ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭ ಅಣ್ಯ. ೪೮.] ದಶಮಸ್ಕಂಧವು. ನಮಸ್ಕರಿಸಿ, ತಾನು ಹೋಗಿ ಬಂದ ವೃತ್ತಾಂತವನ್ನೂ, ಗೋಕುಲದವರಿಗೆ ಆ ಕೃಷ್ಣನಲ್ಲಿರುವ ಭಕ್ತಿ ಶಯವನ್ನೂ ತಿಳಿಸಿದನು. ಕೃಷ್ಣನಿಗೂ, ಬಲ ರಾಮನಿಗೂ, ಉಗ್ರಸೇನರಾಜನಿಗೂ ನಂದಾದಿಗಳು ಕಳುಹಿಸಿಕೊಟ್ಟ ಕಾಣಿ ಕೆಗಳನ್ನೊಪ್ಪಿಸಿದನು. ಇದು ನಾಲ್ವತ್ತೇಳನೆಯ ಅಧ್ಯಾಯವು. wwಕೃಷ್ಣನು ಕುಳ್ಳೆಯ ಮತ್ತು ಆಕರನ ಮನೆಗೆ ಹೋದುದು++ ಆಮೇಲೆ ಕೃಷ್ಣನು, ಹಿಂದೆ ತಾನು ತ್ರಿವಕ್ರೆಯೆಂಬ ವೇಶ್ಯಗೆ ಮಾ ಇದ್ದ ವಾಗ್ದಾನವನ್ನು ಜ್ಞಾಪಿಸಿಕೊಂಡು, ತನ್ನನ್ನು ನೋಡಬೇಕೆಂಬ ಕು ತೂಹಲದಿಂದ ಕೊರಗುತ್ತಿರುವ ಅವಳ ಮನಸ್ಸಿಗೆ ಸಂತೋಷವನ್ನುಂಟು ಮಾಡುವುದಕ್ಕಾಗಿ, ಆ ದಾಸಿಯ ಮನೆಗೆ ಹೊರಟನು. ಅವಳಾದರೋ ಮೊದ ಕೀ ವೇಶ್ಯ ! ಕೃಷ್ಣನು ತನ್ನ ಮನೆಗೆ ಯಾವಾಗ ಬರುವನೋ ಎಂಬ ನಿರೀಕ್ಷೆ ಯಿಂದ ಮನೆಯನ್ನು ಚೆನ್ನಾಗಿ ಅಲಂಕರಿಸಿ, ಬೇಕುಬೇಕಾದ ಸಾಮಗ್ರಿಗಳೆಲ್ಲ ರನ್ನೂ ಸಿದ್ಧಪಡಿಸಿದಳು. ಆ ಮನೆಯಲ್ಲಿ ಬೇಕುಬೇಕಾದ ಆಮೂಲ್ಯ ಪದಾ ಗಳೆಲ್ಲವೂ ತುಂಬಿದ್ದುವು. ಕ್ರೀಡಾ ಸಾಮಗ್ರಿಗಳೆಲ್ಲವೂ ಸಿದ್ಧವಾಗಿದ್ದುವು. sಂದವಾದ ಮೇಲ್ಕಟ್ಟುಗಳು!ಅದರ ಸುತ್ತಲೂ ವಿಚಿತ್ರವರ್ಣದ ಜಾಲರಿಗಳು! ಲ್ಲಲ್ಲಿ ಮುತ್ತಿನ ಕುಚ್ಚುಗಳು! ಬೆಲೆಯುಳ್ಳ ಹಾಸಿಗೆಗಳು! ಸುಖವಾದ ಆಸ ನಗಳು !ಅಲ್ಲಲ್ಲಿ ಸುಗಂಧಭೂಪಗಳು, ದೀಪಗಳು,ಪಷ್ಟಮಾಲಿಕೆಗಳು, ಇವುಗ ಳಿಂದ ಮನೆಯೆಲ್ಲವೂ ಅತ್ಯಂತಶೋಭಾಯಮಾನವಾಗಿರುವುದು. ಮತ್ತು ಮ ನೆಯಸುತ್ತಿನ ಗೋಡೆಗಳಲ್ಲಿ, ಕಾಮಶಾಸ್ತ್ರದಲ್ಲಿ ಹೇಳಲ್ಪಟ್ಟ ನಾನಾಬಗೆಯ ರತಿಬಂಧಗಳನ್ನು ತೋರಿಸತಕ್ಕ ವಿಚಿತ್ರವರ್ಣದ ಚಿತ್ರಗಳು ಬರೆಯಲ್ಪಟ್ಟಿರು ವುವು. ಕೃಷ್ಣನು ಈ ಸನ್ನಿವೇಶಗಳೆಲ್ಲವನ್ನೂ ನೋಡುತ್ತ ಬರುತ್ತಿರುವಾಗ, ಆ ದಾಸಿಯು ದೂರದಿಂದಲೇ ಅವನನ್ನು ಕಂಡು, ಪರಮಸಂಭ್ರಮದಿಂದ ತಟ್ಟ, ನೆ ಮೇಲೆದ್ದು, ತನ್ನ ಗೌಡಿಯರೊಡನೆ, ಆಸನಾದಿಗಳನ್ನು ಸಿದ್ಧಪಡಿಸಿ, ಮುಂ ದೆಬಂದು ಕೃಷ್ಣನನ್ನು ಕರೆದುಕೊಂಡುಹೋಗಿ ಕುಳ್ಳಿರಿಸಿ ಪೂಜಿಸಿದಳು. ಹಾಗೆಯೇ ಕೃಷ್ಣನಸಂಗಡ ಬಂದಿದ್ದ ಉದ್ಯ: ನನ್ನೂ ಯಥೋಚಿತವಾಗಿ ಸತ್ಕರಿಸಿ, ಅವನಿಗೂ ಒಂದು ಉತ್ತಮಾಸವವನ್ನು ಕೊಡಲು, ಅವನು, ಆದ