ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩೦. ಶ್ರೀಮದ್ಭಾಗವತವು [ಆಜ್ಞಾ, ೪, ಹೊರತು ನಿನ್ನ ಮುಂದೆ ಸಾಗದು' ಮನೆಯಲ್ಲಿ ಹೆಂಗಸರಮುಂದೆ ಪಾಕ್ರ ಮವನ್ನು ಕೊಚ್ಚಿಕೊಳ್ಳತಕ್ಕ ಆ ದೇವತೆಗಳು ನಿನ್ನೊಡನೆ ಯುದ್ಧಕ್ಕೆ ಸಲ್ಲು ವುದೆಂದರೇನು ? ಸಾಮಾನ್ಯದೇವಕಿಗಳ ಮಾತ ಹಾಗಿರಲಿ ! ಕಸರ ಹೈಂಜ್ರಾಗಳೂ ನಿನ್ನ ಮುಂದೆ ನಿಲ್ಲಲಾರರು ! ವಿಷ್ಣುವು ನಿನ್ನ ಭಯದಿಂ ದಲ ಯಾರ ಕಣ್ಣಿಗೂ ಬೀಳದೆ ಏಕಾಂತಸ್ಥಳದಲ್ಲಿ ಸೇರುವನು. ಸಿನ ಪ ರಾಕ್ರಮದ ಮುಂದೆ ಇಂದ್ರನ ಪೀವು ಅತ್ಯಲ್ಪವಾಗಿರುವುದು. ಒಮ್ಮೆ ನಿನ್ನ ಭಯಕ್ಕಾಗಿಯೇ ಯುದ್ಧದಾಸೆಯನ್ನು ಬಿಟ್ಟು, ಪ್ರೋತ್ರಿಯನಂತೆ ಯಾವಾಗಲೂ ಕಷ್ಟವೇದವನ್ನು ಪಠಿಸುತ್ತ, ವೈಕವೇಷವನ್ನವಲಂಬಿಸಿ ರುವನು! ಹೀಗಿರುವಾಗ ಯಾವ ದೇವತೆಗಳಿಂದ ನಿನಗೆ ಯಾವ ಭಯವುಂಟು! ರಾಜೇಂದಾ ! ಹೀಗಿದ್ದರೂ ವಂಚಕರಾದ ಆ ದೇವತೆಗಳವಿಷಯದಲ್ಲಿ ನಾವು ಉದಾಸೀನರಾಗಿರಬಾರದು. ಆ ದೇವತೆಗಳು ನಮಗೆ ಆಜ ಷಿಗಳಾದುದರಿಂದ, ಆ ಶತ್ರುಶೇಷವನ್ನು ಅಪೇಕ್ಷಿಸಿ ಬಿಡುವುದು ಯುಕ್ತ ವಲ್ಲ! ಅವರನ್ನು ನಿರ್ಮೂಲಮಾಡುವವಿಷಯದಲ್ಲಿ ನಮಗೆ ಆಜ್ಞೆಯನ್ನು ಕೊಡು ! ನಾವು ಅವರನ್ನು ನೋಡಿಕೊಳ್ಳುವೆವು. ದೇಹದಲ್ಲಿ ಹುಟ್ಟಿದ ರೋಗವನ್ನು ಮೊಟ್ಟೆಯಲ್ಲಿಯೇ ಅಡಗಿಸದೆ ಉದಾಸೀನವಾಗಿ ಒಟ್ಟರೆ, ಅದು ದೇಹದಲ್ಲಿ ಚೆನ್ನಾಗಿ ಬೇರೂರಿ, ಎಂತಹ ಚಿಕಿತ್ಸೆಗೂ ಬಗ್ಗದೆ,ಮನನ್ನು ಕೊಲ್ಲುವುದು. ಯೋಗಿಗಳು ತಮ್ಮ ಇಂದ್ರಿಯವರ್ಗಗಳನ್ನು ಮೊದಲಿಂ ದಲೇ ನಿಗ್ರಹಿಸದೆ, ಅದರ ಪ್ರವರ್ತನೆಗೆ ಸ್ವಲ್ಪವಾಗಿ ಅವಕಾಶವನ್ನು ಕೊ ಟ್ಟರೆ, ಕಾಲಕ್ರಮದಿಂದ ಅದು ದುರ್ಜಯವಾಗುವುದು. ಅದರಂತೆಯೇ ನಾವೂ ಈಗ ಶತ್ರಶೇಷವನ್ನು ಅಲ್ಪ ವೆಂದು ಆಕ್ಷವಾಗಿ ಬಿಟ್ಟರೆ ಶತ್ರು ಗಳು ಬನಕ್ರಮದಿಂದ ಪ್ರಬಲಿಸಿ ದುರ್ಜಯರಾಗುವರು. ಆದುದರಿಂದ ಎಷ್ಟೆ ಅಲ್ಲವೆಂದು ತೋರಿದರೂ ಕುಶೇಷವನ್ನು ಆಗಾಗಲೇ ನಿಗ್ರಹಿ ಸಬೇಕು. ಆದುದರಿಂದ ಈಗ ನಾವು ಬೀದಿಯಲ್ಲಿ ತಿರುಗುವ ಯಾವಮಕ್ಕ ಇನ್ನೂ ಉದಾಸೀನವಾಗಿ ಬಿಡಬಾರದುಇದಲ್ಲದೆ ಸನಾತನಧಗಳಿಗೆ ಆಶ್ರಯಭೂತನಾದ ವಿಷ್ಣುವೇ, ದೇವತೆಗಳಿಗೆ ಮೂಲಾಧಾರದಂತಿರುವನು. ಅವನಿರತಕ್ಕ ಸ್ಥಳವು ನಮಗೆ ಪ್ರತ್ಯಕ್ಷವಾಗಿ ತಿಳಿಯದಿದ್ಧರೂ, ಅದನ್ನು