so ಅಭ್ಯ, ೪೭.|| ದಶಮಸ್ಕಂಧವು. ಗೋಪಿಯರು ಸದಾಕೃಷ್ಣನ ಚಿಂತೆಯಿಂದ ಕೊರಗುತ್ತಿರುವುದನ್ನು ನೋಡಿ, ಉದ್ಧವನು ಅವರ ಭಕ್ತಿಗೆ ಮೆಚ್ಚಿ, ಸಂತೋಷದಿಂದ ಅವ ರಿಗೆ ನಮಸ್ಕರಿಸುತ್ತ, ತನ್ನಲ್ಲಿ ತಾನು ಅವರನ್ನು ಹೀಗೆಂದು ಕೊಂಡಾಡು ವನು.” ಆಹಾ ! ಲೋಕದಲ್ಲಿ ಈ ಗೋಪಿಯರಲ್ಲವೇ ಸಾರಕವಾದ ಜನ್ಮವು ಇವರು ! ಅಖಿಲಾತ್ಮನಾದ ಗೋವಿಂದಲ್ಲಿ ಇವರಿಗೆ ಹುಟ್ಟಿರುವ ಭಕ್ತಿವಿಶೇ ಷವು ಬೇರೆಯಾರಿಗೆ ತಾನೇ ಹುಟ್ಟುವುದು! ಸಂಸಾರಕ್ಕೆ ಭಯಪಟ್ಟು, ಮೋ ಕಾಪೇಕ್ಷೆಯಿಂದಿರುವ ಮಹಾಮುನಿಗಳೂ, ಅಲ್ಪರಾದ ನನ್ನಂತವರೂ ಅಪೇ ಕ್ಷಿಸಬೇಕಾದುದೂ ಇದೇ ಅಲ್ಲವೆ? ಆ ಭಗವಂತನ ಕಥಾನುಭವದಲ್ಲಿ ಈವಿಧ ವಾದ ಅಭಿರುಚಿಯು ಹುಟ್ಟಿದಮೇಲೆ,ಬ್ರಹ್ಮ ಪಟ್ಟದಲ್ಲಿಯಾಗಲಿ,ಬ್ರಾಹ್ಮಣ ಜನ್ಮದಲ್ಲಿಯಾಗಲಿ ಅತಿಶಯವೇನು? ಹಳ್ಳಿಯಲ್ಲಿ ಗೊಲ್ಲತಿಯರಾಗಿ ಹುಟ್ಟಿ ರೂ ಇವರ ಜನ್ಮವೇ ಜನ್ಮವು: ಅಡವಿಯಲ್ಲಿ ತಿರುಗುತ್ತ,ಮೃಗಗಳಂತೆ ಕೇವಲ 'ವ್ಯಭಿಚಾರಶೀಲರಾದ ಈ ಗೊಲ್ಲತಿಯರೆಂದರೇನು ? ಆ ಪರಮಾತ್ಮನಲ್ಲಿ ಈ ವಿಧವಾದ ಭಕ್ತಿಯು ಹುಟ್ಟುವುದೆಂದರೇನು ? ಮುಖ್ಯವಾಗಿ ಕರುಣಾನಿಧಿ ಯಾದ ಭಗವಂತನು, ತನ್ನ ಸ್ವರೂಪವನ್ನು ನಿಜವಾಗಿ ತಿಳಿಯಲಾರದ ಮೂ ಢರಿಗೂ, ಅವರು ಯಾವುದೋ ಒಂದುಭಾವದಿಂದ ತನ್ನನ್ನು ಭಜಿಸಿದಾಗ, ಸಾಯುವ ರೋಗಿಗೆ ಜೀವಾಮೃತವನ್ನು ಕುಡಿಸಿದಂತೆ, ಅವರಲ್ಲಿ ಅನುಗ್ರಹವ ನ್ನು ತೋರಿಸಿ ಶ್ರೇಯಸ್ಸನ್ನು ಕೈಗೂಡಿಸುವನು, ಈ ಗೋಪಾಂಗನೆಯರಿಗೆ ಲ ಭಿಸಿದ ಈಭಾಗ್ಯವು, ಸದಾಭಗವಂತನ ವಕ್ಷಸ್ಥಲದಲ್ಲಿ ನೆಲೆಗೊಂಡಿರತಕ್ಕ ಲಕ್ಷ್ಮೀದೇವಿಗಾಗಲಿ, ಕಮಲದಂತೆ ದೇಹಕಾಂತಿಯುಳ್ಳ ಪದ್ಯಗಂಧಿನಿಯ ರಾದ ದೇವಸೀಯರಿಗಾಗಲಿ ಲಭಿಸಲಾರದು! ಇನ್ನು ಇತರಸಾಮಾನ್ಯ ಯರ ಮಾತೇನು? ಹಿಂದೆ ರಾಸಕ್ರೀಡಾಮಹೋತ್ಸವದಲ್ಲಿ, ಆ ಪರಮಪುರುಷ ನ ಭುಜಗಳಿಂದಾಲಿಂಗಿಸಲ್ಪಟ್ಟ ಕಂಠವುಳ್ಳವರಾಗಿ, ಆತನ ಶರೀರಸ್ಪರ್ಶದಿಂ ಟಾದ ಸೌಖ್ಯವನ್ನನುಭವಿಸಿದ ಈ ಗೋಪಿಯರ ಭಾಗ್ಯವು ಬೇರೆಯಾರಿಗೆತಾ ನೇ ಲಭಿಸುವುದು? ಆಹಾ! ಈ ಗೋಪಿಯರು, ತಮ್ಮ ಪತಿಪುತ್ರಾದಿಗಳನ್ನೂ ತೊರೆದು, ಆರಧರವನ್ನೂ ಅನಾದರಿಸಿ, ವೇದಗಳಿಗೂ ಅಗೋಚರನಾಶ ಆ ಕೃಷ್ಣನೊಡನೆ ಕಲೆತಿದ್ದರಲ್ಲವೆ? ಇಂತಹ ಮಹಾಭಾಗ್ಯವತಿಯರ ಪಾದ,
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦೭
ಗೋಚರ