ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪s ಶ್ರೀಮದ್ಭಾಗವತವು ಅಧ್ಯಾ, ೩. ಹರಿಯೇ ಸೀನೆಂಬುದನ್ನು ಈಗ ಸ್ಪಷ್ಟವಾಗಿ ತಿಳಿದೆನು. ಮತ್ತು ಓ ಲೊ ಕನಾಧಾ ! ಚತುರಖಬ್ರಹ್ಮನಿಗೆ ಎರಡು ಪರಾರ್ಧಕಾಲವು ಕಳೆದಮೇಲೆ, ಪ್ರಳಯವುಂಟಾಗಿ, ಲೋಕವೆಲ್ಲವೂ ನಷ್ಟವಾದಾಗ, ಕಾಲಗತಿಯಿಂದ ಪೃಥಿವಿ ಮೊದಲಾದ ಮಹಾಭೂತಗಳೆಲ್ಲವೂ ತಮ್ಮ ತಮ್ಮ ಕಾರಣವನ್ನು ವಿನಲ್ಲಿ ಐಕ್ಯಹೊಂದುತ್ತ ಬಂದು, ಕೊನೆಗೆ ಪ್ರಕೃತಿಯೂ ಸೂಕ್ಷಾವಸ್ಥೆ ಯನ್ನು ಹೊಂದಿ, ಆವ್ಯಕ್ತವೆನಿಸಿ, ಸಿನ್ನಲ್ಲಿ ಲೀನವಾದಮೇಲೆ,ಸೀನೊಬ್ಬನೇ ಈ ಆಯತಕ್ಕವನು. ಆದುದರಿಂದಲೇ ನಿನ್ನನ್ನು ಶೇಷನೆಂದು ಹೇಳುವರು. ಆ ದರೆ ಅವ್ಯಕ್ತವಾಗಿಯಾದರೂ ಪ್ರಕೃತಿಯ ನನ್ನೊಡನೆ ಇರುವಾಗ, ಪ್ರ ಛಯದಲ್ಲಿ ನಾನೊಬ್ಬನೇ ಇರುವೆನೆಂಬುದು ಹೇಗೆ” ಎಂದರೆ, ಅವ್ಯಕ್ತವೆಂ ಬುದು ಆಗಲೂ ನಿನ್ನನ್ನು ಬಿಟ್ಟು ಬೇರೆಯಾಗಿರಲಾರದೆ, ನಿನ್ನ ಫಿಯೇ ಐ ಕ್ಯಹೊಂದಿ, ನಿನಗೆ ಶರೀರವಾಗಿ ನಿಮ್ಮ ಆಧಾರದಿಂದಲೇ ಇರುವುದರಿಂದ ಆಗಲೂ ಅದನ್ನು ನಿನಗಿಂತಲೂ ಬೇರೆಯೆಂದು ಹೇಳುವುದಕ್ಕಿಲ್ಲ. ಇದರಿಂದ ಆ ಪ್ರಳಯದಶೆಯಲ್ಲಿಯೂ ಚಿದಚಿತೃರೀಕನಾದ ನೀನೊಬ್ಬನೇ ಇರುವೆ ಯೆಂಬುದು ವಿರುದ್ಧವಲ್ಲ. 4 (ಕಾಲವೆಂಬು ವಾದಆಗ ನನ್ನೊಡನೆ ನಡೆ ಯುತ್ತಿರುವಾಗ, ಅಕಾಲವೂ ಇಷ್ಟತಾಗಾಯಿತಲ್ಲವೆ' ? ಎಂದರೆ ಸಿಮೆ ಷವು ಮೊದಲಾಗಿ ಮಹಾಕಾಲದವರೆಗೆ ಗಣಿಸಲ್ಪಡತಕ್ಕುದಾಗಿಯೂ, ಮಹತ್ತಾಗಿ ಬ್ರಹ್ಮಶಬ್ಬವಾಚ್ಯವಾಗಿಯೂ ಸಮಸ್ತ ವಿಶ್ವವನ್ನೂ ನಿಯ ವಿಸತಕ್ಕುದಾಗಿಯೂ ಇರುವ ಆ ಕಾಲವೂಕೂಡ, ಸಿನ ಚೇಷಾ ಮಾತ್ರ ವೆಂದೇ ಹೇಳುವರು.ಹೀಗೆ ಕಾಲವೂ ನಿನ್ನ ವ್ಯಾಪಾರಮಾತ್ರವಾದುದರಿಂದ ನಿನ್ನ ಏಕತ್ರಕ್ಕೆ ಅದರಿಂದ ವಿರೋಧವು ಬಾರದು, ಹೀಗೆ ಕಾಲವನ್ನೆ ತನ್ನ ಚೇಷ್ಟೆಯಾಗಿ ಹೊಂದಿ, ಆ ಕಾಲಕ್ಕೂ ನಿಯಾಮಕನಾಗಿ, ಲೋಕಕ್ಷೆ ಮವನ್ನುಂಟುಮಾಡುವ ನಿನ್ನನ್ನು ಶರಣುಹೊಂದುವನು. ಜನನಮರಣ ರೂಪವಾದ ಸಂಸಾರದಲ್ಲಿ ಬಿದ್ದವನು, ಬೇರೆ ಯಾವ ಉಪಾಯಗಳನ್ನು ನ ಡೆಸಿಯೂ ಅದನ್ನು ತಪ್ಪಿಸಿಕೊಳ್ಳಲಾರನು. ಕೊನೆಗೆ ಯಾದೃಚ್ಛಿಕವಾದ ಪ ವಿಶೇಷದಿಂದ ಅವನ ಮನಸ್ಸು ನಿನ್ನ ಪಾದಾರವಿಂದದಲ್ಲಿ ಪ್ರವರ್ತಿಸಿದ ರೆ, ಆಗಲೇ ಅವನು ನಿರ್ಭಯವಾಗಿ ನೆಮ್ಮದಿಯಿಂದಿರಬಹುದು. ಆತನನನ