ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಅಧ್ಯಾ. ೩.] ದಶಮಸ್ಕಂಧವು. ಕಂಡರೆ ಮೃತ್ಯುವೂ ತಾನಾಗಿಯೇ ಭಯಪಟ್ಟು ಓಡುವುದು. ಹೀಗೆ ಆಿತರ ಭಯವನ್ನು ಬಿಡಿಸತಕ್ಕ ನೀನು ಕಂಸನಿಂದ ನಮಗುಂಟಾಗಿರುವ ಭಯವನ್ನು ನೀಗಿಸಬೇಕು. ಲೋಕನಾಥಾ : ಮಹಾಯೋಗಿಗಳಿಗೆ ಕೇವಲಧ್ಯಾನಯೋಗದಿಂದಮಾತ್ರವೇ ಗೋಚರಿಸತಕ್ಕ ಈ ನಿನ್ನ ರ್ಪಸ್ವ ರೂಪವನ್ನು , ಮಾ೦ಸಭಕ್ಷಸ್ತುಗಳಾದ ನಮಗೆ ಹೀಗೆ ಪ್ರತ್ಯಕ್ಷವಾಗಿ ಕಾಣಿಸಿದರೆ, ಅದನ್ನು ನಾವು ಹೇಗೆ ನೋಡಬಲ್ಲೆವು? ಆದುದರಿಂದ ನೀನು ಒಡನೆಯೇ ಈ ರೂಪವನ್ನು ಮರೆಸಿಕೊಂಡು, ನಮ್ಮ ಕಣ್ಣಿಗೆ ಸಾಮಾನ್ಯ ರೂಪದಿಂದ ಕಾಣಿಸಿಕೊಳ್ಳಬೇಕು' ಓ ಮಧುಸೂದನಾ ! ಪಾಪಿಯಾದ ಕಂಸನು, ನಿನಗಾಗಿಯೇ ಕಣ್ಣಿಟ್ಟು ಕಾದಿರುವನು ಈಗ ನೀನು ನನ್ನ ಗರ್ಭದಲ್ಲಿ ಜನಿಸಿದ ಸಂಗತಿಯು ಆ ನೀಚನಿಗೆ ತಿಳಿಯದಂತೆ ಮಾಡು! ದೇ ವಾ ! ನೀನಿರುವಾಗ ನಾನು ಸ್ವಲ್ಪ ಮಾತ್ರವೂ ಭಯಪಡಬೇಕಾದುದಿಲ್ಲವಾ ದರೂ, ಸಹಜವಾಗಿ ಭೀರಸ್ವಭಾವವುಳ್ಳ ನನಗೆ, ಆ ಕಂಸನ ಭಯವು ಹೆ ಚುತ್ತಿರುವುದು, ಓ ವಿಶ್ವಾತ್ಮಾ! ಚತುರ್ಭುಜಗಳಿಂದಲೂ, ಶಂಖಚಕ್ರಗದಾ ಪದ್ಯಗಳಿಂದಲೂ ಶೋಭಿತವಾದ ಈ ನಿನ್ನ ಪರಸ್ವರೂಪವನ್ನು ಈಗಲೇ ನೀನು ಮರೆಸಿಕೊಳ್ಳಬೇಕು' ಆಹಾ ! ಇದಲ್ಲವೇ ಪರಮಾಶರವು ! ಪ್ರಳ ಯವಾದಮೇಲೆ ಫನಸ್ಸಷ್ಟಿಗಮೊದಲು, ನಿನ್ನ ದೇಹದ ಯಾವುದೋ ಒಂದು ಭಾಗದಿಂದ ಹೊರಟ ತಾವರೆಹೂವಿನ ತುದಿಯಲ್ಲಿ, ಚಿದಚಿದಾತ್ಮ ಕವಾದ ಸಮಸ್ತಪ್ರಪಂಚವೂ ಅಡಗಿ ನಿಲ್ಲುವುದು. ಹೀಗೆ ಸಮಸ್ತ ಜಗ ತನ್ನ ಗರ್ಭದಲ್ಲಿ ಧರಿಸಿರತಕ್ಕೆ ಸೀನು, ಕೇವಲ ಸಾಮಾನ್ಯಸಿಯಾದ ನನ್ನ ಗರ್ಭದಲ್ಲಿ ಅಡಗಿದೆಯಲ್ಲವೆ ? ಆಹಾ ! ನಿನ್ನ ಆಶ್ರಲೀಲೆಯನ್ನು ನಾನೇನೆಂದು ಹೇಳಲಿ !” ಎಂದಳು. ಆಗ ಭಗವಂತನು ದೇವಕಿಯನ್ನು ಕುರಿತು (“ಅಮ್ಮ ದೇವಕಿ ! ನಾನು ಯಾರೆಂಬುದನ್ನು ತಿಳಿಸುವುದಕ್ಕಾಗಿಯೇ ಈಗ ಈ ಸ್ವರೂಪವನ್ನು ನಿಮಗೆ ತೋರಿಸಬೇಕಾಯಿತು. ಆ ನನ್ನ ಸ್ವರೂಪವನ್ನು ಈಗ ನಿಮಗೆ ತಿಳಿಸಬೇ ಕಾದ ಕಾರಣವೇನೆಂದು ಕೇಳುವೆಯಾ? ನೀನು ಹಿಂದೆ ಸ್ವಾಯಂಭುವಮ ನ್ವಂತರದಲ್ಲಿ ತೃ ಯೆಂಬ ಮಹಾಪತಿವ್ರತೆಯಾಗಿದೆ. ಈ ನಿನ್ನ ಪತಿಯಾದ