ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬೨ ಶ್ರೀಮದ್ಭಾಗವತರು [ಅಧ್ಯಾ, ೪೭. ಮಾತ್ರವಾದರೂ ಬಿಡದೆ ಅವನ ಎದೆಯಲ್ಲಿಯೇ ಕುಳಿತಿರುವಳಲ್ಲಾ ! ಅಂ ತಹ ಉತ್ತಮಕನನ್ನು ಯಾರು ತಾನೇ ಬಿಡಬಲ್ಲರು ? ಈ ನದಿಗಳು, ಈ ಪತಗಳು, ಈ ವನಪ್ರದೇಶಗಳು, ಈ ಗೋವುಗಳು, ಈ ಕೊಳಲಿನ ಧ್ವನಿಗಳು, ಇವೆಲ್ಲವೂ ಹಿಂದೆ ಆ ಕೃಷ್ಣನು ಅನುಭವಿಸಿ ಬಿಟ್ಟುಹೋದ ವಸ್ತುಗಳೇ ! ಆ ನಂದಕುಮಾರನ ಪಾದಚಿಹ್ನಗಳಿಂದ ಶೋಭಿತವಾದ ಈ ಪ್ರದೇಶವು, ನಮ್ಮ ಕಣ್ಣಿಗೆ ಬೀಳುತ್ತಿರುವವರೆಗೆ, ನಾವು ಹೇಗೆತಾನೇ ಆತ ನನ್ನು ಮರೆಯಬಲ್ಲೆವು ? ಹಿಂದೆ ಆ ಕೃಷ್ಣನ ಗಂಭೀರವಾದ ನಡೆಯನ್ನೂ, ಅವನ ಮಂದಹಾಸದ ಸೊಗಸನ್ನೂ , ವಿಲಾಸವಿಶಿಷ್ಟವಾದ ಅವನ ದೃಷ್ಟಿ ಸೌಂದಯ್ಯವನ್ನೂ ಆಗಾಗ ನೋಡಿ, ಅದರಿಂದ ಪರವಶಹೃದಯರಾದ ನಮ ಗೆ, ಈಗ ಅವೆಲ್ಲವನ್ನೂ ಮರೆತುಬಿಡಬೇಕೆಂದರೆ ಹೇಗೆತಾನೇ ಸಾಧ್ಯವು ? ” ಎಂದು ಹೇಳಿ ಆ ಕೃಷ್ಣನನ್ನು ಮನಸ್ಸಿನಲ್ಲಿ ನೆನೆಸಿಕೊಂಡು « ಓ ನಾಧಾ ! ಓ ರಮಾನಾಥಾ! ಓ ಗೋಕುಲನಾಥಾ ! ಓ ದುಃಖನಿವಾರಕಾ ! ನಿನ್ನ ವಿರಹದುಃಖದಲ್ಲಿ ಮುಳುಗಿಹೋಗಿರುವ ಈ ಗೋಕುಲವನ್ನು ನೀನು ಕೃಪೆ ಯಿಂದುದ್ಧರಿಸಬಾರದೆ ?” ಎಂದು ಪ್ರಾಸಿದರು. ಓ ಪರೀಕ್ಷಿದ್ರಾಜಾ ! ಆಮೇಲೆ ಆಗೋಪಿಯರೆಲ್ಲರೂ, ಕೃಷ್ಣನು ತಮಗೆ ಹೇಳಿಕಳುಹಿಸಿದ ಸಂದೇಶಗಳನ್ನು ಸ್ಮರಿಸಿಕೊಂಡು, ಆಕೃಷ್ಣನು ಸರಾಂತರಾತ್ಮರಾತ್ಮನೆಂಬುದನ್ನು ತಿಳಿದು, ಮನಸ್ಸನ್ನು ಸಮಾಧಾನನಾ ಡಿಕೊಂಡು, ದೂತನಾಗಿ ತಮ್ಮಲ್ಲಿಗೆ ಬಂದ ಉದ್ದವನನ್ನು ಅನೇಕ ವಿಧದಿಂದ ಸತ್ಕರಿಸಿ ಪೂಜಿಸಿದರು. ಉದ್ಯವನೂ ಕೆಲವು ತಿಂಗಳವರೆಗೆ ಆ ಗೋಪಿಯರ ಮುಂದೆ ಕೃಷ್ಣನ ಕಥೆಗಳನ್ನು ಹಾಡುತ್ತ, ಅವರ ಮನಸ್ಸಿನ ದುಃಖವ ನ್ನು ನೀಗಿಸಿ ಸಂತೋಷಪಡಿಸುತ್ತಿದ್ದನು. ಉದ್ದವನು ಅಲ್ಲಿದ್ದಷ್ಟು ದಿನಗಳೂ, ಅವನಿಂದ ಕೃಷ್ಣನ' ಕಥೆಗಳನ್ನು ಕೇಳುತ್ತಿದ್ದ ಗೋಪಿಯರಿಗೆ ಕಣಪ್ಪಾ ಯವಾಗಿ ಕಳೆದುಹೋದುವು. ಮತ್ತು ಉದ್ಯವನು ಅಲ್ಲಿನ ಪರೈತಗಳನ್ನೂ, ರಣ್ಯಗಳನ್ನೂ, ನದಿಗಳನ್ನೂ, ಪಷಿತಗಳಾದ ವನಗಳನ್ನೂ ನೋಡುತ್ತ, ಅಲ್ಲಲ್ಲಿ ಕೃಷ್ಣನು ನಡೆಸಿದ ಲೀಲೆಗಳನ್ನು ಪ್ರಶ್ನೆ ಮಾಡುವುದರಿಂದ, ಅವರಿಗೆ ಆಗಾಗ ಆತನ ಸ್ಮರಣೆಯನ್ನುಂಟುಮಾಡುತ್ತ ಸಂತೋಷದಿಂದಿರುತ್ತಿದ್ದನು.