ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

so೮೧ ಅಧ್ಯಾ, ೪೯.] ದಶಮಸ್ಕಂಧವು. ನಾವತಿಗೆ ಹೋಗಿ, ಪಾಂಡವರ ಯೋಗಕ್ಷೇಮಗಳನ್ನು ತಿಳಿದು ಬರಬೇಕು. ಅವರ ತಂದೆಯಾದ ಪಾಂಡುರಾಜನು ಮೃತನಾದಮೇಲೆ, ದುಃಖಿತರಾದ ಆ ಬಾಲಕರನ್ನೂ, ಅವರ ತಾಯಿಯಾದ ಕುಂತೀದೇವಿಯನ್ನೂ, ಧೃತರಾ ಷ್ಯನು ತನ್ನ ಪಟ್ಟಣಕ್ಕೆ ಕರೆದುಕೊಂಡು ಹೋಗಿ, ತನ್ನಲ್ಲಿಟ್ಟುಕೊಂಡು ಪೋಷಿಸುತ್ತಿರುವುದಾಗಿ ಕೇಳುವೆನು. ಆದರೆ ಆ ಧೃತರಾಷ್ಟ್ರನು ಮೊದಲೇ ವೃದನು. ಇದರಮೇಲೆ ಕಣ್ಣಿಲ್ಲದ ಕುರುಡನು. ಆದುದರಿಂದ ತನ್ನ ಬುದ್ಧಿ ಯನ್ನು ತನ್ನ ಸ್ವಾಧೀನದಲ್ಲಿಟ್ಟುಕೊಳ್ಳಲಾರದೆ, ದುಷ್ಟಸ್ವಭಾವವುಳ್ಳ ತನ್ನ ಮಕ್ಕಳಾದ ದುದ್ಯೋಧನಾದಿಗಳ ಮಾತನ್ನು ಕೇಳಿಕೊಂಡು, ಪಾಂಡವ ರಲ್ಲಿ ಭೇದಬುದ್ದಿಯನ್ನು ತೋರಿಸಬಹುದು. ಅವನು ಪಾಂಡವರನ್ನೂ, ತನ್ನ ಮಕ್ಕಳನ್ನೂ ನಿಷ್ಪಕ್ಷಪಾತವಾದ ಸಮಬುದ್ಧಿಯಿಂದ ನೋಡುವನೆಂಬುದು ಸುಳ್ಳು ! ಆದುದರಿಂದ ಈಗಲೇ ನೀನು ಹೋಗಿ, ಅಲ್ಲಿ ಪಾಂಡವರ ಸ್ಥಿತಿಯು ಸಮರ್ಪಕವಾಗಿರುವುದೇ ಇಲ್ಲವೇ ಎಂಬುದನ್ನು ತಿಳಿದು ಬರಬೇಕು! ಮೊದಲು ನಾವು ಅದನ್ನು ತಿಳಿದುಕೊಂಡು, ಮುಂದೆ ಅವರಿಗೆ ಕ್ಷೇಮವುಂ ಟಾಗುವ ರೀತಿಯನ್ನು ಯೋಚಿಸುವೆವು.” ಎಂದನು. ಹೀಗೆ ಕೃಷ್ಣನು ಅಕ್ರೂರನನ್ನು ಹಸ್ತಿನಾವತಿಗೆ ಹೋಗುವಂತೆ ನಿಯಮಿಸಿ, ಉದ್ಭವಬಲರಾ ಮರೊಡನೆ ಹಿಂತಿರುಗಿ ತನ್ನ ಮನೆಗೆ ಬಂದನು. ಇದು ನಾಲ್ವತ್ತೆಂಟನೆಯ ಅಧ್ಯಾಯವು. ( ಅಕ್ರ ನು ಹಸ್ತಿನಾವತಿಯಲ್ಲಿ ಪಾಂಡವರ ) ಈ ಯೋಗಕ್ಷೇಮವನ್ನು ವಿಚಾರಿಸಿದುದು. Xಕೃಷ್ಟಾಜ್ಞೆಯಂತೆ ಆಕ್ರನು ಒಡನೆಯೇ ಅಲ್ಲಿಂದ ಹೊರಟು, ಕುರುವಂಶದ ಪುರಾತನರಾಜರ ಕೀರ್ತಿಯನ್ನು ಸೂಚಿಸುವಂತೆ, ಅನೇಕ ದೇವಾಲಯಗಳಿಂದಲೂ, ಬ್ರಾಹ್ಮಣರ ಅಗ್ರಹಾರಗಳಿಂದಲೂ ಶೋಭಿತ ವಾದ ಹಸ್ತಿನಾವತಿಗೆ ಬಂದನು. ಅಲ್ಲಿ ಮೊದಲು ಕುರುಪಿತಾಮಹನಾದ ಭೀಷ್ಮನನ್ನೂ, ಧೃತರಾಷ್ಟ್ರನನ್ನೂ,ವಿದುರನನ್ನೂ, ಕುಂತೀದೇವಿಯನ್ನೂ ಕಂಡು ನಮಸ್ಕರಿಸಿ, ಅವರ ಕ್ಷೇಮಲಾಭಗಳನ್ನು ವಿಚಾರಿಸಿದನು. ಆಮೇಲೆ 131 B