ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೧ ದಶಮಸ್ಕಂಧನು. ಅಧ್ಯಾ. ೪.] ಊಹಿಸಿ ಕಂಡುಕೊಳ್ಳಬಹುದು. ವೇದಗಳೂ, ಗೋಬ್ರಾಹ್ಮಣರೂ, ತಪ ಸ್ಕೂ, ಯಜ್ಞಯಾಗಾದಿಕರ್ಮಗಳೂ, ಅವನಿಗೆ ನಿವಾಸಸ್ಥಾನವಾಗಿರು ವುವು. ಆದುದರಿಂದ ನಾವು ಸ್ವಪ್ರಯತ್ನದಿಂದಲೂ ಅಲ್ಲಲ್ಲಿ ಹುಡುಕಿ, ಬ್ರಹ್ಮವಾದಿಗಳಾಗಿಯೂ, ತಪಸ್ವಿಗಳಾಗಿಯೂ, ಯಜ್ಞಶೀಲರಾಗಿಯೂ, ಇರುವ ಬ್ರಾಹ್ಮಣರನ್ನು ಸಿಕ್ಕಿದಕಡೆಯಲ್ಲಿ ಕೊಲ್ಲಬೇಕು! ಯಾಗಾಟಕರ್ಮಗ ಳಿಗೆ ಹವಿಸ್ಸನ್ನು ಒದಗಿಸಿಕೊಡತಕ್ಕ ಗೋವುಗಳನ್ನು ಕಂಡಕಂಡ ಕಡೆಯಲ್ಲಿ ಧ್ವಂಸಮಾಡಬೇಕು. ಬ್ರಾಹ್ಮಣರು, ಗೋವುಗಳು, ವೇದಗಳು, ತಪಸ್ಸು, ಸತ್ಯ, ಶಮ, ದಮ, ಶ್ರದ್ಧೆ, ದಯೆ, ತಿತಿಕ್ಷೆ, ಯಾಗಾಯಕರ್ಮಗಳು, ಇವೆಲ್ಲವೂ ಆ ವಿಷ್ಣುವಿನ ಶರೀರಗಳೆನಿಸಿಕೊಂಡಿರುವುವು. ಆ ವಿಷ್ಣುವೇ ಸಮಸ್ತದೇ ವತೆಗಳಿಗೂ ಅಧ್ಯಕ್ಷನಾಗಿದ್ದು, ನಮ್ಮಲ್ಲಿ ಬದ್ಧ ದ್ವೇಷವಲ್ಪ ಟ್ಟಿರುವನು ಅವ ನು ಸಮಸ್ತ ಪ್ರಾಣಿಗಳ ಹೃದಯಗುಹೆಯಲ್ಲಿಯೂ ಅಡಗಿರತಕ್ಕವನು. ಅವನನ್ನು ನಿಗ್ರಹಿಸಿದ ಸಮಸ್ಯದೆವತೆಗಳನ್ನೂ ನಿಗ್ರಹಿಸಿದಂತಾಗು ವುದು. ಆದುದರಿಂದ ಈಗ ನಾವು ಮಾಡಬೇಕಾದ ಉಪಾಯವೇನೆಂದರೆ, ತಪಸ್ವಿಗಳಾದ ರಷಿಗಳನ್ನು ಕಂಡಕಂಡಕಡೆಯಲ್ಲಿ ಯಾ ಬಾ ಇಲ್ಲದೆ ಕೊಲ್ಲುತ್ತ ಬರಬೇಕು. ಆಗ ವಿಷ್ಣುವಿನ ಸೊಕ್ಕು ಮುರಿಯುವುದು. ದೇವತೆಗಳ ಪ್ರಾಬಲ್ಯವೂ ಅಡಗಿಹೋಗುವುದು ” ಎಂದರು. ಓ ಪರೀಕ್ಷೆ ಬಜ್ ! ಕಂಸನ, ಚಪಬುದ್ಧಿಯುಳ್ಳವನಾದುದರಿಂದ, ಅವರ ದು ಬೋಧನೆಗೂ, ಮುಖಸ್ತುತಿಗೂ ಮರುಳಾಗಿ, ಅವರ ಮಾತಿನಂತೆ ಬಾ ಹಣವಧವೇ ತನಗೆ ಶ್ರೇಯಸ್ಕರವೆಂದು ನಿಶ್ಚಯಿಸಿಬಿಟ್ಟನು ಕಂಸನ ರಳಿಗೆ ಕಾಲಪಾಶವು ಸುತ್ತಿದ್ದುದುಂದಲೆ ಅವನ ಹಿಂಗ ವಿವೇಕಹೀನ ನಾಗಿ, ಪ್ರಾಣಿಹಿಂಸೆ ಯಲ್ಲಿ ವಿಶೇಷಪ್ರೀತಿಯುಳ್ಳವರಾಗಿಯೂ, ಮಾಯಾ ಬಲದಿಂದ ತಮತಮಗೆ ಇಷ್ಟಬಂದ ರೂಪವನ್ನು ಧರಿಸಬಲ್ಲವರಾಗಿ ಯೂ ಇರುವ ಕೆಲವು ದುಷ್ಯರಾಕ್ಷಸರನ್ನು ಕರೆದು, ಸಾಧುಗಳಾದ ಬ್ರಾಹ್ಮಣರನ್ನು ಹಿಂಸಿಸುವ ಕಾತ್ಯಕ್ಕಾಗಿಯೇ ನಾನಾದಿಕ್ಕಿಗೆ ಕಳುಹಿಸಿ, ತಾನು ತನ್ನ ಅರಮನೆಗೆ ಒಂದು ಸೇರಿದನು. ಇತ್ತಲಾಗಿ ಕಂಸನಿಂದ ಆ ಜ್ಞಪ್ತರಾದ ರಾಕ್ಷಸರೆಲ್ಲರೂ ಕೇವಲರಜಸ್ತಮೋಗುಣವುಳ್ಳವರಾದು 111 B.