ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೪. ದಶಮಸ್ಕಂಧವು ೧೫೭ ಧಾರಕನಾಥ ಜೀವನಿಗೆ ಆ ವಿಕಾರಗಳೊಂದೂ ಇರುವುದಿಲ್ಲ. ಆ ಜೀವನ, ಯಾವಾಗಲೂ ಒಂದೇ ಸ್ಥಿತಿಯಲ್ಲಿರುವನು. ಆದುದರಿಂದ ಜನನಮರಣಾದಿ ವಿಕಾರಗಳನ್ನು ಹೊಂದುವುದೇ ತನ್ನ ಸ್ವಭಾವವಾಗಿ ಉಳ್ಳ ದೇಹವನ್ನು ಕುರಿ ತಾಗಲಿ,ಒಂದೇ ಸಲೆಯಸ್ಥಿರತಕ್ಕ ಆತ್ಮವನ್ನು ಕುರಿತಾಗಲಿ ನಾವು ದುಃಖಿಸು ವುದಕ್ಕೆ ಕಾರಣವಿಲ್ಲ. ದೇಹಕ್ಕೂ, ಆತ್ಮಕ್ಕೂ ಇರುವ ಈ ಸ್ವರೂಪಭೇದವು ಮನಸ್ಸಿಗೆ ಚೆನ್ನಾಗಿ ತೋರಿಬರುವವರೆಗೆ, ಮನುಷ್ಯನಿಗೆ ದೇಹವೇ ಆತ್ಮವೆಂ ಬ ಭಾಂತಿಯೂ, ಆ ಭ್ರಾಂತಿಯಿಂದ ದೇಹದಲ್ಲಿ ತನ್ನ ದೆಂಬ ಅಭಿಮಾನವೂ, ಆ ಅಭಿಮಾನದಿಂದ ದುಃಖಮೋಹಾದಿಗಳೂ ಅನುಸರಿಸಿಬರುವುವು. ಈ ದೇಹಾತ್ಫಿ ..ನನ್ನ ಬಿಟ್ಟು ಹೋಗಿ, ಆತ್ಮ ತತ್ವಜ್ಞಾನವುಂಟಾಗುವವರೆಗೆ ದೇಹ ಸಂಯೋಗ ಪಿಯೋಗೆ ರೂಪವಾದ ಸಂಸಾರವೂ ಸೀಗಲಾರದು. ಓ ತಂಗೀ ? ನಿನ್ನ ಮಕ್ಕಳ ವಧಕ್ಕೆ ನಾನೇ ಕಾರಣನೆಂದೂ ತಿಳಿಯ ಬೇಡ ! ದೇಹಾತ್ಮಾಭಿಮಾನವಿದ್ದಾಗಲೇ ಈ ವಿಧವಾದ ಭಾವವುಂಟಾಗು ವುದು. ಈ ಲೋಕದಲ್ಲಿ ಕೊಲ್ಲತಕ್ಕವರಾರು ? ಕೊಲ್ಲಿಸಿಕೊಳ್ಳುವರಾರು ? ಅವರವರ ಕರವೇ ಅವರನ್ನು ಹಿಟ್ಟಿಸಿ ಕೊಲ್ಲುತ್ತಿರುವುದು ಆದುದರಿಂದ ಎಲೆಭದ್ರೆ! ಆ ನಿನ್ನ ಪತ್ರಗಾಗಿ ನೀನು ಚಿಂತಿಸಬೇಡ ! ಈ ಲೋಕದಲ್ಲಿ ಜೀವರಾಶಿಗಳು ಯಾವವಿಧದಲ್ಲಿಯೂ ಸ್ವತಂತ್ರವಲ್ಲ.ಅವರವರು ತಮ್ಮ ಪ್ರಾ ರಬ್ಬವನ್ನನುಸರಿಸಿಯೇ ಜನನಮರಣಗಳನ್ನು ಹೊಂದುವರು. ಲೋಕ ದಲ್ಲಿ ಆತ್ಮಸ್ವರೂಪವನ್ನು ಪಾಲೋಚಿಸುವರು, ಒಬ್ಬನು ಕೂo ದವರೆಂದೂ, ಮತ್ತೊಬ್ಬನು ಕೊಲ್ಲಿಸಿಕೊಂಡವನೆಂದೂ ಆತ್ಮನಲ್ಲಿ ದೇಹ ಧರ್ಮವನ್ನಾರೋಪಿಸುವರು. ಆ ಭ್ರಾಂತಿಯಿರುವವರೆಗೂ ದುಃಖ ಹಾದಿಗಳೂ ಅನುಸರಿಸಿ ಬರುವವು. ಆದುದರಿಂದ ನೀವು ಪತ್ರ ಕವನ್ನು ಮರೆತುಬಿಡಬೇಕು' ಪರಮಸಾಧುಗಳಾಗಿಯೂ, ಬಂಧುವತ್ಸಲ ರಾಗಿಯೂ ಇರುವ ನೀವು ನನ್ನ ಮಹಾಪರಾಧವನ್ನೂ ಕ್ರಮಿಸಬೇಕು ” ಎಂದು ಹೇಳಿ ಕಂಸನು, ಕಣ್ಣುಗಳಲ್ಲಿ ಧಾರೆಧಾರೆಯಾಗಿ ನೀರನ್ನು ಸುರಿ ಸುತ್ತ, ದೇವಕಿವಸುದೇವರ ಪಾದಗಳಮೇಲೆ ಬಿದ್ದು ಬಾರಿಬಾರಿಗೂ ಪ್ರಾರ್ಥಿಸಿಕೊಂಡನು. ಹಿಂದೆ ಯೋಗಮಾಯೆಯು ವ್ಯರವಾಗಿ ಅವರನ್ನು