ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩& ಶ್ರೀಮದ್ಭಾಗವತವು (ಅಧ್ಯಾ. . ಇವು ಜನಿಸಿದುದು, ನಿನ್ನ ಭಾಗ್ಯವಿಶೇಷವಲ್ಲದೆ ಬೇರೆಯಲ್ಲ! ಈ ಶುಭೋದಂತ ವನ್ನು ಕೇಳಿ ನಾವು ಬಹಳ ಸಂತೋಷಗೊಂಡೆವು. ಪುರುಷನು ತಾನೇ ಪುತ್ರರೂಪದಿಂದ ಹುಟ್ಟುವನು. ಸಂಸಾರಚಕ್ರದಲ್ಲಿ ಸುತ್ತುತ್ತಿರುವವನಿಗೆ, ಇದೊಂದು ದೊಡ್ಡಭಾಗ್ಯವಿಶೇಷವ'ನಾನು ಕಂಸನ ಬಾಧೆಯಿಂದ ತಪ್ಪಿ ಪನ ರ್ಜೀವಹೊಂದಿದಂತೆ ಬದುಕಿಬಂದು ನನ್ನ ಭಾಗ್ಯವೂ! ಈಗ ನಾನು ನಿನ್ನನ್ನು ನೋಡುವಂತಾದುದೂ ದೊಡ್ಡಭಾಗ್ಯಏಕೆಷವೇ : ನದಿ ಪ್ರವಾಹ ದಲ್ಲಿ ನಾನಾ ವಿಧಗತಿಯಿಂದ ಕೊಚ್ಚಿ ಕೊಂಡು ಹೋಗುತ್ತಿರುವ ವಸ್ತು ಗಳು, ಒಂದು ಕಡೆಯಲ್ಲಿ ಸೇರಿ ನೆಲೆಯಾಗಿ ನಿಲ್ಲುವುದು ಹೇಗೆ ದುರ್ಲಭವೋ. ಅದರಂತೆಯೇ ಸಂಸಾರವೆಂಬ ಮಹಾಪ್ರವಾಹದಲ್ಲಿ, ಅವರವರ ಕರಗತಿಗೆ ತಕ್ಕಂತೆ ಚದುಹೋಗುತ್ತಿರುವ ಬಂಧುಮಿತ್ರಾಹಿಗಳು, ತಿರುಗಿ ಒಂದಾ ಗಿ ಸೇರಿ ಕೂಡಾಡುವದೂ ಎಷ್ಟೊದುರ್ಲಭವು! ಮಹಾ ಭಾಗ್ಯವಿಶೇಷದಿಂ ದಲ್ಲದೆ ಇಂತಹ ಪ್ರಿಯಸಮಾಗಮವೂ ಲಭಿಸಲಾರದು. ನೀನು ನಿನ್ನ ಬಂಧು ಮಿತ್ರರೊಡನೆ ವಾಸಮಾಡತಕ್ಕ ಆ ಮಹಾವನಪ್ರದೇಶವೆಲ್ಲವೂ ಸುಭಿಕ ವಾಗಿರುವುದಷ್ಟೆ? ಅಲ್ಲಿ ಪಶುಗಳಿಗೆ ಬೇಕಾದ ಹುಲ್ಲು ಕಡಿಗಳಿಗೂ, ನೀರಿಗೂ ಏನೂ ಕೊರತೆಯಿಲ್ಲವಷ್ಟೆ?ನಿನ್ನ ಮಂದೆಯಲ್ಲಿ ರೋಗಾದ್ಯುಪದ್ರ ವಗಳೇನೂ ಇಲ್ಲದೆ ಗೋಧನವೆಲ್ಲವೂ ಕ್ಷೇಮದಿಂದಿರುವುದಷ್ಟೆ ? ಅಣ್ಣಾ! ನನ್ನ ಮಗನಾದ ಬಲರಾಮನು ತಾಯಿಯೊಡನೆ ನಿನ್ನ ಮನೆಯಲ್ಲಿ ಸುಖ ವಾಗಿರುವನು ? ಅವನು ನಿನ್ನನ್ನೇ ತಂದೆಯೆಂದು ಭಾವಿಸಿ, ನಿನ್ನ ಮನೆ. ನುವರ್ತಿಯಾಗಿರುವನಷ್ಟೆ ? ಲೋಕದಲ್ಲಿ ಯಾವಪುರುಷನು ತನ್ನ ದೇಹಾನುಬಂಧಿಗಳೊಡನೆ ಸೇರಿಯೇ ಧರಾರ್ಥಕಾಮಗಳೆಂಬ ಪುರುಷಾ ರಗಳನ್ನನುಭವಿಸುವನೋ, ಅವನಿಗಮಾತ್ರವೇ ಅವು ಯುಕ್ತವಾ ಗಿಯೂ, ಶಾಸ್ತ್ರ ಸಮ್ಮತವಾಗಿಯೂ ಅಗುವುವು ಹಾಗಿಲ್ಲದೆ ಅವನು ಆ ಪುರುಷಾರಗಳನ್ನು ತಾನುಮಾತ್ರವೇ ಅನುಭವಿಸುತ್ತಿದ್ದು, ಅವನ ಬಂಧುಗಳೆಲ್ಲರೂ ಅದರ ಸುಖವನ್ನು ಕಾಣದೆ ದೀನದಶೆಯಿಂದ ಚಿಂತಿಸುತಿ ದ್ದರೆ, ಅಂತವನಿಗೆ ಆ ಮೂರುಪುರುಷಾರಗಳೂ ನಿಷ್ಟ್ರಯೋಜನಗಳಂ ದೇ ಎಣಿಸಬೇಕು. ಈಗ ನನ್ನ ಸ್ಥಿತಿಯೂ ಹಾಗೆಯೇ ಇರುವುದು.” ಎಂದ