವತವು [ಅಧ್ಯಾ.೪೭. ಹಾಗೆ, ಆತನು ತಮ್ಮ ಸಮೀಪದಲ್ಲಿ ಕಣ್ಣಿ ದಿಂಗಿರುವಾಗ ನಿಲ್ಲಲಾರದು. ನೀವು ನಿಮ್ಮ ಮನಸ್ಸೆಲ್ಲವನ್ನೂ ನನ್ನಲ್ಲಿಯೇ ನೆಲೆಗೊಳಿಸಿ, ಇತರ ವ್ಯಾಪಾರಗಳೆಲ್ಲ ವನ್ನೂ ಮರೆತು, ಯಾವಾಗಲೂ ನನ್ನನ್ನು ಸ್ಮರಿಸುವುದರಿಂದ, ನಿಮಗೆ ಶೀ ಫ್ರದಲ್ಲಿಯೇ ನನ್ನ ನಿತ್ಯಸಾನ್ನಿಧ್ಯವು ಲಭಿಸುವುದರಲ್ಲಿ ಸಂದೇಹವಿಲ್ಲ. ಹಿಂದೆ ಶರತ್ಕಾಲದ ರಾತ್ರಿಗಳಲ್ಲಿ ನಾನು ಲಾಸಕ್ರೀಡೆಯನ್ನು ನಡೆಸು ವಾಗ, ಯಾವ ಸ್ತ್ರೀಯರು, ತಮ್ಮ ಪತಿವ್ರತಾದಿಗಳಿಂದ ಮನೆಯಲ್ಲಿಯೇ ನಿರ್ಬಂಧಿಸಲ್ಪಟ್ಟು, ನನ್ನೊಡನೆ ರಾಸಕ್ರೀಡೆಯಲ್ಲಿ ಸೇರುವುದಕ್ಕೆ ಅವಕಾಶ ವನ್ನು ಪಡೆಯದೆ ಹೋದರೋ, ಅವರೆಲ್ಲರೂ ಮನೆಯಲ್ಲಿಯೇ ನನ್ನ ಸಂತತ ಧ್ಯಾನದಿಂದ ನನ್ನ ಸಾನ್ನಿಧ್ಯವನ್ನು ಹೊಂದಲಿಲ್ಲವೆ ? ಪರೋಕ್ಷದಲ್ಲಿದ್ದರೂ ನನ್ನ ನ್ನು ಪಡೆಯಬಹುದೆಂಬುದಕ್ಕೆ ಇದಕ್ಕಿಂತಲೂ ಬೇರೆ ನಿದರ್ಶನವೇನಾಗ ಬೇಕು ?” ಎಂದು ನಿಮಗೆ ತಿಳಿಸುವಂತೆ ಕೃಷ್ಣನು ಹೇಳಿರುವನು. ಎಂದು ಉದ್ದವನು ಹೇಳಿದ ಕೃಷ್ಣ ಸಂದೇಶವನ್ನು ಕೇಳಿ, ಗೋಪಿಯರೆಲ್ಲರೂ ಆ ಕೃಷ್ಣನ ಸಂದೇಶವಾಕ್ಯಗಳಿಂದ ಹಿಂದಿನ ವೃತ್ತಾಂತಗಳೆಲ್ಲವನ್ನೂ ಸ್ಮರಿಸಿ ಕೊಂಡು, ಸಂತೋಷದಿಂದ ಉದ್ದವನನ್ನು ಕುರಿತು ಹೀಗೆಂದು ಹೇಳುವರು. <<ಓ ಸೌಮ್ಯಾ : ಯದುಕುಲದ್ರೋಹಿಯಾಗಿ, ಪರಮಪಾಪಿಯಾದ ಕಂಸನು ಸಂಕೃತನಾದನಲ್ಲವೆ ? ಕೃಷ್ಣನೂಕೂಡ ತನ್ನ ಇಷ್ಟಬಂಧುಗಳ ಕೋರಿಕೆಗೆ ಳೆಲ್ಲವನ್ನೂ ಈಡೇರಿಸಿಕೊಟ್ಟು, ಈಗ ನಿಶ್ಚಿಂತನಾಗಿ ಕ್ಷೇಮದಿಂದಿರುವ ನಷ್ಟೆ ? ಇವೆಲ್ಲವೂ ನಮ್ಮ ಭಾಗ್ಯವು ! ಉದ್ಧವಾ! ಈಗ ಕೃಷ್ಣನು, ಮಧುರಾಪುರದಲ್ಲಿರುವ ಸ್ತ್ರೀಯರ ಅನುರಾಗಪೂರಕವಾದ ಮತ್ತು ಲಜ್ಞಾಗರ್ಬಿತವಾದ ಮಂದಹಾಸಕ್ಕೂ, ಅವರ ನೇತ್ರಸೌಂದಯ್ಯಕ್ಕೂ ಮೋಹಿತನಾಗಿ, ಹಿಂದೆ ನಮ್ಮಲ್ಲಿ ತೋರಿಸುತಿದ್ದ ಪ್ರೀತಿಯನ್ನೇ ಅವರ ಲ್ಲಿಯೂ ತೋರಿಸುತ್ತಿರಬಹುದಲ್ಲವೆ ? ಅಥವಾ ಅವನು ರತಿವಿಶೇಷಗಳನ್ನು ಚೆನ್ನಾಗಿ ಬಲ್ಲವವನು ! ಆ ಪರಸ್ತ್ರೀಯರಿಗೂ ಅವನಲ್ಲಿ ಬಹಳ ಅನುರಾಗ ರುಂಟು ! ಹೀಗಿರುವಾಗ ಆ ಕೃಷ್ಣನು, ಅವರ ಮೋಹದ ಮಾತುಗಳಿಗೂ, ಅವರ ನಾಗರಿಕವಿಲಾಸಗಳಿಗೂ ಹೇಗೆತಾನೇ ಪರವಶವಾಗದಿರುವನು ? ಓ ಸಾಥ್ ! ಆ ಕೃಷ್ಣನು ಅಲ್ಲಿನ ಪರಸ್ತ್ರೀಯರೊಡನೆ ಲೀಲೆಗಳನ್ನು ನಡೆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦೪
ಗೋಚರ