ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮೪ ಶ್ರೀಮದ್ಭಾಗವತವು ಅಧ್ಯಾ, ೪, ಸಬೇಕಾಯಿತು. ಈಗ ನೀನು ಕುರುರಾಜರ ಸಿಂಹಾಸನವನ್ನೇರಿರುವೆ? ಮುಂದೆ ಕುರುವಂಶದ ಕೀರ್ತಿಯು ಕೆಡದಂತೆ ಕಾಪಾಡಬೇಕಾದ ಭಾರವು ನಿನ್ನ ದು! ಆದುದರಿಂದ ಭೂಮಿಯನ್ನು ಧರದಿಂದ ಪಾಲಿಸು!ನಿನ್ನ ಗುಣಗಳಿಂ ದಪ್ರಜೆಗಳನ್ನು ಸಂತೋಷಗೊಳಿಸು!ನಿನ್ನ ಬಂಧುವರ್ಗವೆಲ್ಲವನ್ನೂ ಸಮದ್ಯ ಷ್ಟಿಯಿಂದ ನೋಡು ! ಇದರಿಂದ ಮುಂದೆ ನೀನು ಕೀರ್ತಿಯನ್ನೂ, ಶ್ರೇ ಯಸ್ಸನ್ನೂ ಹೊಂದುವೆ ! ಹಾಗಿಲ್ಲದೆ ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ, ಲೋಕಾಪವಾದಕ್ಕೊಳಗಾಗಿ, ಕೊನೆಗೆ ನರಕದಲ್ಲಿಯೂ ಬೀಳುವೆ? ಆದುದ ರಿಂದ ಮುಖ್ಯವಾಗಿ ನೀನು ನಿನ್ನ ಮಕ್ಕಳನ್ನೂ ,ಪಾಂಡವರನ್ನೂ ಸಮಬುದ್ದಿ ಯಿಂದ ನೋಡುತ್ತಿರಬೇಕು.” ಸ್ವಂತಮಕ್ಕಳಿಗೆ ಸಮಾನವಾಗಿ, ಇತರರ ಮ ಕ್ಕಳನ್ನು ನೋಡುವುದಕ್ಕಾದೀತೆ !”ಎಂದು ನೀನು ಹೇಳಬಹುದು! ಈ ಲೋಕ ದಲ್ಲಿ ಸ್ವಂತವೆಂಬುದೊಂದೂ ಇಲ್ಲ ! ನಮ್ಮ ದೇಹವೇ ನಮ್ಮೊಡನೆ ಬರಲಾರ ಬರುವಾಗ,ಇನ್ನು ಮನೆಮಂದಿಮಕ್ಕಳನ್ನು ಸ್ವಂತವೆಂದು ನಂಬುವುದು ಹೇಗೆ? ಈ ಪ್ರಪಂಚದಲ್ಲಿ ಒಬ್ಬನಿಗೆ ಇನ್ನೊಬ್ಬನೊಡನೆ ಎಡೆಬಿಡದ ಸಂಬಂಧವೆಂಬು ದೇ ಸುಳ್ಳು: ಮನುಷ್ಯನು ಹುಟ್ಟುವಾಗಲೂ ತಾನೊಬ್ಬನೇ ಹುಟ್ಟುವನು! ಸಾಯುವಾಗಲೂ ತಾನೊಬ್ಬನೇ ಸಾಯುವನು! ಪುಣ್ಯಪಾಪಗಳ ಫಲವನ್ನ ನುಭವಿಸುವಾಗಲೂ ತಾನೊಬ್ಬನೇ ಅನುಭವಿಸುವನು' ಹೊಟ್ಟೆಯಲ್ಲಿ ಹು ಟ್ಟಿದ ಮಕ್ಕಳಾದರೇನು ? ಕೈಹಿಡಿದ ಹೆಂಡತಿಯಾದರೇನು! ಸಾಯುವಾಗ ಯಾರೂ ತನ್ನೊಡನೆ ಸಾಯುವರಿಲ್ಲ Y ಮನುಷ್ಯನು ತನ್ನ ಹೆಂಡಿರು ಮಕ್ಕಳನ್ನು ಪೋಷಿಸಬೇಕೆಂಬ ನೇವನ್ನಿಟ್ಟುಕೊಂಡು, ತಿಳುವಳಿಕೆಯಿಲ್ಲದೆ, ಎಷ್ಟೋ ಅಧರಗಳನ್ನು ಮಾಡಿ ಗಳಿಸಿದ ಹಣವನ್ನು ಕಿತ್ತು ತಿನ್ನುವುದಕ್ಕಾಗಿ ಮಕ್ಕಳೇ ಹೊರತು ಬೇರೆಯಲ್ಲ ! ದೊಡ್ಡಮೀನುಗಳಿಗೆ ಜೀವನಾಧಾರವಾದ ನೀರನ್ನು ಮುಮೀನುಗಳು ಕುಡಿದುಬಿಡುವಂತೆ,ತಂದೆಯ ಹಣವನ್ನು ಕಿತ್ತು ತಿನ್ನುವುದೇ ಮಕ್ಕಳ ಕೆಲಸವ. ಆದುದರಿಂದ ಮಕ್ಕಳನ್ನು ಒಂದುವಿಧದಿಂದ ಶತ್ರುಗಳೆಂ ದೇ ಹೇಳಬಹುದು : ಮನುಷ್ಯನು ಮೂಢಬುದ್ಧಿಯುಳ್ಳವನಾಗಿ, ತನ್ನದೆಂಬ ಮಮತೆಯಿಂದ, ಯಾವ ಪ್ರಾಣಗಳನ್ನೂ, ಧನವನ್ನೂ, ಹೆಂಡಿರುಮಕ್ಕಳ ನ್ಯೂ ಅಕ್ಕರೆಯಿಂದ ಪೋಷಿಸುತ್ತಿರುವನೋ, ಅವೆಲ್ಲವೂ ಮಧ್ಯಕಾಲದಲ್ಲಿ