ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಅಧ್ಯಾ, ೩.] ದಶಮಸ್ಕಂಧವು. ಹೊಂದಿ! ರುದ್ರನೆಂಬ ಹೆಸರಿನಿಂದ ಲೋಕವನ್ನು ಸಂಹರಿಸುವೆ ! ಹೀಗೆ ನೀನೊಬ್ಬನೇ ಬ್ರಹ್ಮ ರುದ್ರರೆಂಬ ಜೀವಗಳಲ್ಲಿ ಅನುಪ್ರವೇಶಮಾಡಿ, ಈ ಲಯಗಳನ್ನೂ , ನಿಜರೂಪದಿಂದ ರಕ್ಷಣಕಾರವನ್ನೂ ನಡೆಸತಕ್ಕವನು. ಓ ಲೋಕೇಶ್ವರಾ : ಈಗ ನೀನು ಲೋಕರಕ್ಷಣಾರವಾಗಿಯೇ ಈ ನನ್ನ ಕ್ಷೇತ್ರದಲ್ಲಿ ಈ ರೂಪದಿoದವತರಿಸಿರುವೆ ! ಕ್ಷತ್ರಿಯರೂಪದಿಂದ ಈ ಲೋ ಕದಲ್ಲಿ ಜನಿಸಿರುವ ಕೋಟ್ಯನುಕೋಟಿ ದಾನವಸೈನ್ಯಗಳಲ್ಲವನ್ನೂ ನೀನು ಶೀಘ್ರಕಾಲದಲ್ಲಿಯೇ ನಿರೂಲಮಾ ಡುವದರಲ್ಲಿ ಸಂದೇಹವಿಲ್ಲ! ಓ ದೇವ ದೇವಾ ! ಆದರೆ ಸಾಧುಗಳು ಮನಸ್ಸಿನಿಂದಲೂ ' ಸ್ಮರಿಸಬಾರದ ಕೂರ ನಾದ ಕಂಸನು, ನೀನು ಹೀಗೆ ನನ್ನ ಗೃಹದಲ್ಲಿ ಅವತರಿಸುವ ವಿಷಯವನ್ನು ಮೊದಲಿಂದಲೂ ಕೇಳಿಬಲ್ಲನು. ಇದಕ್ಕಾಗಿಯೇ ನಿನಗೆ ಮೊದಲು ಹುಟ್ಟಿದ ನನ್ನ ಮಕ್ಕಳೆಲ್ಲರನ್ನೂ ಸಂಹರಿಸಿರುವನು. ಈಗ ನಿನ್ನ ಜನ್ಮವೃತ್ತಾಂತವನ್ನು ತನ್ನ ಕಡೆಯ ದೂತರಮುಖರಿಂದ ಕೇಳಿದಕೂಡಲೆ, ಅವನು ಆಯು ಧಪಾಣಿಯಾಗಿ ನಿನ್ನನ್ನು ಕೊಲ್ಲುವುದಕ್ಕೆ ಬರುವನು. ಆದುದರಿಂದ ಈಗಲೇ ನೀನು ಈ ರೂಪವನ್ನು ಮರೆಸಿಕೊಳ್ಳಬೇಕು.” ಎಂದನು ಓ ಪರೀಕ್ಷಿದ್ರಾಜಾ ? ಆಗ ದೇವಕಿದೇವಿಯು, ತನ್ನ ಗರ್ಭದಲ್ಲಿ ಸಾಕ್ಷಾಷ್ಟುಸ್ವರೂಪದಿಂದ ಜನಿಸಿದ ಶಿಶುವನ್ನು ನೋಡಿದೊಡನೆ, ಸಂ ತೋಷದಿಂದ, ಕಂಸನ ವಿಷಯವಾಗಿ ತನ್ನ ಮನಸ್ಸಿನಲ್ಲಿ ಭಯವನ್ನೂ ಮ ತು, ಮುಖದಲ್ಲಿ ಮೂಗಿಗೆಯನ್ನು ಬೀರುತ್ಯ, ಹೀಗೆಂದು ಸ್ತುತಿಸುವರು. (“ಓಮಹಾತ್ಮಾ! ನಿನ್ನ ರ್ಪಸ್ವರೂಪವು, ಸ್ಕೂಲಪ್ರಕೃತಿಯತೆ ಇo bಯಗಳಿಗೆ ಗೋಚರವಲ್ಲದೆ, ಸೂಕ್ಷ ಪ್ರಕೃತಿಗೂ ಕಾರಣವಾಗಿ, ಸತ್ಸಾ ಜಗುಣರಹಿತವಾಗಿ, ಯಾವಾಗಲೂ ಏಕರೂಪವಾಗಿಯೂ ಇರುವುದರಿಂದ, ಸ್ಕೂಲಸೂಕ್ಷ ಪ್ರಕೃತಿಗಿಂತ ಬೇರೆಯಾದುದೆಂದೂ, ಮತ್ತು ಸ್ವಯಂ ಪ್ರಕಾಶವಾಗಿಯೂ, ಪ್ರಣ್ಯಪಾಪರಹಿತವಾಗಿಯೂ, ಅಸಂಕುಚಿತ ಜ್ಞಾನ ವುಳ್ಳುದಾಗಿಯೂ, ಸ್ವರೂಪದಿಂದಲೂ, ಗುಣದಿಂದಲೂ ಬೃಹತ್ತಾಗಿ ಬ್ರ ಹ್ಮಶಬ್ದ ವಾಚ್ಯವಾಗಿಯೂ ಇರುವುದರಿಂದ, ಬದ್ಧ ಮುಕ್ತನಿತ್ಯಜೀವರಿಗಿಂತ ಲೂ ಬೇರೆಯಾದುದೆಂದೂ ವೇದಾಂತಿಗಳು ನಿರ್ಣಯಿಸಿರುವರು. ಅ ಶ್ರೀ