ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೪ ಶ್ರೀಮದ್ಭಾಗವತವು [ಅಧ್ಯಾ. ೪೭. ಧೂಳಿಯ ಸಂಬಂಧವುಂಟಾಗುವಂತೆ, ನನಗೆ ಈ ಬೃಂದಾವನದಲ್ಲಿರುವ ತರು ಗುಲ್ಕತಾದಿಗಳಲ್ಲಿ ಯಾವುದಾದರೂ ಒಂದುಜನ್ಮವು ಲಭಿಸಿದರೆ ಸಾಕು ! ಅದೇ ನನಗೆ ಪರಮಭಾಗ್ಯವು ! ಯಾವುದನ್ನು ಲಕ್ಷ್ಮಿ ದೇವಿಯು ಭಕ್ತಿಯಿಂ ದರ್ಚಿಸುವಳೋ, ಮತ್ತು ಆಪ್ತಕಾಮರಾದ ಬ್ರಹ್ಮಾದಿದೇವತೆಗಳೂ, ಮು ನಿಗಳೂ, ತಮ್ಮ ಮನಸ್ಸಿನಲ್ಲಿಟ್ಟು ಧ್ಯಾನಿಸುವರೋ, ಅಂತಹ ಶ್ರೀಕೃಷ್ಣ ನ ಪಾದಾರವಿಂದವನ್ನು , ಆಗಾಗ ತಮ್ಮ ಎದೆಯಮೇಲಿಟ್ಟು ಒತ್ತಿಕೊಳ್ಳು ತಿರುವ ಈ ಗೋಪಿಯರ ಭಾಗ್ಯಕ್ಕಿಂತಲೂ ಭಾಗ್ಯವುಂಟೆ?ಯಾರಬಾಯಿಂದ ಹೊರಟ ಹರಿಕಥಾಗಾನವು, ತ್ರೈಲೋಕ್ಯವನ್ನೂ ಪಾವನಮಾಡುತ್ತಿರು ವುದೋ, ಆ ಗೋಪಾಂಗನೆಯರ ಪಾದರೇಣುವನ್ನು ಬಾರಿಬಾರಿಗೂ ವಂದಿ ಸುವೆನು.” ಹೀಗೆಂದು ಹೇಳಿ ಉದ್ದವನು, ಆ ಗೋಪಿಯರ ಮಹಿಮೆಯನ್ನು ಮನ ಸ್ಸಿನಲ್ಲಿಯೇ ಕೊಂಡಾಡುತ್ತ, ಆ ಗೋಪಿಯರಿಗೂ, ನಂದಯಶೋದೆಯರಿಗೂ ಇತರಗೋಪಾಲಕರಿಗೂ, ತಾನು ಹೋಗಿಬರುವುದಾಗಿ ತಿಳಿಸಿ, ತನ್ನ ರಥವ ನೈರಿದನು. ಆಗ ನಂದಾದಿಗಳೆಲ್ಲರೂ ಪ್ರಯಾಣಸನ್ನದ್ಧನಾಗಿರುವ ಆ ಉ ಆವನಿಗೆ ಕೈಕಾಣಿಕೆಗಳನ್ನು ತಂದೊಪ್ಪಿಸಿ, ಕಣ್ಣುಗಳಲ್ಲಿ ಪ್ರೇಮಬಾಷ್ಪವ ನ್ನು ಸುರಿಸುತ್ತ ಹೀಗೆಂದು ಹೇಳುವರು ( ಉದ್ದವಾ ! ಸೌಮ್ಯಾ! ಇನ್ನು ನಾವು ಹೇಳಬೇಕಾದುದೇನಿದೆ ! ಮುಖ್ಯವಾಗಿ ನಮ್ಮ ಮನೋವ್ಯಾಪ್ಪಾರಗ ಲೆಲ್ಲವೂ ಆ ಶ್ರೀಕೃಷ್ಣನ ಪಾದಾರವಿಂದದಲ್ಲಿಯೇ ನೆಲೆಯಾಗಿ ನಿಲ್ಲಲಿ ! ನ ಮೃ ವಾಕ್ಕುಗಳೆಲ್ಲವೂ ಆತನ ನಾಮಗಳನ್ನೇ ನುಡಿಯುತ್ತಿರಲಿ ! ನಮ್ಮ ದೇ ಹವು ಆತನ ಪಾದವಂದನಾದಿಕಾರಗಳಲ್ಲಿಯೇ ನಿರತವಾಗಿರಲಿ ! ಕಲ್ಯಾ ನುಗುಣವಾದ ಈಶ್ವರೇಚ್ಛೆಯಿಂದ, ಸಂಸಾರಮಾರ್ಗದಲ್ಲಿ ತೊಳಲುತ್ತಿರುವ ನಾವು, ಏನಾದರೂ ಶುಭಕರವನ್ನು ನಡೆಸಿದ್ದರೆ, ದಾನಧಮ್ಮಗಳನ್ನೇನಾದ ರೂ ಮಾಡಿದ್ದರೆ, ಅದರ ಫಲದಿಂದ ನಮಗೆ ಆ ಕೃಷ್ಣನಲ್ಲಿಯೇ ಅನುರಾಗವು ಶಾಶ್ವತವಾಗಿರಲಿ !” ಎಂದರು. ಹೀಗೆ ಗೋಪಾಲಕರು ಕೃಷ್ಣನಲ್ಲಿರುವ ಭಕ್ತಿ ಯಿಂದ,ಆತನಿಗೆ ದೂತನಾಗಿ ಬಂದ ಉದ್ಧವನನ್ನು ಸನ್ಮಾನಿಸಲು,ಆ ಉದ್ಧ ವನು ಅಲ್ಲಿಂದ ಹೊರಟು ಮಧುರೆಗೆ ಬಂದನು. ಕೃಷ್ಣನಿಗೆ ಸಂತೋಷದಿಂದ